ವಾಟ್ಸಾಪ್ ಮಾಲಿಕತ್ವ ಇರುವ ಕಂಪನಿಯ ವಿರೋಧದಲ್ಲಿ ದೂರ ದಾಖಲಿಸುವಂತೆ ಉಚ್ಚ ನ್ಯಾಯಾಲಯಕ್ಕೆ ಆದೇಶ

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಸಾವಿನ ಪ್ರಕರಣ

ನ್ಯಾಯಾಧೀಶರ ಹತ್ಯೆ ಆಗಿರುವ ಸಂದೇಹ !

ರಾಂಚಿ (ಛತ್ತೀಸಗಡ) – ಕಳೆದ ವರ್ಷ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಅಪಘಾತದಲ್ಲಿ ಸಾವನ್ನಪ್ಪಿರುವ ಪ್ರಕರಣದಲ್ಲಿ ಜಾರ್ಖಂಡ್ ಉಚ್ಚ ನ್ಯಾಯಾಲಯವು ಸಿಬಿಐಗೆ ವಾಟ್ಸಪ್ ಮಾಲಿಕತ್ವದ ಕಂಪನಿಯ ವಿರುದ್ಧ ದೂರು ದಾಖಲಿಸುವಂತೆ ಆದೇಶ ನೀಡಿದೆ.

ಜುಲೈ 28, 2021 ರಂದು ಬೆಳಿಗ್ಗೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಉತ್ತಮ ಆನಂದ ಇವರು ಬೆಳಿಗ್ಗೆ ಜಾಗಿಂಗ್(ಓಟ) ಮಾಡುವಾಗ ಹಿಂದಿನಿಂದ ಒಂದು ರಿಕ್ಷಾ ಬಂದು ಗುದ್ದಿತ್ತು. ಇದರಲ್ಲಿ ಅವರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಇದು ಹತ್ಯೆ ಎಂದು ಸಂದೇಹ ವ್ಯಕ್ತಪಡಿಸಲಾಗಿತ್ತು. ಇಬ್ಬರ ಆರೋಪಿಗಳ ವಾಟ್ಸ್‍ಅಪ್ ಮಾಹಿತಿಯನ್ನು ವಾಟ್ಸ್‍ಅಪ್ ಕಂಪನಿಯಿಂದ ತರಿಸಲಾಗಿತ್ತು; ಆದರೆ ಕಂಪನಿ ಗೌಪ್ಯತೆಯ ಹೆಸರಿನಲ್ಲಿ ಈ ಮಾಹಿತಿ ನೀಡಲು ನಿರಾಕರಿಸಿತ್ತು. ಅದರಿಂದ ನ್ಯಾಯಾಲಯವು ವಾಟ್ಸಾಪ್ ಕಂಪನಿಯ ವಿರುದ್ಧ ದೂರ ದಾಖಲಿಸಲು ಆದೇಶಿಸಿದೆ.