ಹರಿದ್ವಾರದಲ್ಲಿ ಸಂತರು ಸಭೆ ನಡೆಸಿ ನಿಷೇಧ ವ್ಯಕ್ತ ಪಡಿಸಿದರು !
* ಆಶ್ರಮದಲ್ಲಿ ನಮಾಜಗಾಗಿ ಅನುಮತಿ ನೀಡಿದ ಚಿದಾನಂದ ಮುನಿಯವರು `ಮಸೀದಿ ಅಥವಾ ಮದರಸಾದಲ್ಲಿ ಹಿಂದೂಗಳಿಗೆ ಆರತಿ ಮಾಡಲು ಅವಕಾಶ ನೀಡುತ್ತಾರೆಯೇ ? ಎಂಬುದು ಅವರು ಯೋಚನೆ ಮಾಡಬೇಕು ! – ಸಂಪಾದಕರು * ಇಂತಹ ಸಂತರು ಹಿಂದೂಗಳಿಗೆ ಏನು ಮಾರ್ಗದರ್ಶನ ಮಾಡುವರು ? -ಸಂಪಾದಕರು |
ಹರಿದ್ವಾರ (ಉತ್ತರಾಖಂಡ) – ಋಷಿಕೇಶದಲ್ಲಿನ ನಿರ್ವಾಣಿ ಆಖಾಡಾದ ಚಿದಾನಂದ ಮುನಿ ಇವರ ಆಶ್ರಮದಲ್ಲಿ ಮುಸಲ್ಮಾನರು ನಮಾಜ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಹರಿದ್ವಾರದ ಸಂತರು ಚಿದಾನಂದ ಮುನಿಯವರ ಕೃತಿಯನ್ನು ಖಂಡಿಸಿದ್ದಾರೆ. ಹರಿದ್ವಾರದಲ್ಲಿ ಶಾಂಭವಿ ಆಶ್ರಮದ ಅಧ್ಯಕ್ಷ ಸ್ವಾಮಿ ಆನಂದಸ್ವರೂಪ ಇವರ ಅಧ್ಯಕ್ಷತೆಯಲ್ಲಿ ಸಂತರ ಸಭೆ ನಡೆಸಿ ಚಿದಾನಂದ ಮುನಿಯವರನ್ನು ವಿರೋಧಿಸಿದ್ದಾರೆ.
ಸಂತರ ಭೇಟಿಯ ನಂತರ ಸ್ವಾಮಿ ಆನಂದಸ್ವರೂಪ ಇವರು ಪತ್ರಕರ್ತರೊಂದಿಗೆ ಮಾಡುತ್ತಾ, `ಚಿದಾನಂದ ಮುನಿಯವರು ಪವಿತ್ರ ಗಂಗೆಯನ್ನು ಕಲುಷಿತಗೊಳಿಸಿದ್ದರಿಂದ ಹರಿದ್ವಾರದ ಸಂತರು ಅವರನ್ನು ಕ್ಷಮಿಸುವುದಿಲ್ಲ. ಇಂತಹ ಸಂತರು ಮಾಡುವ ಕಾರ್ಯ ಧರ್ಮವಿರೋಧಿ ಆಗಿರುವುದರಿಂದ ಕಾಲಿ ಸೇನೆಯು ನಿರ್ವಾಣಿ ಅಖಾಡಾದಿಂದ ಅವರನ್ನು ಹೊರಹಾಕುವಂತೆ ಸಲಹೆ ನೀಡಿದೆ.’ ಎಂದು ಹೇಳಿದರು.
ಕಾಲಿ ಸೇನೆಯ ವಿನೋದ ಗಿರಿ ಮಹಾರಾಜರು ಈ ಘಟನೆಯನ್ನು ನಿಷೇಧಿಸುತ್ತಾ, `ಹಿಂದೂವಿರೋಧಿ ಕೆಲಸ ಮಾಡುವ ಯಾವುದೇ ವ್ಯಕ್ತಿ ಅಥವಾ ಸಂತ ಇವರನ್ನು ಕಾಲಿ ಸೇನೆ ಸಹಿಸುವುದಿಲ್ಲ. ಯಾವ ಸಂತರು ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ಅವಮಾನಿಸುತ್ತಾರೆ, ಅವರನ್ನು ಬಹಿಷ್ಕರಿಸಿ ಅವರ ಮುಖಕ್ಕೆ ಮಸಿ ಬಳಿಯಲಾಗುವುದು.’ ಎಂದು ಹೇಳಿದರು.