ಹಿಂದೂ ರಾಷ್ಟ್ರಕ್ಕಾಗಿ ಸಂಘಟಿತರಾಗಿ ಪ್ರಯತ್ನ ಮಾಡುವುದು ಅತ್ಯಗತ್ಯ ! – ಋಷಿಕೇಶ ಗುರ್ಜರ, ಹಿಂದೂ ಜನಜಾಗೃತಿ ಸಮಿತಿ, ಬೆಳಗಾವಿ

ಬೆಳಗಾವಿಯಲ್ಲಿ ಉತ್ಸಾಹಪೂರ್ಣದಲ್ಲಿ ಜರುಗಿದ ಎರಡು ದಿನಗಳ ಹಿಂದೂ ರಾಷ್ಟ್ರ ಸಂಘಟಕ ಕಾರ್ಯಾಗಾರ

ಕಾರ್ಯಾಗಾರದಲ್ಲಿನ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿರುವ ಎಡಗಡೆಯಿಂದ ಶ್ರೀ. ಸತ್ಯವಿಜಯ ನಾಯಿಕ ಮತ್ತು ಶ್ರೀ. ಋಷಿಕೇಶ ಗುರ್ಜರ (ಬಲಗಡೆ)

ಬೆಳಗಾವಿ – ಸ್ವಾತಂತ್ರ್ಯದ ನಂತರ ಭಾರತವು ಪ್ರಜಾಪ್ರಭುತ್ವ ಸ್ವೀಕರಿಸಿತು; ಆದರೆ ಕಳೆದ 73 ವರ್ಷಗಳಲ್ಲಿ ಭ್ರಷ್ಟಾಚಾರ, ಓಲೈಕೆ, ಮತಾಂತರ, ಗೋಹತ್ಯೆ ಜೊತೆಗೆ ಅನೇಕ ಸಮಸ್ಯೆಗಳಿಂದ ಭಾರತ ಬಳಲುತ್ತಿದೆ. ಈ ಎಲ್ಲದ್ದಕ್ಕೂ ಹಿಂದೂ ರಾಷ್ಟ್ರ ಇದೇ ಉತ್ತರವಾಗಿದ್ದೂ ಅದಕ್ಕಾಗಿ ನಾವೆಲ್ಲರೂ ಸಂಘಟಿತರಾಗಿ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಋಷಿಕೇಶ ಗುರ್ಜರ ಇವರು ಆಹ್ವಾನಿಸಿದರು. ಇಲ್ಲಿಯ ಬಜಾರಗಲ್ಲಿ, ವಡಗಾವ ಇಲ್ಲಿಯ ಬನಶಂಕರಿ ದೇವಸ್ಥಾನದ ಸಭಾಗೃಹದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದುರಾಷ್ಟ್ರ ಸಂಘಟಕ ಕಾರ್ಯಾಗಾರ ನಡೆಸಲಾಯಿತು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಈ ಕಾರ್ಯಾಗಾರಕ್ಕೆ ಬೆಳಗಾವಿ ನಗರ, ಬಸುರ್ತೆ, ನಂದಿಹಳ್ಳಿ, ಖಾನಾಪುರ, ರಾಮನಗರ, ಇಲ್ಲಿಯ ಧರ್ಮ ಪ್ರೇಮಿಗಳು ಸಹಭಾಗಿಯಾಗಿದ್ದರು.

ಶಂಖನಾದ ಮತ್ತು ದೀಪ ಪ್ರಜ್ವಲನೆಯಿಂದ ಕಾರ್ಯಾಗಾರವನ್ನು ಆರಂಭಿಸಲಾಯಿತು. ಕಾರ್ಯಾಗಾರದ ಉದ್ದೇಶ ಶ್ರೀ. ಸತ್ಯವಿಜಯ ನಾಯಿಕ ಇವರು ಹೇಳಿದರು. ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಋಷಿಕೇಶ ಗುರ್ಜರ ಇವರು ಹಿಂದೂ ರಾಷ್ಟ್ರ ಸ್ಥಾಪನೆಯ ಮೂಲಭೂತ ಸಂಕಲ್ಪನೆ, ಹಿಂದೂ ರಾಷ್ಟ್ರ ಹೇಗೆ ಸ್ಥಾಪನೆಯಾಗುವುದು ಮತ್ತು ಅದಕ್ಕಾಗಿ ಏನು ಪ್ರಯತ್ನ ಮಾಡಲೇಬೇಕು ಈ ಬಗ್ಗೆ ತಿಳಿಸಿದರು. ಕು. ಸಂಗೀತ ನಾಯಿಕ್ ಇವರು `ಜೀವನದಲ್ಲಿ ಸಾಧನೆಯ ಮಹತ್ವ ಮತ್ತು ಪ್ರತ್ಯಕ್ಷ ಕೃತಿ’ ಇದರ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ಸಹಭಾಗಿಯಾಗಿದ್ದ ಶಿಬಿರಾರ್ಥಿಗಳು

ಶಿಬಿರಾರ್ಥಿಗಳ ಕೌಶಲ್ಯ ವೃದ್ಧಿಯ ಕುರಿತು ಪ್ರಾಯೋಗಿಕ ಭಾಗ ತೆಗೆದುಕೊಳ್ಳಲಾಯಿತು. ಅದರಲ್ಲಿ ಆಂದೋಲನೆಗಾಗಿ ಅನುಮತಿ ಪಡೆಯುವುದು, ಸರಕಾರಿಕರಣಗೊಂಡಿರುವ ದೇವಸ್ಥಾನಗಳ ವಿಶ್ವಸ್ಥ ಮಂಡಳಿಯ ಜೊತೆಗೆ ಸಂಪರ್ಕಿಸುವುದು, ಈ ಕೃತಿಗಳ ಬಗ್ಗೆ ಶಿಬಿರಾರ್ಥಿಗಳು ಉತ್ಸಾಹದಿಂದ ಸಹಭಾಗಿಯಾಗಿದ್ದರು. ಹಿಂದೂ ಜನಜಾಗೃತಿ ಸಮಿತಿಯ ಉಪಕ್ರಮದಲ್ಲಿ ನಾವು ಹೇಗೆ ಸಹಭಾಗಿ ಆಗಬಹುದು ಹಾಗೂ ಅದರಲ್ಲಿ ನಾವು ನಮ್ಮ ಧರ್ಮ ಕರ್ತವ್ಯವೆಂದು ಯಾವ ಯಾವ ಸೇವೆ ಮಾಡಬಹುದು ಈ ವಿಷಯವಾಗಿ ಗುಂಪು ಚರ್ಚೆ ನಡೆಸಲಾಯಿತು.

ಗಮನಾರ್ಹ ಅಂಶಗಳು

1. ಶಿಬಿರದ ಎರಡನೆಯ ದಿನದಂದು ವರುಣನು ಉಪಸ್ಥಿತಿಯನ್ನು ತೋರಿಸಿದನು. ಇದರಿಂದ ವರುಣ ದೇವತೆಯು ಆಶೀರ್ವಾದ ನೀಡಲು ಬಂದಿರುವ ಬಗ್ಗೆ ಎಲ್ಲರೂ ಅನುಭೂತಿ ಪಡೆದರು.

2. ಒಬ್ಬ ಧರ್ಮಪ್ರೇಮಿಯು ಕಾರ್ಯಾಗಾರ ಮೊದಲ ದಿನ ಬರಲು ಸಾಧ್ಯವಾಗಿರಲಿಲ್ಲ, ಆದರೆ ಎರಡನೆಯ ದಿನದ ಕಾರ್ಯಕ್ರಮ ನೋಡಿ ಬಹಳ ಆನಂದವಾಯಿತು ಹಾಗೂ ಮೊದಲನೆಯ ದಿನ ತಪ್ಪಿಹೋಗಿದ್ದಕ್ಕಾಗಿ ಬಹಳ ಪಶ್ಚಾತ್ತಾಪವೆನಿಸಿತು.