ಮಡಗಾವ್ (ಗೋವಾ)ದಲ್ಲಿಯ ಐನಾಕ್ಸನಲ್ಲಿ ದ ಕಾಶ್ಮೀರ ಫಾಯಿಲ್ಸ್ ಹೌಸಪುಲ್ ಇಲ್ಲದಿದ್ದರೂ ಹೌಸಪುಲ್ ಎಂಬ ಫಲಕ ಅಳವಡಿಕೆ

ಹಿಂದುತ್ವನಿಷ್ಠರು ಐನಾಕ್ಸನ ವ್ಯವಸ್ಥಾಪಕರಲ್ಲಿ ವಿಚಾರಿಸಿದಾಗ ವ್ಯವಸ್ಥಾಪಕರಿಂದ ತೋರಿಕೆಯ ಉತ್ತರ !

ಸಂಪೂರ್ಣ ಗೋವಾ ರಾಜ್ಯದಲ್ಲಿ ಕೇವಲ ಮೂರು ಚಿತ್ರಮಂದಿರಗಳಲ್ಲಿ ಚಲನಚಿತ್ರದ ಪ್ರದರ್ಶನ

ಮಡಗಾವ್ (ಗೋವಾ) – ಇಲ್ಲಿಯ ಓಶಿಯಾ ಕಮರ್ಶಿಯಲ್ ಆರ್ಕಡೆಯಲ್ಲಿ ಇರುವ ಐನಾಕ್ಸ ಚಿತ್ರಮಂದಿರದಲ್ಲಿ ದ ಕಾಶ್ಮೀರ ಫಾಯಿಲ್ಸ್ ಈ ಚಲನಚಿತ್ರ ಪ್ರದರ್ಶಿತವಾಗುತ್ತಿದೆ. ಮಾರ್ಚ ೧೨ ರಂದು ಚಲನಚಿತ್ರ ಪ್ರದರ್ಶನದಲ್ಲಿ ಶೇ. ೩೦ ರಿಂದ ಶೇ. ೪೦ ಜಾಗ ಖಾಲಿಯಿರುವಾಗ ಚಿತ್ರಮಂದಿರದ ಹೊರಗಡೆ ಹೌಸಪುಲ್ನ ಫಲಕವನ್ನು ಹಾಕಲಾದ ಆಘಾತಕಾರಿ ಘಟನೆಯು ಬೆಳಿಗೆ ಬಂದಿದೆ ಅದೇ ರೀತಿ ಬುಕ್ ಮೈ ಶೋ ಈ ಚಲನಚಿತ್ರವನ್ನು ನೋಡುವುದಕ್ಕಾಗಿ ಆನಲೈನ್ ನೋಂದಣಿ ಮಾಡುವ ಜಾಲತಾಣದಲ್ಲಿಯೂ ಹೌಸಪುಲ್ನ ಸೂಚನೆಯನ್ನು ಪ್ರಸಾರ ಮಾಡಲಾಗಿತ್ತು. ಈ ವಿಷಯ ಬೆಳಕಿಗೆ ಬಂದ ನಂತರ ಸ್ಥಳೀಯ ಹಿಂದುತ್ವನಿಷ್ಠ ಶ್ರೀ. ಜಯೇಶ ನಾಯಿಕ್ ಹಾಗೂ ಇತರ ಹಿಂದುತ್ವನಿಷ್ಠರು ಇದರ ಬಗ್ಗೆ ಐನಾಕ್ಸನ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡಾಗ ವ್ಯವಸ್ಥಾಪಕರು ಇದರ ಬಗ್ಗೆ ತೋರಿಕೆಯ ಉತ್ತರವನ್ನು ನೀಡಿದರು. ಇದರ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಗೋವಾ ರಾಜ್ಯದಲ್ಲಿ ಅನೇಕ ಚಿತ್ರಮಂದಿರವಿರುವಾಗ ಈವರೆಗೆ ಕೇವಲ ೩ ಚಿತ್ರಮಂದಿರದೊಳಗೆ ದ ಕಾಶ್ಮೀರ ಫೈಲ್ಸ್ನ್ನು ಬಿಡುಗಡೆಯಾಗಿರುವ ಮಾಹಿತಿಯು ಬೆಳಕಿಗೆ ಬಂದಿದೆ ಇದರಲ್ಲಿ ಮಡಗಾವ್‌ನ ಐನಾಕ್ಸ ಚಿತ್ರಮಂದಿರದಲ್ಲಿ ಕೇವಲ ೧ ಆಟ, ಪಣಜಿಯ ಡಿಬಿ ಮಾರ್ಗದಲ್ಲಿರುವ ಐನಾಕ್ಸ ಚಿತ್ರಮಂದಿರದಲ್ಲಿಯು ೧ ಆಟ ಹಾಗೂ ಬಾರ್ದೆಶ ತಾಲೂಕಿನ ಮಾಲ್ ದೆ ಗೊವಾದಲ್ಲಿನ ‘ಐನಾಕ್ಸ್’ ಚಿತ್ರ ಮಂದಿರದಲ್ಲಿ ೨ ಆಟ ಇದೆ ಎಂದು ಜಾಲತಾಣದಲ್ಲಿ ಮಾಹಿತಿ ನೀಡಲಾಗಿದೆ.

ಹಿಂದೂಗಳ ಮೇಲೆ ಆಗುವ ಅತ್ಯಚಾರವನ್ನು ಬಯಲಿಗೆಳೆಯುವ ಚಲನಚಿತ್ರದ ವಿರೋಧದಲ್ಲಿ ಷಡ್ಯಂತ್ರ ! – ಹಿಂದುತ್ವನಿಷ್ಠರ ಅಸಮಧಾನದ ಪ್ರತಿಕ್ರಿಯೆ

ಶ್ರೀ. ಜಯೇಶ ನಾಯಿಕ್ ಹಾಗೂ ಇತರ ಹಿಂದುತ್ವನಿಷ್ಠರು ವ್ಯವಸ್ಥಾಪಕರನ್ನು ಚಿತ್ರಮಂದಿರದಲ್ಲಿ ಪ್ರದರ್ಶಿತವಾದ ಎಲ್ಲಾ ಚಲನಚಿತ್ರದ ‘ಪೋಸ್ಟರ ಚಿತ್ರಮಂದಿರದ ಹೊರಗೆ ಹಾಕಲಾಗಿದೆ; ಆದರೆ ಚಿತ್ರಮಂದಿರದಲ್ಲಿ ದ ಕಾಶ್ಮೀರ ಫಾಯಿಲ್ಸ್ ಈ ಚಲನಚಿತ್ರವು ಪ್ರದರ್ಶನವಾಗುತ್ತಿದ್ದರೂ ಅದರ ಒಂದೇ ಒಂದು ಫೋಸ್ಟರ ಚಿತ್ರಮಂದಿರದ ಹೊರಗೆ ಏಕೆ ಹಾಕಲಿಲ್ಲ ? ಎಂದು ವಿಚಾರಿಸಿದರು. ದ ಕಾಶ್ಮೀರ ಫಾಯಿಲ್ಸ್ ಈ ಚಲನಚಿತ್ರ ನಡೆಯುತ್ತಿರುವಾಗ ಚಿತ್ರಮಂದಿರದೊಳಗೆ ಶೇ.೩೦ ರಿಂದ ಶೇ. ೪೦ ಜಾಗ ಖಾಲಿಯಿರುವಾಗ ಚಲನಚಿತ್ರವು ಹೌಸಪುಲ್ ಆಗಿರುವುದಾಗಿ ಚಿತ್ರಮಂದಿರವು ಯಾವ ಆಧಾರದಲ್ಲಿ ಹೇಳುತ್ತದೆ ? ಚಿತ್ರಮಂದಿರದಲ್ಲಿ ಖಾಲಿ ಜಾಗದ ಟಿಕೆಟ್ ಮಾರಾಟವಾಗಿದೆ ಎಂದು ವ್ಯವಸ್ಥಾಪಕರ ಹೇಳಿಕೆಯಾಗಿದೆ, ಆದರೆ ಈ ಟಿಕೆಟ್ ಯಾರು ಖರೀದಿಸಿದರು ಇದರ ಬಗ್ಗೆ ಸರಿಯಾದ ವಿವರವನ್ನು ವ್ಯವಸ್ಥಾಪಕರು ನೀಡಬೇಕು. ನಾವು ಈ ವಿಷಯದಲ್ಲಿ ಸುಮ್ಮನೆ ಕುಡುವುದಿಲ್ಲ; ಕಾರಣ ಇದು ದೊಡ್ಡ ಷಡ್ಯಂತ್ರವಾಗಿದೆ. ಜನರು ಚಲನಚಿತ್ರವನ್ನು ನೋಡಬಾರದು ಹಾಗೂ ಚಲನಚಿತ್ರವನ್ನು ಜನರು ಇಷ್ಟಪಡಲಿಲ್ಲ, ಎಂಬ ಭ್ರಮೆಯನ್ನು ನಿರ್ಮಾಣ ಮಾಡುವುದಕ್ಕಾಗಿ ದೊಡ್ಡ ಷಡ್ಯಂತ್ರವಾಗಿದೆ ಎಂದು ಹೇಳಿದರು.
ಚಿತ್ರಮಂದಿರದ ವ್ಯವಸ್ಥಾಪಕರು ಇದರ ಬಗ್ಗೆ ವಿಚಾರಿಸುತ್ತೇನೆ, ಎಂದು ಮೇಲು ಮೇಲಿನ ಉತ್ತರವನ್ನು ನೀಡಿದರು.

ಹಿಂದುತ್ವನಿಷ್ಠರು ಸಂಪರ್ಕಿಸಿದ ನಂತರ ವಾಸ್ಕೋದಲ್ಲಿಯ ಝೆಡ ಸ್ಕ್ವೇರ ಚಿತ್ರಮಂದಿರದಲ್ಲಿ ದ ಕಾಶ್ಮೀರ ಫೈಲ್ಸ್ ಚಲನಚಿತ್ರ ಪ್ರದರ್ಶನ ಮಾಡುವುದಕ್ಕೆ ವ್ಯವಸ್ಥಾಪಕರ ನಿರ್ಧಾರ

ದ ಕಾಶ್ಮೀರ ಫೈಲ್ಸ್ ವಾಸ್ಕೋದ ಹೆಸರಾಂತ ಝೆಡ ಸ್ಕ್ವೇರ ಚಿತ್ರಮಂದಿರದಲ್ಲಿ ಪ್ರದರ್ಶನವಾಗದೇ ಇದ್ದರಿಂದ ಹಿಂದುತ್ವನಿಷ್ಠ ಕಾರ್ಯಕರ್ತರು ವಾಸ್ಕೋದಲ್ಲಿಯ ಝೆಡ ಸ್ಕ್ವೇರ ಚಿತ್ರಮಂದಿರದ ವ್ಯವಸ್ಥಾಪಕರಲ್ಲಿ ಇದರ ಬಗ್ಗೆ ವಿಚಾರಿಸಿದರು. ಅನಂತರ ಈ ಚಲನಚಿತ್ರವು ವಾಸ್ಕೋದ ಝೆಡ್ ಸ್ಕ್ವೇರ ಚಿತ್ರಮಂದಿರದಲ್ಲಿ ಮಾರ್ಚ ೧೩ರಂದು ಸಂಜೆ ೬ಕ್ಕೆ ಪ್ರದರ್ಶಿಸುವುದಾಗಿ ವ್ಯವಸ್ಥಾಪಕರು ಹೇಳಿದರು.

ಗೋವಾದಲ್ಲಿ ಚಲನಚಿತ್ರ ಜಿಹಾದ್ ! – ಹಿಂದೂ ರಕ್ಷಾ ಮಹಾಆಘಾಡೀ, ಗೋವಾ

ಗೋವಾದಲ್ಲಿ ಈಗ ಚಲನಚಿತ್ರ ಜಿಹಾದ ಆರಂಭವಾಗಿದೆ. ದ ಕಾಶ್ಮೀರ ಫೈಲ್ಸ್ ಚಲನಚಿತ್ರದ ಟಿಕೆಟ್ ಮಾರಾಟವನ್ನು ತಡೆಹಿಡಿಯುವುದು ಹಾಗೂ ಚಲನಚಿತ್ರಕ್ಕೆ ಜನರ ಇಷ್ಟಪಡಲಿಲ್ಲವೆಂಬ ಭ್ರಮೆಯನ್ನು ನಿರ್ಮಿಸುವುದು, ಈ ರೀತಿ ಗೋವಾದಲ್ಲಿ ಆರಂಭವಾಗಿದೆ. ಮಡಗಾವನಲ್ಲಿಯ ಹಿಂದುತ್ವನಿಷ್ಠ ಶ್ರೀ. ಜಯೇಶ ನಾಯಿಕರು ಇದರ ಬಗ್ಗೆ ಸಂಬಂದಿಸಿದವರಿಗೆ ತೀಕ್ಷ್ಣವಾಗಿ ವಿಚಾರಿಸಿದರು ಇದಕ್ಕಾಗಿ ಅವರಿಗೆ ತುಂಬಾ ಅಭಿನಂದನೆಗಳು.