ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಹೇಳಿಕೆ
* ಹಿಂದೂ ಜನಜಾಗೃತಿ ಸಮಿತಿ ಸಹಿತ ಇತರ ಹಿಂದುತ್ವನಿಷ್ಠರು `ಹಲಾಲ್’ ವಿಷಯದಲ್ಲಿ ಆಗಾಗ ಜನಜಾಗೃತಿ ಮೂಡಿಸಿದೆ. ಆಗಲೇ ಸರಕಾರ ಈ ಬಗ್ಗೆ ಇಷ್ಟು ಆಳವಾದ ವಿಚಾರಣೆ ನಡೆಸಿದಿದ್ದರೆ ಇಂತಹ ವಿಷಯಗಳು ತಲೆ ಎತ್ತುತ್ತಿರಲಿಲ್ಲ ! ಈಗಲಾದರೂ ಸರಕಾರವು ವಿಚಾರಣೆಯನ್ನು ನಡೆಸಿ ಸತ್ಯವನ್ನು ಜನರ ಮುಂದೆ ತರಬೇಕೆಂಬುದು ಹಿಂದೂಗಳ ಅಪೇಕ್ಷೆಯಾಗಿದೆ !- ಸಂಪಾದಕರು
ಬೆಂಗಳೂರು – ಹಲಾಲ್ ಮಾಂಸವು `ಆರ್ಥಿಕ ಜಿಹಾದ್’ ಆಗಿದೆ. ಇದರರ್ಥ ಮುಸ್ಲಿಮರು ಇತರರೊಂದಿಗೆ ವ್ಯಾಪಾರ ಮಾಡಬಾರದು. ಆದ್ದರಿಂದಲೇ ಇದನ್ನು `ಜಿಹಾದ್’ ಆಗಿ ಬಳಸಿಕೊಳ್ಳಲಾಗುತ್ತಿದೆ. ಅದನ್ನು ಹೇರಲಾಗಿದೆ. `ಹಲಾಲ್ ಮಾಂಸವನ್ನೇ ಬಳಸಬೇಕು’ ಎಂದು ಅವರಿಗೆ ಅನಿಸುತ್ತಿರುದಾಗ, ಅದನ್ನು `ಬಳಸಬೇಡಿ’ ಎಂದು ಹೇಳುವುದರಲ್ಲಿ ತಪ್ಪೇನಿದೆ ? ಎಂದು ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಇವರು ಹಲಾಲ್ ಮಾಂಸದ ಕುರಿತು ಪ್ರಶ್ನಿಸಿದರು. ಕರ್ನಾಟಕದಲ್ಲಿ ಹಿಜಾಬ್ ನಂತರ ಹಲಾಲ್ ಮಾಂಸದ ಬಗ್ಗೆ ವಿವಾದ ಆರಂಭವಾಗಿದೆ. ಅದಕ್ಕೆ ಪ್ರತಿಕ್ರಿಯಿಸುತ್ತಾ ರವಿ ಮಾತನಾಡುತ್ತಿದ್ದರು.
‘ಹಲಾಲ್ ಆರ್ಥಿಕ ಜಿಹಾದ್’: ಅದನ್ನು ಬಹಿಷ್ಕರಿಸುವ ಹಕ್ಕು ನಮಗಿದೆ – ಸಿ.ಟಿ ರವಿ https://t.co/PGyLykNbAc via @KannadaPrabha @BJP4Karnataka @CTRavi_BJP #Halal #Muslim
— kannadaprabha (@KannadaPrabha) March 29, 2022
ಮುಸ್ಲಿಮರು ಹಿಂದೂಗಳಿಂದ ಮಾಂಸವನ್ನು ಖರೀದಿಸಲು ನಿರಾಕರಿಸಿದರೆ, ಹಿಂದೂಗಳು ಮುಸ್ಲಿಮರಿಂದ ಮಾಂಸವನ್ನು ಏಕೆ ಖರೀದಿಸಬೇಕು ?
ಸಿ.ಟಿ. ರವಿ ತಮ್ಮ ಮಾತನ್ನು ಮುಂದುವರೆಸುತ್ತಾ, ಹಲಾಲ್ ಮಾಂಸವನ್ನು ಅವರ (ಮುಸ್ಲಿಂ) ದೇವರಿಗೆ ಅರ್ಪಿಸಲಾಗುತ್ತದೆ. ಹೀಗಿರುವಾಗ ಹಿಂದೂಗಳಿಗೆ ಈ ಮಾಂಸ ಬೇರೊಬ್ಬರಿಂದ ಉಳಿದಿರುವ ಆಹಾರದಂತೆ ಆಗುತ್ತದೆ. ಮುಸ್ಲಿಮರು ಹಿಂದೂಗಳಿಂದ ಮಾಂಸವನ್ನು ಖರೀದಿಸಲು ನಿರಾಕರಿಸುವಾಗ, ನೀವು ಹಿಂದೂಗಳಿಗೆ ಮುಸ್ಲಿಮರಿಂದ ಮಾಂಸವನ್ನು ಖರೀದಿಸಲು ಏಕೆ ಹೇಳುತ್ತೀರಿ ? ಈ ವ್ಯವಹಾರವು ಏಕಪಕ್ಷೀಯವಲ್ಲ ಆದರೆ ಎರಡೂ ಕಡೆಗಳಲ್ಲಿ ನಡೆಯುತ್ತದೆ. ಮುಸ್ಲಿಮೇತರರು ಹಲಾಲ್ ಮಾಂಸವನ್ನು ತಿನ್ನಲು ಸಿದ್ಧರಿದ್ದರೆ, ಮಾತ್ರ ಹಿಂದೂಗಳು ಹಲಾಲ್ ಮಾಂಸವನ್ನು ತೆಗೆದುಕೊಳ್ಳುತ್ತಾರೆ, ಎಂದರು.
ನಾವು ಪೂರ್ಣ ಅಧ್ಯಯನ ಮಾಡಬೇಕಾಗಿದೆ ! – ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಈ ವಿಷಯ ಈಗಷ್ಟೇ ಶುರುವಾಗಿದೆ. ನಮಗೆ ಸಂಪೂರ್ಣ ಅಧ್ಯಯನ ಮಾಡಬೇಕಾಗಿದೆ; ಏಕೆಂದರೆ ಯಾವುದೇ ನಿಯಮಗಳಿಗೂ ಇದಕ್ಕೂ ಸಂಬಂಧವಿಲ್ಲ. ಯುಗಾದಿಯ ನಂತರ ಮಾಂಸಾಹಾರವನ್ನು ತಿನ್ನುವುದು ಒಂದು ಪದ್ಧತಿಯಾಗಿದೆ. ಇದೀಗ ಅವರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ನಾವು ಈ ಬಗ್ಗೆಯೂ ನೋಡುತ್ತೇವೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಮುಖ್ಯಮಂತ್ರಿ ಬೊಮ್ಮಾಯಿಯವರು ತಮ್ಮ ಮಾತನ್ನು ಮುಂದುವರೆಸುತ್ತಾ, “ನಾವು ನಮ್ಮ ನಿಲುವನ್ನು ನಂತರ ತಿಳಿಸುತ್ತೇವೆ. ವಿವಿಧ ಸಂಘಟನೆಗಳು ತಮ್ಮದೇ ಆದ ಪ್ರಚಾರ ಕೈಗೊಳ್ಳಲಿವೆ. ಯಾವುದಕ್ಕೆ ಪ್ರತಿಕ್ರಿಯಿಸಬೇಕು ಮತ್ತು ಯಾವುದಕ್ಕೆ ಪ್ರತಿಕ್ರಿಯಿಸಬಾರದು ಎಂಬುದು ನಮಗೆ ತಿಳಿದಿದೆ. ಅಗತ್ಯವಿರುವಲ್ಲಿ ನಾವು ಪ್ರತಿಕ್ರಿಯಿಸುತ್ತೇವೆ” ಎಂದು ಹೇಳಿದರು.
ರಾಜ್ಯದಲ್ಲಿ ಹದಗೆಡುತ್ತಿರುವ ವಾತಾವರಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಬೊಮ್ಮಾಯಿಯವರು, “ಇಂತಹ ಅಂಶಗಳಿಂದಲೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಸೌಹಾರ್ದಯುತ ವಾತಾವರಣ ಹದಗೆಡದೇ ಇರುವುದನ್ನು ನೋಡಿದ್ದೇನೆ. ಭವಿಷ್ಯದಲ್ಲಿ ನಾವು ಇದನ್ನು ನೋಡಿಕೊಳ್ಳುತ್ತೇವೆ ಎಂದು ಹೇಳಿದರು.
`ಹಿಂದೂ ಯುವಕರು ರಾಜ್ಯದ ವಾತಾವರಣವನ್ನು ಹಾಳು ಮಾಡಬಾರದು !’ (ಅಂತೆ) – ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ
ಹಿಜಾಬ್ ಪ್ರಕರಣದಲ್ಲಿ ಕುಮಾರಸ್ವಾಮಿ ಹೀಗೆ ಮನವಿ ಮಾಡಿದ್ದು ಕೇಳಿಲ್ಲ !
ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಜನತಾ ದಳ (ಜಾತ್ಯತೀತ) ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿಯವರು ಹಲಾಲ್ ಮಾಂಸದ ವಿಚಾರವನ್ನು ಖಂಡಿಸಿದ್ದಾರೆ. ಕುಮಾರಸ್ವಾಮಿಯವರು, ಈ ರಾಜ್ಯವನ್ನು ಎಲ್ಲಿಗೆ ಕೊಂಡೊಯ್ಯುತ್ತೀರಿ ಎಂದು ನಾನು ಸರಕಾರವನ್ನು ಕೇಳಲು ಬಯಸುತ್ತೇನೆ. ನಾನು ಹಿಂದೂ ಯುವಕರಲ್ಲಿ ರಾಜ್ಯದ ವಾತಾವರಣವನ್ನು ಹಾಳು ಮಾಡದಂತೆ ಅವರಲ್ಲಿ ಕೈ ಮುಗಿದು ವಿನಂತಿಸುತ್ತೇನೆ ಎಂದು ಹೇಳಿದರು.
ಮತ್ತೊಂದೆಡೆ ರಾಜ್ಯದ 61 ಪ್ರಗತಿಪರ ಚಿಂತಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಕೋಮುದ್ವೇಷ ನಿಲ್ಲಿಸುವಂತೆ ಕರೆ ನೀಡಿದ್ದಾರೆ. `ರಾಜ್ಯದಲ್ಲಿ ಉದ್ದೇಶಪೂರ್ವಕವಾಗಿ ಕೋಮುದ್ವೇಷ ಸೃಷ್ಟಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ’, ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಏನಿದು ಇಡೀ ಪ್ರಕರಣ? `ಯುಗಾದಿ’ ಹಬ್ಬದ ನಂತರ `ಹಲಾಲ್ ಮಾಂಸವನ್ನು ತೆಗೆದುಕೊಳ್ಳದಂತೆ’ ಕರ್ನಾಟಕದ ಹಿಂದುತ್ವನಿಷ್ಠ ಸಂಘಟನೆಗಳು ಮನವಿ ಮಾಡಿವೆ. `ಯುಗಾದಿ’ಯ ಮರುದಿನ ಹಿಂದೂಗಳು ದೇವರಿಗೆ ಮಾಂಸವನ್ನು ಅರ್ಪಿಸಿ ಹೊಸ ವರ್ಷವನ್ನು ಆಚರಿಸುತ್ತಾರೆ. |
`ಹಲಾಲ್’ ಮಾಂಸ ಎಂದರೇನು? ಹಲಾಲ್ ಮಾಂಸವನ್ನು ಪಡೆಯಲು, ಪ್ರಾಣಿಗಳ ಮುಖವನ್ನು ಮಕ್ಕಾದ ದಿಕ್ಕಿನಲ್ಲಿ ಮಾಡಿ ಗಂಟಲಿನ ರಕ್ತನಾಳವನ್ನು ಕತ್ತರಿಸಲಾಗುತ್ತದೆ ಮತ್ತು ಪ್ರಾಣಿಯನ್ನು ಹಾಗೆ ಬಿಡುತ್ತಾರೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ರಕ್ತ ಹರಿಯುತ್ತದೆ ಮತ್ತು ನಂತರ ಪ್ರಾಣಿ ನರಳಿ ಸಾಯುತ್ತದೆ. |
* ಜಟ್ಕಾ ಮಾಂಸ ಎಂದರೇನು?
ಹಿಂದೂ, ಸಿಕ್ಕ್ ಮತ್ತು ಇತರ ಭಾರತೀಯ ಧರ್ಮಗಳಲ್ಲಿ, ಪ್ರಾಣಿಗಳನ್ನು `ಝಟ್ಕಾ’ ವಿಧಾನದಿಂದ ಕೊಲ್ಲಲಾಗುತ್ತದೆ. ಇದರಲ್ಲಿ ಪ್ರಾಣಿಗಳ ಕುತ್ತಿಗೆಯನ್ನು ಒಂದೇ ಹೊಡೆತದಲ್ಲಿ ಕತ್ತರಿಸಲಾಗುತ್ತದೆ. ಇದರಲ್ಲಿ ಪ್ರಾಣಿಗಳಿಗೆ ಸ್ವಲ್ಪ ಪ್ರಮಾಣದಲ್ಲಿ ತೊಂದರೆಯಾಗುತ್ತದೆ.