ಕಾಂಗ್ರೆಸ ಪಕ್ಷ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ವಿಲೀನವಾಗಲು ಇದೇ ಯೋಗ್ಯ ಸಮಯ ! – ತೃಣಮೂಲ ಕಾಂಗ್ರೆಸ

ಹಿಂದೂಗಳ ದೃಷ್ಟಿಯಲ್ಲಿ ಇವೆರಡೂ ಪಕ್ಷ ಹಿಂದೂದ್ವೇಷಿ ಆಗಿದ್ದರಿಂದ ಅವರು ರಾಜಕೀಯ ದೃಷ್ಟಿಯಿಂದ ಮುಳುಗುವುದು ಯೋಗ್ಯವಾಗಿದೆ ! -ಸಂಪಾದಕರು 

(ಎಡದಿಂದ) ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಅಧೀರ ರಂಜನ ಚೌಧರಿ

ನವ ದೆಹಲಿ5 ರಾಜ್ಯಗಳ ಈಗಷ್ಟೇ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಒಂದೇ ಒಂದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ಕಾಂಗ್ರೆಸ್‍ನಂತಹ ಹಳೆಯ ಪಕ್ಷಕ್ಕೆ ಹೀಗೇಕೆ ಆಗುತ್ತಿದೆ ?, ಎಂದು ತಿಳಿಯುವುದಿಲ್ಲ. ಆದ್ದರಿಂದ ಕಾಂಗ್ರೆಸ ಪಕ್ಷ ಈಗ ತೃಣಮೂಲ ಕಾಂಗ್ರೆಸನಲ್ಲಿ ವಿಲೀನ ಆಗಬೇಕು. ಇದಕ್ಕಾಗಿ ಇದೇ ಯೋಗ್ಯ ಸಮಯವಾಗಿದೆ, ಎಂದು ತೃಣಮೂಲ ಕಾಂಗ್ರೆಸ್ಸಿನ ಬಂಗಾಲದ ಶಾಸಕ ಫಿರಹಾದ ಹಾಕಿಮ ಇವರು ಹೇಳಿದ್ದಾರೆ. ಹೀಗಾದರೆ `ನಾವು ಮಹಾತ್ಮ ಗಾಂಧಿ ಮತ್ತು ಸುಭಾಷ್ ಚಂದ್ರ ಬೋಸ್ ಅವರ ಸಿದ್ಧಾಂತದ ಆಧಾರದ ಮೇಲೆ ನಾಥುರಾಮ ಗೋಡ್ಸೆ ಅವರ ಸಿದ್ಧಾಂತದ ವಿರುದ್ಧ ಹೋರಾಡಬಹುದು’, ಎಂದು ಹೇಳಿದರು. (ಈ ಮೂಲಕ ಫಿರಹಾದ ಹಾಕಿಮ ಇವರು ಪರೋಕ್ಷವಾಗಿ ಹಿಂದೂಗಳ ವಿರುದ್ಧ ಪ್ರಚೋದನೆ ನೀಡುತ್ತಿದ್ದಾರೆ, ಎಂದೇ ಹೇಳಬೇಕಾಗುತ್ತದೆ ! – ಸಂಪಾದಕರು)

1. ತೃಣಮೂಲ ಕಾಂಗ್ರೆಸ್ಸಿನ ವಕ್ತಾರ ಕುಣಾಲ ಘೋಷ ಇವರು, ನಾವು ಬಹಳ ವರ್ಷಗಳಿಂದ, ಭಾಜಪದಂತಹ ಪಕ್ಷದ ವಿರುದ್ಧ ಕಾಂಗ್ರೆಸ ಒಬ್ಬಂಟಿಯಾಗಿ ಹೋರಾಡಲು ಸಾಧ್ಯವಿಲ್ಲ. ಭಾಜಪದ ವಿರುದ್ಧ ಹೋರಾಡುವುದಕ್ಕಾಗಿ ಮಮತಾ ಬ್ಯಾನರ್ಜಿಯಂತಹ ಮುಖಂಡರ ಅನಾವಶ್ಯಕತೆ ಇದೆ ಎಂದು ನಾವು ಬಹಾಳ ವರ್ಷದಿಂದ ಹೇಳುತ್ತಿದ್ದೇವೆ. ಕಾಂಗ್ರೆಸ್‍ಗೆ ಈಗಾದರೂ ಅರ್ಥವಾಗಬೇಕು ಎಂದು ಹೇಳಿದರು.

2. `ಭಾಜಪದ ವಿರುದ್ಧ ವಿರೋಧಕರ ಶಕ್ತಿಶಾಲಿ ದಳ ಸಿದ್ಧಪಡಿಸುವ ಬದಲು ಕಾಂಗ್ರೆಸ ಟ್ವಿಟರ ತನಕ ಮಾತ್ರ ಸೀಮಿತವಾಗಿ ಉಳಿದಿದೆ’, ಎಂದು ತೃಣಮೂಲ ಮುಖವಾಣಿ ಇರುವ `ಜಾಗೋ ಬಾಂಗ್ಲಾ’ ಈ ಪತ್ರಿಕೆಯ ಮೂಲಕ ಆರೋಪ ಮಾಡಲಾಗಿತ್ತು ಎಂದು ಹೇಳಿದರು.

ತೃಣಮೂಲ ಕಾಂಗ್ರೆಸ್ ಪಕ್ಷ ಭಾಜಪದ ಎಲ್ಲಕ್ಕಿಂತ ದೊಡ್ಡ ದಲ್ಲಾಳಿ ! – ಕಾಂಗ್ರೆಸ

ತೃಣಮೂಲ ಕಾಂಗ್ರೆಸ್‍ನಿಂದ ಬಂದಿದ್ದ ವಿಲಿನಿಕರಣ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಬಂಗಾಲದ ಕಾಂಗ್ರೆಸ್ ಅಧ್ಯಕ್ಷ ಅಧೀರ ರಂಜನ ಚೌಧರಿ ಇವರು, ತೃಣಮೂಲ ಕಾಂಗ್ರೆಸ್ ಪಕ್ಷವು ಭಾಜಪದ ಎಲ್ಲಕ್ಕಿಂತ ದೊಡ್ಡ ದಲ್ಲಾಳಿಯಾಗಿದೆ. ತೃಣಮೂಲ ಕಾಂಗ್ರೆಸ್ಸಿನ ನಾಯಕರು ಭಾಜಪದ ವಿರುದ್ಧ ಹೋರಾಡುವ ಬಗ್ಗೆ ಯೋಚಿಸುತ್ತಿದ್ದರೆ, ಆಗ ತೃಣಮೂಲ ಕಾಂಗ್ರೆಸ್ ಪಕ್ಷ ಕಾಂಗ್ರೆಸ್‍ನಲ್ಲಿ ವಿಲೀನವಾಗಬೇಕು ಎಂದು ಹೇಳಿದರು.