ನಮ್ಮ ವಿರುದ್ಧ ಫತ್ವಾ ಹೊರಡಿಸಲಾಗಿತ್ತು – ‘ದ ಕಶ್ಮೀರ ಫೈಲ್ಸ್’ನ ನಟಿ ಮತ್ತು ನಿರ್ಮಾಪಕಿ ಪಲ್ಲವಿ ಜೋಶಿ

ವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕಲಾಗುತ್ತಿದೆಯೆಂದು ಚೀರಾಡುವ ಜಾವೇದ ಅಖ್ತರ, ಸ್ವರಾ ಭಾಸ್ಕರ, ಕರಣ ಜೋಹರ, ಶಬಾನಾ ಆಜ್ಮಿ ಮುಂತಾದವರು ಈಗ ಈ ವಿಷಯದಲ್ಲಿ ಏಕೆ ಸುಮ್ಮನಿದ್ದಾರೆ ? – ಸಂಪಾದಕರು

ಮುಂಬಯಿ – ಕಾಶ್ಮೀರಿ ಹಿಂದೂಗಳ ನರಸಂಹಾರದ ಆಧರಿಸಿರುವ ‘ದ ಕಶ್ಮೀರ ಫೈಲ್ಸ್’ ಈ ಚಲನಚಿತ್ರದ ಚಿತ್ರೀಕರಣ ನಡೆಯುತ್ತಿರುವಾಗ ನನ್ನ ಮತ್ತು ನನ್ನ ಪತಿ ಹಾಗೂ ಈ ಚಲನಚಿತ್ರದ ನಿರ್ದೇಶಕರಾದ ವಿವೇಕ ಅಗ್ನಿಹೋತ್ರಿಯವರ ವಿರುದ್ಧ ಕಾಶ್ಮೀರದಲ್ಲಿ ಫತ್ವಾ ಹೊರಡಿಸಲಾಗಿತ್ತು, ಎಂಬ ಆಘಾತಕಾರಿ ಮಾಹಿತಿಯನ್ನು ಈ ಚಲನಚಿತ್ರದ ನಿರ್ಮಾಪಕಿ ಹಾಗೂ ನಟಿ ಪಲ್ಲವಿ ಜೋಶಿಯವರು ಬಹಿರಂಗ ಪಡಿಸಿದರು.

ಈ ಚಲನಚಿತ್ರದಿಂದ ಸಧ್ಯಕ್ಕೆ ಎಲ್ಲೆಡೆ ವಿವೇಕ ಅಗ್ನಿಹೋತ್ರಿಯವರನ್ನು ಹೊಗಳಲಾಗುತ್ತಿದೆ; ಆದರೆ ‘ದ ಕಶ್ಮೀರ ಫೈಲ್ಸ್’ ನಂತಹ ಗಂಭೀರ ಚಲನಚಿತ್ರವನ್ನು ನಿರ್ಮಿಸುವುದು ಸುಲಭವಾಗಿರಲಿಲ್ಲ. ಈ ಚಲನಚಿತ್ರ ಪೂರ್ಣಗೊಳ್ಳಲು ೪ ವರ್ಷಗಳು ತಗುಲಿದವು, ಎನ್ನುವ ಮಾಹಿತಿಯನ್ನು ಪಲ್ಲವಿ ಜೋಶಿಯವರು ನೀಡಿದರು. ವಿವೇಕ ಅಗ್ನಿಹೋತ್ರಿಯವರಿಗೆ ‘ದ ಕಶ್ಮೀರ ಫೈಲ್ಸ್’ ಕಾರಣದಿಂದ ಎಷ್ಟು ಬೆದರಿಕೆಗಳು ಬರುತ್ತಿದ್ದವೆಂದರೆ, ಅವರು ತಮ್ಮ ಟ್ವಿಟರ ಖಾತೆಯನ್ನು ಸ್ಥಗಿತಗೊಳಿಸಿದ್ದರು. ನಿರಂತರವಾದ ಬೆದರಿಕೆಗಳಿಂದ ಅವರು ಬಹಳ ಮಾನಸಿಕ ಒತ್ತಡದಲ್ಲಿದ್ದರು ಎಂದೂ ಸಹ ಪಲ್ಲವಿ ಜೋಶಿಯವರು ಒಂದು ಸಂದರ್ಶನದ ಸಮಯದಲ್ಲಿ ಮಾಹಿತಿ ನೀಡಿದರು.