* ಈಗ ಈ ವಿಷಯದ ಮೇಲೆ ಪ್ರಗತಿ(ಅಧೋ)ಪರರು ಆಕಾಶ-ಪಾತಾಳ ಒಂದು ಮಾಡಿದರೆ ಆಶ್ಚರ್ಯ ಪಡಬೇಕಾಗಿಲ್ಲ !- ಸಂಪಾದಕರು * ಈಗ ಈ ಕ್ರಮದ ವಿರುದ್ಧ ಧ್ವನಿಯೆತ್ತುವವರು ಈ ಮತಾಂಧ ವಿದ್ಯಾರ್ಥಿನಿಯರು ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ ಹಾಕದಿರುವ ವಿಷಯದಲ್ಲಿ ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವ ಬಗ್ಗೆ ಚಕಾರವನ್ನೂ ಎತ್ತುವುದಿಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು !- ಸಂಪಾದಕರು |
ಬೆಂಗಳೂರು – ಹಿಜಾಬ ಧರಿಸಿದ್ದ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಿದ ಗದಗ ಜಿಲ್ಲೆಯ 7 ಶಿಕ್ಷಕರನ್ನು ಅಮಾನತ್ತುಗೊಳಿಸಲಾಗಿದೆ. ಎಸ್.ಯು. ಹೊಕ್ಕಳದ, ಎಸ್.ಎಂ. ಪತ್ತರ, ಎಸ್.ಜಿ. ಗೋಡಕೆ, ಎಸ್.ಎಸ್.ಗುಜಾಮಗಡಿ, ವಿ.ಎನ್. ಕಿವೂದಾರ, ಕೆ.ಬಿ. ಭಜಂತ್ರಿ ಮತ್ತು ಬಿ.ಎಸ್. ಹೊನಾಗುಡಿ ಹೀಗೆ ಶೀಕ್ಷಕರ ಹೆಸರುಗಳಿವೆ. ಅವರ ವಿರುದ್ಧ ತನಿಖೆ ನಡೆಸಲು ಆದೇಶಿಸಲಾಗಿದೆ. ಈ ಘಟನೆ ಮಾರ್ಚ್ 28ರಂದು ನಡೆದಿದ್ದು, ಅದರ ವಿಡಿಯೊ ಪ್ರಸಾರವಾದ ಬಳಿಕ ಸಂಬಂಧಿಸಿದ ಶಿಕ್ಷಕರ ಮೇಲೆ ಕ್ರಮ ಜರುಗಿಸಲಾಯಿತು. ಹಿಂದುತ್ವನಿಷ್ಠ ಸಂಘಟನೆಯಾದ ಶ್ರೀರಾಮಸೇನೆ ಈ ಶಿಕ್ಷಕರ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿತ್ತು.
ಹಿಜಾಬ್ಗೆ ಅವಕಾಶ ಮಾಡಿಕೊಟ್ಟ ಏಳು ಶಿಕ್ಷಕರ ಅಮಾನತು#Karnatakanews #HijabRow #gadag #SSLCExam https://t.co/x3Y1rfCPUh
— Asianet Suvarna News (@AsianetNewsSN) March 30, 2022
ಈ ಘಟನೆಯ ಸಂದರ್ಭದಲ್ಲಿ ರಾಜ್ಯದ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಇವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, ಸರಕಾರವು ಉಚ್ಚ ನ್ಯಾಯಾಲಯದ ಅಧಿನಿಯಮ ಮತ್ತು ನಿರ್ಣಯಕ್ಕನುಗುಣವಾಗಿ ರಾಜ್ಯದ ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ಹಿಜಾಬ ಕುರಿತು ನಿರ್ದೇಶನವನ್ನು ಕಳುಹಿಸಿದೆ. ಯಾವ ಸರಕಾರಿ ನೌಕರನು ಈ ಆದೇಶವನ್ನು ಪಾಲಿಸುವುದಿಲ್ಲವೋ, ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿತ್ತು. ಇದರಿಂದ ಈ ಶಿಕ್ಷಕರ ಮೇಲೆ ಕ್ರಮ ಜರುಗಿಸಲಾಗಿದೆ ಎಂದು ಹೇಳಿದರು.
ಉಡುಪಿ ಜಿಲ್ಲೆಯ 40 ಮತಾಂಧ ವಿದ್ಯಾರ್ಥಿನಿಯರಿಂದ ಪರೀಕ್ಷೆಗೆ ಬಹಿಷ್ಕಾರ !
ಶ್ರದ್ಧಾವಂತ ಹಿಂದೂಗಳಿಗೆ `ಹಿಂದುಳಿದವರೆಂದು’ ಸಂಬೋಧಿಸಿ ಅವರ ವಿರುದ್ಧ ಹರಿಹಾಯುವ ಪ್ರಗತಿ(ಅಧೋ)ಪರರು, ಕಾಂಗ್ರೆಸ್ಸಿಗರು ಮತ್ತು ಹಿಂದೂದ್ವೇಷಿ ಪ್ರಸಾರಮಾಧ್ಯಮಗಳು ಹಿಜಾಬ ಪ್ರಕರಣದಲ್ಲಿ ಮಾತ್ರ ಮತಾಂಧ ವಿದ್ಯಾರ್ಥಿನಿಯರ ಪರವಾಗಿ ಮಾತನಾಡುತ್ತಾರೆ, ಎನ್ನುವುದನ್ನು ಗಮನಿಸಬೇಕು ! ಹಿಜಾಬಗಾಗಿ ಪರೀಕ್ಷೆಯನ್ನು ಬಹಿಷ್ಕರಿಸುವುದು, ಇದು ಅವರಿಗೆ ಹಿಂದುಳಿದವರಂತೆ ಎನಿಸುವುದಿಲ್ಲವೇ ?- ಸಂಪಾದಕರು
ಇನ್ನೊಂದೆಡೆ ಉಡುಪಿ ಜಿಲ್ಲೆಯ 40 ಮತಾಂಧ ವಿದ್ಯಾರ್ಥಿಯರು ಹಿಜಾಬ ಧರಿಸಲು ತಡೆದಿದ್ದರಿಂದ ಅವರು ಮಾರ್ಚ 29 ರಂದು 12 ನೇ ತರಗತಿಯ ಪರೀಕ್ಷೆಯನ್ನು ಬರೆಯದಿರಲು ನಿರ್ಧರಿಸಿದರು. ಇದರಲ್ಲಿ ಕುಂದಾಪೂರದ 24 ವಿದ್ಯಾರ್ಥಿನಿಯರು, ಬೈಂದೂರಿನ 14 ಮತ್ತು `ಉಡುಪಿಯ ಸರಕಾರಿ ಕನ್ಯಾ ಪಿಯು ಕಾಲೇಜಿನ’ 2 ವಿದ್ಯಾರ್ಥಿನಿಯರು ಸೇರಿದ್ದಾರೆ. ಉಚ್ಚ ನ್ಯಾಯಾಲಯವು ಎರಡು ವಾರಗಳ ಹಿಂದೆ ತೀರ್ಪು ನೀಡುವಾಗ, `ಹಿಜಾಬ’ ಮುಸ್ಲಿಮರಿಗೆ ಅನಿವಾರ್ಯ ಪದ್ಧತಿಯಾಗಿರುವುದಿಲ್ಲ, ಕಾರಣ, ಶೈಕ್ಷಣಿಕ ಸಂಸ್ಥೆಗಳಲ್ಲಿ ಧರಿಸಲು ನಿರ್ಭಂದ ಶಾಶ್ವತವಾಗಿರಲಿದೆಯೆಂದು ತಿಳಿಸಲಾಗಿತ್ತು.
ಬಾಗಲಕೋಟೆ ಜಿಲ್ಲೆಯಲ್ಲಿಯೂ ಕೆಲವು ಮತಾಂಧ ವಿದ್ಯಾರ್ಥಿನಿಯರಿಂದ ಪರೀಕ್ಷೆಗೆ ಬಹಿಷ್ಕಾರ !
ಇದೇ ರೀತಿ ಬಾಗಲಕೋಟೆ ಜಿಲ್ಲೆಯ ಇಳಕಳ ಪ್ರದೇಶದ ಹಿಜಾಬ ಧರಿಸಿದ್ಧ ಕೆಲವು ಮತಾಂಧ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ ಬಳಿಕ ಅವರೂ ಕೂಡ ಪರೀಕ್ಷೆಗಿಂತ ಹಿಜಾಬಗೆ ಪ್ರಾಮುಖ್ಯತೆಯನ್ನು ನೀಡುತ್ತಾ ಪರೀಕ್ಷೆಯನ್ನು ಬಹಿಷ್ಕರಿಸಿದರು.
ಒಬ್ಬ ಹಿಜಾಬಪ್ರೇಮಿ ಶಿಕ್ಷಕಿಯೂ ಅಮಾನತ್ತು !
ಬೆಂಗಳೂರಿನಲ್ಲಿ ಮಾರ್ಚ್ 28 ರಂದು 10ನೇ ತರಗತಿಯ ಬೋರ್ಡ ಪರೀಕ್ಷೆಗಾಗಿ ಹೋಗಿದ್ದ ಮತ್ತು ಹಿಜಾಬ ಧರಿಸಿದ್ದ ನೂರ ಫಾತಿಮಾ ಹೆಸರಿನ ಶಿಕ್ಚಕಿಯನ್ನು ಅಮಾನತ್ತುಗೊಳಿಸಿರುವ ಘಟನೆ ಇತ್ತೀಚೆಗಷ್ಟೇ ಜರುಗಿತು.
ಹೆಚ್ಚಿನ ಮುಸಲ್ಮಾನ ವಿದ್ಯಾರ್ಥಿನಿಯರಿಂದ ಹಿಜಾಬಗಿಂತ ಪರೀಕ್ಷೆಗೆ ಪ್ರಾಮುಖ್ಯತೆ !
ಈ ಕೆಲವು ಘಟನೆಗಳನ್ನು ಹೊರತುಪಡಿಸಿದರೆ ಹೆಚ್ಚಿನ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬಗಿಂತ ಪರೀಕ್ಷೆಗೆ ಪ್ರಾಮುಖ್ಯತೆ ನೀಡಿದರು. (ಹೆಚ್ಚಿನ ಮುಸಲ್ಮಾನ ವಿದ್ಯಾರ್ಥಿನಿಯರು ಪರೀಕ್ಷೆಗೆ ಪ್ರಾಮುಖ್ಯತೆ ನೀಡಿರುವುದನ್ನು ಗಮನಿಸಿದರೆ, ಹಿಜಾಬ ಪ್ರಕರಣದ ಗುಮಾನವನ್ನು ಹರಡುತ್ತಿರುವುದು ಕಂಡುಬರುತ್ತದೆ | – ಸಂಪಾದಕರು)