ವೆಲ್ಲೋರ (ತಮಿಳುನಾಡು) ನಲ್ಲಿ ಕ್ರೈಸ್ತ ಮಿಶನರಿ ಆಸ್ಪತ್ರೆಗಳ ‘ಸಮಾಜಸೇವೆ !’

ಮಕ್ಕಳ ಮೇಲಿನ ಉಚಿತ ಉಪಚಾರಕ್ಕಾಗಿ ತಂದೆಗೆ ಕ್ರೈಸ್ತ ಧರ್ಮವನ್ನು ಸ್ವೀಕರಿಸಲು ಹೇಳಲಾಯಿತು !

* ಕ್ರೈಸ್ತ ಮಿಶನರಿಗಳು ಸಮಾಜಸೇವೆಯ ಹೆಸರಿನಲ್ಲಿ ಹಿಂದೂಗಳ ಮತಾಂತರ ಮಾಡುತ್ತಾರೆ, ಇದರಿಂದ ಇದೇ ಅಂಶವು ಇನ್ನೊಮ್ಮೆ ಸ್ಪಷ್ಟವಾಗುತ್ತದೆ ! ಇಂತಹವರ ವಿರುದ್ಧ ಅಪರಾಧವನ್ನು ದಾಖಲಿಸಿ ಸಂಬಂಧಿತರನ್ನು ಜೈಲಿಗೆ ಅಟ್ಟಬೇಕು ! ಇಂತಹ ಘಟನೆಗಳ ಬಗ್ಗೆ ಜಾತ್ಯಾತೀತವಾದಿಗಳು ಹಾಗೂ ಪುರೋ(ಅಧೋ)ಗಾಮಿಗಳು ಯಾವಾಗಲೂ ಬಾಯಿ ತೆರೆಯುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !

* ತಮಿಳುನಾಡಿನ ಕ್ರೈಸ್ತರನ್ನು ಓಲೈಸುವ ಸ್ಟಾಲಿನ ಸರಕಾರವು ಸಂಬಂಧಿತ ಆಸ್ಪತ್ರೆಯ ಮೇಲೆ ಯಾವುದೇ ಕಾರ್ಯಾಚರಣೆಯನ್ನು ಮಾಡುವುದಿಲ್ಲ, ಎಂಬುದನ್ನು ಅರಿಯಿರಿ ! ಇದಕ್ಕಾಗಿ ಈಗ ಹಿಂದೂಗಳೇ ಸಂಘಟಿತರಾಗಿ ಸರಕಾರಕ್ಕೆ ಕಾರ್ಯಾಚರಣೆ ಮಾಡಲು ಬೆಂಬತ್ತಬೇಕು !

ಬೆಂಗಳೂರು (ಕರ್ನಾಟಕ) – ಕರ್ನಾಟಕದಲ್ಲಿನ ಬಸವನಾ ಬಾಗೇವಾಡಿಯಲ್ಲಿನ ಈರಣ್ಣಾ ನಾಗೂರರವರು ತಮ್ಮ ಮಗನ ಉಪಚಾರಕ್ಕಾಗಿ ವೆಲ್ಲೋರಿನ ಕ್ರೈಸ್ತ ಮಿಶನರಿಗಳ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಅಲ್ಲಿ ಅವರಿಗೆ ಮಗನ ಉಚಿತ ಚಿಕಿತ್ಸೆಗಾಗಿ ಅನೇಕ ಷರತ್ತುಗಳನ್ನು ಹೇರಲಾಯಿತು. ಇದರಲ್ಲಿ ಈರಣ್ಣಾರವರಿಗೆ ಕ್ರೈಸ್ತ ಧರ್ಮವನ್ನು ಸ್ವೀಕರಿಸಲು ಮತ್ತು ಚರ್ಚಿನಲ್ಲಿ ಕಡಿಮೆ ಅಂದರೆ ೨ ತಿಂಗಳು ಪ್ರಾರ್ಥನೆ ಮಾಡಲು ಹೇಳಿರುವ ವಾರ್ತೆಯು ‘ನ್ಯೂ ಇಂಡಿಯನ್‌ ಎಕ್ಸಪ್ರೆಸ್‌’ ಪ್ರಕಟಿಸಿದೆ. ಈರಣ್ಣಾರವರು ಮಗನ ಉಪಚಾರಕ್ಕಾಗಿ ಆಗಲೇ ೩ ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದರು. ಅವರ ಬಳಿ ಇನ್ನೂ ಖರ್ಚು ಮಾಡಲು ಹಣ ಇರಲಿಲ್ಲ. ಅವರಿಗೆ ಪ್ರತಿ ತಿಂಗಳು ೧೨ ಸಾವಿರ ರೂಪಾಯಿ ದೊರೆಯುತ್ತದೆ; ಆದರೆ ಅವರ ಸುಮಾರು ಅರ್ಧದಷ್ಟು ಉತ್ಪನ್ನವು ಮಗನ ವೈದ್ಯಕೀಯ ಉಪಚಾರಕ್ಕಾಗಿ ಖರ್ಚಾಗುತ್ತದೆ. ಅವರ ಇದೇ ಪರಿಸ್ಥಿತಿಯ ದುರುಪಯೋಗವನ್ನು ಮಿಶನರಿ ಆಸ್ಪತ್ರೆಯು ಪಡೆಯಿತು.


ಈರಣ್ಣಾರವರು ಹೇಳುವಂತೆ, ‘ನಾನು ಏಸುವನ್ನು ಸ್ವೀಕರಿಸಲು ನಿರ್ಧರಿಸಿದ್ದೇನೆ; ಏಕೆಂದರೆ ಆಸ್ಪತ್ರೆಯ ಅಧಿಕಾರಿಗಳು ನನ್ನ ಮಗನ ಎಲ್ಲ ವೈದ್ಯಕೀಯ ಖರ್ಚನ್ನು ಭರಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಅದೇ ಸಮಯದಲ್ಲಿ ಕರ್ನಾಟಕದಲ್ಲಿನ ವಿಜಯಪುರ ಜಿಲ್ಲೆಯಲ್ಲಿನ ‘ಬಿ. ಎಲ್‌. ಡಿ. ಇ. ಅಸೋಸಿಯೇಶನ್‌’ ಮಗನ ಚಿಕಿತ್ಸೆಗಾಗಿ ಸಹಾಯ ಮಾಡಿದೆ. ಅವರ ಈ ಸಹಾಯದಿಂದಾಗಿ ಈರಣ್ಣಾ ಮತ್ತು ಅವರ ಕುಟುಂಬವು ಕ್ರೈಸ್ತ ಧರ್ಮವನ್ನು ಸ್ವೀಕರಿಸುವುದರಿಂದ ಉಳಿದರು.