ಅಮೃತಸರದ (ಪಂಜಾಬ್) ಕಠೇರಿಯಾ ಬಾಜಾರ್‌ನಲ್ಲಿ ಹಿಂದೂ ಧಾರ್ಮಿಕ ಉತ್ಸವ ನಡೆಯುತ್ತಿದ್ದಾಗ, ಬೆಳಗಿನಜಾವ ನಿಹಂಗ್ ಸಿಕ್ಖ್‌ರ (ನಿಹಂಗ್ ಸಿಕ್ಖ್ ಎಂದರೆ ನೀಲಿ ಬಟ್ಟೆ ಧರಿಸಿ ಶಸ್ತ್ರವನ್ನು ಇಟ್ಟುಕೊಳ್ಳುವ ಸಿಕ್ಖ್‌ರು) ವೇಷ ಧರಿಸಿ ಬಂದಿದ್ದ ಕೆಲವರು ಶಿವನ ವಿಗ್ರಹವನ್ನು ಧ್ವಂಸಗೊಳಿಸಿದರು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಿಂದೂ ಸಂಘಟನೆಗಳು ಆಗ್ರಹಿಸಿವೆ.
೨. ಈಗ ಇಡೀ ದೇಶದಲ್ಲಿ ಹಿಜಾಬ್ ಮತ್ತು ಬುರ್ಖಾವನ್ನು ನಿಷೇಧಿಸಿ !
ಕರ್ನಾಟಕ ಉಚ್ಚ ನ್ಯಾಯಾಲಯವು ‘ಶಾಲೆ-ಮಹಾವಿದ್ಯಾಲಯಗಳಲ್ಲಿ ಹಿಜಾಬ್ ಧರಿಸಲು ನಿಷೇಧವಿದೆ’,ಎಂದು ತೀರ್ಪು ನೀಡಿದೆ. ‘ಹಿಜಾಬ್ ಇಸ್ಲಾಂನ ಅನಿವಾರ್ಯ ಭಾಗವಲ್ಲ’ ಎಂದು ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
೩. ಇಂತಹ ಬೇಡಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿರಿ !
‘ದಿ ಕಾಶ್ಮೀರ್ ಫೈಲ್ಸ್ ಚಲನಚಿತ್ರವನ್ನು ಕೇಂದ್ರ ಸರಕಾರ ಮತ್ತು ಅಸ್ಸಾಂ ಸರಕಾರವು ನಿಷೇಧಿಸಬೇಕು, ಇಲ್ಲದಿದ್ದರೆ ಸಮಾಜದಲ್ಲಿ ಕೋಮುದ್ವೇಷ ಹಬ್ಬುತ್ತದೆ’ ಎಂದು ಅಸ್ಸಾಂನ ‘ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್’ನ ಸಂಸದ ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ.
೪. ಇಂತಹ ಶಾಲೆಗಳ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು !
ವಾಪಿ (ಗುಜರಾತ್) ನಲ್ಲಿರುವ ಸೇಂಟ್ ಮೇರಿ ಶಾಲೆಯ ಆಡಳಿತವು ಇಬ್ಬರು ವಿದ್ಯಾರ್ಥಿಗಳು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ್ದಕ್ಕಾಗಿ ಅವರನ್ನು ಹೊರಹಾಕುವುದಾಗಿ ಬೆದರಿಕೆ ಹಾಕಿದೆ. ಇದರಿಂದ ಕೋಪಗೊಂಡ ಮಕ್ಕಳ ಪೋಷಕರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ವಿರೋಧಿಸಿದಾಗ ಆಡಳಿತ ಮಂಡಳಿ ಕ್ಷಮೆಯಾಚಿಸಿದೆ.
೫. ಕೇವಲ ಕ್ಷಮೆಯಲ್ಲ ಶಿಕ್ಷೆಯಾಗಬೇಕು !
ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ)ಯ ಪ್ರಧಾನ ಕಾರ್ಯದರ್ಶಿ ಜಾವೇದ ಬೇಗ್ ಇವರು, ‘ಕಾಶ್ಮೀರಿ ಹಿಂದೂಗಳ ನರಮೇಧದ ಬಗ್ಗೆ ಮುಸಲ್ಮಾನರು ಕ್ಷಮೆಯಾಚಿಸಬೇಕು. ನಮ್ಮ ಹಿಂದಿನ ತಲೆಮಾರಿನವರು ಹಿಂದೂಗಳ ಮೇಲೆ ಅತ್ಯಾಚಾರ ಮಾಡಿದ್ದು ಅವರ ತಪ್ಪಾಗಿದೆ’ ಎಂದು ಹೇಳಿದ್ದಾರೆ.
೬. ಜಾತ್ಯತೀತರು ಈಗೇಕೆ ಮೌನವಾಗಿದ್ದಾರೆ ?
‘ಹಿಜಾಬ್ ಬಗ್ಗೆ ತೀರ್ಪು ನೀಡುವ ನ್ಯಾಯಾಧೀಶರ ಕೊಲೆಯಾದರೆ ಅದಕ್ಕೆ ಅವರೇ ಹೊಣೆ’ ಎಂದು ತಮಿಳುನಾಡಿನ ‘ತೌಹಿದ್ ಜಮಾತ್’ ಎಂಬ ಇಸ್ಲಾಮಿಕ್ ಸಂಘಟನೆಯ ಪದಾಧಿಕಾರಿ ಕೋವಾಯಿ ಆರ್. ರಹಮತುಲ್ಲಾಹ ಹೇಳಿ ದರ್ಪ ಮೆರೆದಿದ್ದಾನೆ
೭. ಹಿಂದೂಗಳು ಇನ್ನೆಷ್ಟು ದಿನಗಳು ಹಲ್ಲೆ ಸಹಿಸಲಿದ್ದಾರೆ ?
ಉತ್ತರಪ್ರದೇಶದ ಫಾಜಿಲ್‌ನಗರ ನಗರದಲ್ಲಿ ಮಾರ್ಚ್ ೧೯ ರ ರಾತ್ರಿ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರವನ್ನು ನೋಡಿ ಮನೆಗೆ ತೆರಳುತ್ತಿದ್ದ ಮೂವರು ಹಿಂದೂ ಯುವಕರ ಮೇಲೆ ಐವರು ಮತಾಂಧರು ಚೂರಿಯಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಮೂವರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ