ಬಿರಭುಮ (ಬಂಗಾಲ) ಇಲ್ಲಿ 200 ಹೆಚ್ಚು ನಾಡು ಬಾಂಬ್ ವಶಕ್ಕೆ !

* ರಾಜ್ಯದಲ್ಲಿ ಪ್ರತಿಯೊಂದು ಹಿಂಸಾಚಾರದ ಘಟನೆಯ ಸಮಯದಲ್ಲಿ ನಾಡ ಬಾಂಬ್ ಉಪಯೋಗ ಇಲ್ಲಿಯವರೆಗೂ ಮಾಡಲಾಗುತ್ತಿದೆ, `ಅದು ಎಲ್ಲಿ ಮತ್ತು ಯಾರು ತಯಾರಿಸುತ್ತಾರೆ ? ಇದನ್ನು ಪೊಲೀಸರು ಏಕೆ ಕಂಡು ಹಿಡಿಯುತ್ತಿಲ್ಲ ? ಈಗ ಮತ್ತೆ ಹಿಂಸಾಚಾರ ನಡೆದನಂತರ ಪೊಲೀಸರು ಎಚ್ಚರಗೊಂಡಿದ್ದಾರೆ ಮತ್ತು ಅವರು ಕ್ರಮ ಕೈಗೊಂಡಿದ್ದಾರೆ. ಈ ಕ್ರಮ ಮೊದಲೇ ಏಕೆ ತೆಗೆದುಕೊಳ್ಳಲಿಲ್ಲ ? ರಾಜ್ಯದಲ್ಲಿ ಪೊಲೀಸರು ನಿದ್ದೆ ಮಾಡುತ್ತಿರುತ್ತಾರೆಯೇ ? – ಸಂಪಾದಕರು

* ಬಂಗಾಲ ಇದು ನಾಡ ಬಾಂಬ ನಿರ್ಮಾಣದ ಕಾರ್ಖಾನೆಯಾಗಿದ್ದು ಈ ಸ್ಥಿತಿಯನ್ನು ಬದಲಾಯಿಸಲು ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಪಡಿಸುವುದೇ ಯೋಗ್ಯವಾಗಿದೆ ! -ಸಂಪಾದಕರು

ಬಿರಭೂಮ (ಬಂಗಾಲ) – ಇಲ್ಲಿ ಕೆಲವು ದಿನಗಳ ಹಿಂದೆ ತೃಣಮೂಲ ಕಾಂಗ್ರೆಸ್ಸಿನ ಪಂಚಾಯತ್ ಸದಸ್ಯ ಭಾದು ಶೇಖ ಇವರ ಮೇಲೆ ಬಾಂಬ್ ಎಸೆದು ಅವರ ಹತ್ಯೆ ಮಾಡಿದನಂತರ 8 ಜನರನ್ನು ಜೀವಂತ ಸುಡಲಾಯಿತು. ಅದರ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪೊಲೀಸರಿಗೆ ಸಂಬಂಧಿತರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಆದೇಶ ನೀಡಿದ ನಂತರ ಪೊಲೀಸರು 200 ಕ್ಕೂ ಹೆಚ್ಚು ನಾಡ ಬಾಂಬುಗಳನ್ನು ವಶಪಡಿಸಿಕೊಂಡಿದ್ದಾರೆ ಹಾಗೂ ರಾಜ್ಯದ ಪಶ್ಚಿಮ ಬರ್ದವಾನ ಜಿಲ್ಲೆಯ ಸಾಲಾನಪುರದಲ್ಲಿ ಪೊಲೀಸರು ಶಸ್ತ್ರಾಸ್ತ್ರ ತಯಾರಿಸುವ ಕಾರ್ಖಾನೆಯ ಮೇಲೆ ದಾಳಿ ನಡೆಸಿ ದೊಡ್ಡ ಸಂಖ್ಯೆಯಲ್ಲಿ ಬಾಂಬ್‍ಗಳನ್ನು ವಶಪಡಿಸಿಕೊಂಡಿದ್ದಾರೆ.