‘ಶಬ-ಎ-ಬರಾತ್’ ಮತ್ತು ರಂಜಾನ ಸಮಯದಲ್ಲಿ ಕೆಲವು ಜನರಿಗೆ ನಮಾಜಗಾಗಿ ಅನುಮತಿ
ನವದೆಹಲಿ – ದೆಹಲಿ ಉಚ್ಚ ನ್ಯಾಯಾಲಯವು ಇಲ್ಲಿಯ ‘ನಿಜಾಮುದ್ದಿನ್ ಮರಕಜ್’ ಸಂಪೂರ್ಣವಾಗಿ ತೆರೆಯಲು ವಿರೋಧಿಸಿದೆ. ನ್ಯಾಯಾಲಯವು, ‘ಪ್ರಸ್ತುತ ಇದು ಸಾಧ್ಯವಿಲ್ಲ. ಕೆಲವು ಜನರು ಶಬ-ಎ-ಬರಾತ್’ ಮತ್ತು ರಂಜಾನ್ ಹಬ್ಬದ ಸಮಯದಲ್ಲಿ ನಮಾಜಗಾಗಿ ಅಲ್ಲಿ ಹೋಗಬಹುದು.’ ‘ದೆಹಲಿ ವಕ್ಫ್ ಬೋರ್ಡ್’ನಿಂದ ಮರಕಜ್ ಮತ್ತೆ ತೆರೆಯುವ ಮನವಿಯನ್ನು ದಾಖಲಿಸಿತ್ತು. ಈ ಬಗ್ಗೆ ನ್ಯಾಯಾಲಯವು ಈ ಮೇಲಿನ ನಿರ್ಣಯ ನೀಡಿದೆ. ಮಾರ್ಚ್ ೨೦೨೦ ರಲ್ಲಿ ಕೊರೋನಾದ ಸಮಯದಲ್ಲಿ ಇಲ್ಲಿ ತಬಲಿಗಿ ಜಮಾತಿನ ಸಮ್ಮೇಳನ ಆಯೋಜಿಸಲಾಗಿತ್ತು. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಕೊರೋನಾದ ಸಂಕ್ರಮಣ ಆಗಿದ್ದರಿಂದ ಅದನ್ನು ಬಂದ್ ಮಾಡಲಾಗಿತ್ತು.