ಇಸ್ಲಾಮಿಕ್ ಸ್ಟೇಟ್‌ನಲ್ಲಿ ಸೇರ್ಪಡೆಯಾಗಿರುವ ಕೇರಳದ ಉನ್ನತ ಶಿಕ್ಷಣ ಪಡೆದಿರುವ ಮತಾಂಧ ಯುವಕ ಅಫಘಾನಿಸ್ತಾನದಲ್ಲಿ ಆತ್ಮಾಹುತಿ ದಾಳಿಯಲ್ಲಿ ಹತ

‘ಭಯೋತ್ಪಾದಕರಿಗೆ ಧರ್ಮ ಇರುವುದಿಲ್ಲ’, ಎಂದು ಹೇಳುವ ಭಾರತದಲ್ಲಿನ ಜಾತ್ಯತೀತರು ಈ ಘಟನೆಯ ಬಗ್ಗೆ ಮಾತನಾಡುವರೇ ? – ಸಂಪಾದಕರು

ತಿರುವನಂತಪುರಂ(ಕೇರಳ) – ಇಸ್ಲಾಮಿಕ್ ಸ್ಟೇಟ ಈ ಕಟ್ಟರವಾದಿ ಜಿಹಾದಿ ಭಯೋತ್ಪಾದಕ ಸಂಘಟನೆಯಲ್ಲಿ ಸೇರ್ಪಡೆಯಾಗಿರುವ ಕೇರಳದ ನಜೀಬ್ ಅಲ್ ಹಿಂದೂ ಎಂಬ ೨೪ ವಯಸ್ಸಿನ ಉನ್ನತ ಶಿಕ್ಷಣ ಪಡೆದಿರುವ ಯುವಕ ಅಫಘಾನಿಸ್ತಾನದಲ್ಲಿ ಆತ್ಮಾಹುತಿ ದಾಳಿ ಮಾಡುವಾಗ ಸಾವನ್ನಪ್ಪಿದ್ದಾನೆ. ಈ ಮಾಹಿತಿ ಇಸ್ಲಾಮಿಕ್ ಸ್ಟೇಟ್ ನ ‘ವಾಯ್ಸ್ ಆಫ್ ಖುರಾಸಾನ’ ಈ ಮುಖವಾಣಿಯಲ್ಲಿ ನೀಡಲಾಗಿದೆ. ನಜೀಬ್ ಈತ ‘ಎಂ.ಟೇಕ್’ನ ವಿದ್ಯಾರ್ಥಿಯಾಗಿದ್ದನು.