‘ದ ಕಶ್ಮೀರ ಫೈಲ್ಸ್’ ಚಲನಚಿತ್ರ ನೋಡಲು ಮಧ್ಯಪ್ರದೇಶದ ಪೋಲಿಸ್ ಸಿಬ್ಬಂದಿಗಳಿಗೆ ರಜೆ ನೀಡಿ ಆದೇಶ !

ಮಧ್ಯಪ್ರದೇಶ ಸರಕಾರದಿಂದ `ದ ಕಶ್ಮೀರ್ ಫೈಲ್ಸ್’ ಚಲನಚಿತ್ರ ತೆರಿಗೆ ಮುಕ್ತ !

ಭೋಪಾಲ (ಮಧ್ಯಪ್ರದೇಶ) – ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಕುಟುಂಬ ಸಹಿತ `ದ ಕಶ್ಮೀರ ಫೈಲ್ಸ್’ ಈ ಚಲನಚಿತ್ರ ನೋಡಲು ಸಾಧ್ಯವಾಗಲಿ, ಅದಕ್ಕಾಗಿ ಅವರಿಗೆ ರಜೆ ನೀಡುವಂತೆ ರಾಜ್ಯದ ಗೃಹ ಸಚಿವ ನರೋತ್ತಮ ಮಿಶ್ರ ಇವರು ರಾಜ್ಯದ ಪೊಲೀಸ ಮಹಾನಿರ್ದೇಶಕರಿಗೆ ಆದೇಶ ನೀಡಿದರು. ಈ ಚಲನಚಿತ್ರವನ್ನು ಎಲ್ಲರೂ ನೋಡಬೇಕು, ಎಂದೂ ಕೂಡ ಮಿಶ್ರಾ ಅವರು ಹೇಳಿದರು. ನಿರ್ದೇಶಕ ವಿವೇಕ ರಂಜನ ಅಗ್ನಿಹೋತ್ರಿ ಇವರ `ದ ಕಶ್ಮೀರ ಫೈಲ್ಸ್’ ಈ ಚಲನಚಿತ್ರ ಮಧ್ಯಪ್ರದೇಶದ ಜನರು ಹೆಚ್ಚೆಚ್ಚು ನೋಡಬೇಕು ಅದಕ್ಕಾಗಿ ಸರಕಾರ ಅದನ್ನು ತೆರಿಗೆ ಮುಕ್ತ ಪಡಿಸುವ ನಿರ್ಧಾರ ಕೈಗೊಂಡಿದೆ, ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ ಚೌಹಾನ ಇವರು ಹೇಳಿದರು.