ರಾಜ್ಯದಲ್ಲಿಯೂ ‘ದ ಕಾಶ್ಮೀರ ಫೈಲ್ಸ್’ ಚಲನಚಿತ್ರಕ್ಕೆ ಟ್ಯಾಕ್ಸ್ ಫ್ರೀ

ಬೆಂಗಳೂರು – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾರ್ಚ 13 ರಂದು ಟ್ವೀಟ್‌ ಮಾಡಿ ‘ದ ಕಾಶ್ಮೀರ ಫೈಲ್ಸ್’ ಈ ಚಲನಚಿತ್ರಕ್ಕೆ ರಾಜ್ಯದಲ್ಲಿ ಟ್ಕಾಕ್ಸ್ ಫ್ರೀ ಮಾಡಲಾಗಿದೆ. ಈ ಚಲನಚಿತ್ರವನ್ನು ಶ್ಲಾಘಿಸಿದ ಬೊಮ್ಮಾಯಿಯವರು, ವಿವೇಕ ಅಗ್ನಿಹೋತ್ರಿಯವರ ನಿರ್ದೇಶನದ ಚಲನಚಿತ್ರವು ಕಾಶ್ಮೀರಿ ಹಿಂದೂಗಳ ತೀವ್ರ ದುಃಖವನ್ನು ತೋರಿಸುತ್ತದೆ. ಎದೆ ನಡುಗಿಸುವಂತಹ ಚಲನಚಿತ್ರ ಇದಾಗಿದೆ. ಚಲನಚಿತ್ರದ ಮಾಧ್ಯಮದಿಂದ ಕಾಶ್ಮೀರಿ ಹಿಂದೂಗಳ ನರಮೇಧವನ್ನು ಅತ್ಯಂತ ಪ್ರಾಮಾಣಿಕವಾಗಿ ಬೆಳಕು ಚೆಲ್ಲಲಾಗಿದೆ.

ಹರಿಯಾಣಾ, ಗುಜರಾತ ಮತ್ತು ಮಧ್ಯಪ್ರದೇಶ ರಾಜ್ಯಗಳ ನಂತರ ಕರ್ನಾಟಕ ಸರಕಾರವು ‘ದಿ ಕಾಶ್ಮೀರಿ ಫೈಲ್ಸ್‌’ ಚಲನಚಿತ್ರಕ್ಕೆ ಟ್ಯಾಕ್ಸ್ ಫ್ರಿ ಮಾಡಿದ ನಾಲ್ಕನೇ ರಾಜ್ಯವಾಗಿದೆ