ಮದರಸಾಗಳಲ್ಲಿ ರಾಷ್ಟ್ರವಿರೋಧಿ ಕಲಿಸಲಾಗುತ್ತಿರುವುದಿರಿಂದ ಅದರ ಮೇಲೆ ನಿಷೇಧ ಹೇರಿ !

ಕರ್ನಾಟಕದಲ್ಲಿ ಭಾಜಪದ ಶಾಸಕರಿಂದ ಮುಖ್ಯಮಂತ್ರಿಗಳಲ್ಲಿ ಮನವಿ

ಈ ಪ್ರಕರಣದಲ್ಲಿ ಸರಕಾರ ವಿಚಾರಣೆ ನಡೆಸಿ ಸತ್ಯ ಜನರ ಎದುರು ತರಬೇಕು ! -ಸಂಪಾದಕರು 

ರೇಣುಕಾಚಾರ್ಯ (ಎಡದಲ್ಲಿ)

ಬೆಂಗಳೂರು – ಮದರಸಾಗಳಲ್ಲಿ ರಾಷ್ಟ್ರವಿರೋಧಿ ಶಿಕ್ಷಣ ನೀಡಲಾಗುತ್ತಿರುವುದರಿಂದ ರಾಜ್ಯದಲ್ಲಿ ಮದರಸಾಗಳ ಮೇಲೆ ನಿಷೇಧ ಹೇಳಬೇಕೆಂದು ಭಾಜಪದ ಶಾಸಕ ಎಂ.ಪಿ. ರೇಣುಕಾಚಾರ್ಯ ಇವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಮಂತ್ರಿ ಬಿ.ಸಿ. ನಾಗೇಶ ಇವರಲ್ಲಿ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿಯ ರಾಜಕೀಯ ಸಚಿವರಾಗಿರುವ ರೇಣುಕಾಚಾರ್ಯರು ತಮ್ಮ ಮಾತನ್ನು ಮುಂದುವರೆಸುತ್ತಾ, “ಹಿಜಾಬ ನಿಷೇಧದ ಪ್ರಕರಣದಿಂದ ಕೆಲವು ರಾಷ್ಟ್ರವಿರೋಧಿ ಸಂಘಟನೆಗಳು `ಕರ್ನಾಟಕ ಬಂದ’ಗೆ ಕರೆ ನೀಡಿದ್ದಾರೆ. ಸರಕಾರ ಇದನ್ನು ಹೇಗೆ ಸಹಿಸಲು ಸಾಧ್ಯ ? ಇದೇನು ಪಾಕಿಸ್ತಾನ ಅಥವಾ ಬಾಂಗ್ಲಾದೇಶ ಅಥವಾ ಯಾವುದಾದರೂ ಇಸ್ಲಾಮಿ ದೇಶವಾಗಿದೆಯೇ ? ನಾವು ಇದನ್ನು ಸಹಿಸಲು ಸಾಧ್ಯವಿಲ್ಲ. ವಿಧಾನಸಭೆಯಲ್ಲಿ ಕಾಂಗ್ರೆಸ ನಾಯಕರಿಂದ `ಕರ್ನಾಟಕ ಬಂದ್’ಗೆ ಬೆಂಬಲ ನೀಡುತ್ತಿದ್ದಾರೆ.” (ಕಾಂಗ್ರೆಸ್‍ನ ಅಲ್ಪಸಂಖ್ಯಾತರ ಪ್ರೀತಿ ತಿಳಿಯಿರಿ ! – ಸಂಪಾದಕರು)