ಲಂಚ ತೆಗೆದುಕೊಂಡಿದ್ದ ಪ್ರಕರಣದಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮೊಹಮ್ಮದ್ ಖಾಲಿದ್ ಮೊಯಿನ್‍ನ ಬಂಧನ

ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮೊಹಮ್ಮದ್ ಖಾಲಿದ್ ಮೊಯಿನ್‍

ನವದೆಹಲಿ : ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಸಂಸ್ಥಾಪಕ ಎಂಜನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಮೊಹಮ್ಮದ ಖಾಲಿದ್ ಮೊಯಿನ್‍ನನ್ನು 1 ಲಕ್ಷ ರೂಪಾಯಿ ಲಂಚ ಪಡೆದ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ(`ಸಿಬಿಐ’) ಮಾರ್ಚ್ 16 ರಂದು ಬಂಧಿಸಿತು. ಈ ಪ್ರಕರಣದಲ್ಲಿ ಮೊಹಮ್ಮದ್ ಖಾಲಿದ್ ಮೊಯಿನ್‍ನ ಇಬ್ಬರು ಸಹಚರರಾದ ಅಬಿದ್ ಖಾನ ಮತ್ತು ಪ್ರಖರ್ ಪವಾರ್ ಅವರನ್ನು ಕೂಡಾ ಸಿಬಿಐ ವಶಕ್ಕೆ ಪಡೆದಿದೆ. ಆರೋಪಿಗಳಿಬ್ಬರೂ ನವದೆಹಲಿಯ ಓಖಲಾದಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಪ್ರಾಧ್ಯಾಪಕ ಮೊಹಮ್ಮದ್ ಖಾಲಿದ್ ಮೊಯಿನ್ ಹಲವಾರು ಖಾಸಗಿ ನಿರ್ಮಾಣ ವೃತ್ತಿಪರ, ವಾಸ್ತುಶಿಲ್ಪಿಗಳು ಮತ್ತು ದಲ್ಲಾಳಿಗಳ ಸಹಕಾರದೊಂದಿಗೆ ವಿವಿಧ ಪ್ರಕಾರದ ಮೋಸದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದನು. ವಿವಿಧ ನಿರ್ಮಾಣ ಯೋಜನೆಗಳಿಗೆ ಲಂಚ ಪಡೆದು ನಕಲಿ ಪ್ರಮಾಣ ಪತ್ರ ನೀಡುತ್ತಿದ್ದನು. ಸಿಬಿಐಯು ಒಂದು ತಂತ್ರವನ್ನು ರೂಪಿಸಿ ಅವರು ಅವರ ಸಹಚರರೊಂದಿಗೆ ಲಂಚ ಪಡೆಯುತ್ತಿರುವಾಗ ಹಿಡಿಯಲಾಯಿತು, ಎಂದು ಸಿಬಿಐನ ವಕ್ತಾರ ಆರ್.ಸಿ ಜೋಶಿ ಮಾಹಿತಿ ನೀಡಿದ್ದಾರೆ.