ಭಾರತವು ‘ಗ್ರೀನ್‌ ಹಾಯಡ್ರೋಜನ’ ರಫ್ತು ಮಾಡುವ ದೇಶವಾಗಲಿದೆ ! – ಕೇಂದ್ರೀಯ ಮಂತ್ರಿ ನಿತೀನ ಗಡ್ಕರಿ

(ನೀರಿನಲ್ಲಿರುವ ಹಾಯಡ್ರೋಜನ ಅನಿಲವನ್ನು ಬೇರ‍್ಪಡಿಸಬಹುದು. ಇದಕ್ಕೆ ‘ಗ್ರೀನ ಹಾಯಡ್ರೋಜನ’ ಎಂದು ಹೇಳುತ್ತಾರೆ. ಹಾಗೆಯೇ ನೈಸರ್ಗಿಕ ವಾಯುವಿನಿಂದಲೂ ‘ಗ್ರೀನ್‌ ಹಾಯಡ್ರೋಜನ’ ಬೇರ‍್ಪಡಿಸಬಹುದು. ಇದರಿಂದ ಮಾಲಿನ್ಯವಾಗುವುದಿಲ್ಲ.)

ನವದೆಹಲಿ – ಕೇಂದ್ರೀಯ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಿಗಳಾದ ನಿತೀನ ಗಡ್ಕರಿಯವರು ಮಾರ್ಚ ೩೦ರಂದು ‘ಗ್ರೀನ್‌ ಹಾಯಡ್ರೋಜನ’ನಲ್ಲಿ ಓಡುವ ಚತುಶ್ಚಕ್ರ ವಾಹನದಲ್ಲಿ ಸಂಸತ್ತನ್ನು ತಲುಪಿದರು. ಈ ವಾಹನದ ಹೆಸರು ‘ಮಿರಾಯಿ’. ‘ಮಿರಾಯಿ’ ಅಂದರೆ ಭವಿಷ್ಯ. ಕೇಂದ್ರೀಯ ಮಂತ್ರಿ ಗಡ್ಕರಿಯವರು ಮಾತನಾಡುತ್ತ ‘ಈ ವಾಹನವು ಭಾರತಕ್ಕೆ ಶೀಘ್ರದಲ್ಲಿಯೇ ಬರಲಿದ್ದು ಇದರಿಂದ ದೇಶದಲ್ಲಿ ದೊಡ್ಡ ಕ್ರಾಂತಿಯಾಗಲಿದೆ. ಆಮದು ಕಡಿಮೆಯಾಗಿ, ನಮ್ಮ ಸ್ವಾವಲಂಬಿ ಭಾರತದ ಕನಸು ಖಂಡಿತವಾಗಿಯೂ ಸಾಕಾರವಾಗಲಿದೆ. ಸ್ವಾವಲಂಬಿಯಾಗಲು ನಾವು ನೀರಿನಿಂದ ಸಿದ್ಧವಾಗುವ ‘ಗ್ರೀನ್‌ ಹಾಯಡ್ರೋಜನ’ ತಂದಿದ್ದೇವೆ. ಈ ವಾಹನವು ಪ್ರಯೋಗವಾಗಿದೆ. ಈಗ ದೇಶದಲ್ಲಿ ಗ್ರೀನ್‌ ಹಾಯಡ್ರೋಜನನ ನಿರ್ಮಾಣ ಆರಂಭವಾಗಲಿದೆ. ಇದರಿಂದ ರಫ್ತು ನಿಂತು ಉದ್ಯೋಗದ ಹೊಸ ಅವಕಾಶಗಳು ನಿರ್ಮಾಣವಾಗುವವು. ಭಾರತ ಸರಕಾರವು ೩ ಸಾವಿರ ಕೋಟಿ ರೂಪಾಯಿಗಳ ಯೋಜನೆಯನ್ನು ಆರಂಭಿಸಿದ್ದು ನಾವು ‘ಗ್ರೀನ್‌ ಹಾಯಡ್ರೋಜನ’ ರಫ್ತು ಮಾಡುವ ದೇಶವಾಗೋಣ. ಕಲ್ಲಿದ್ದಲಿನ ಜಾಗದಲ್ಲಿ ‘ಗ್ರೀನ್‌ ಹಾಯಡ್ರೋಜನ’ ಬಳಸಲಾಗುವುದು’ ಎಂದು ಹೇಳಿದರು.