ದೆಹಲಿಯಲ್ಲಿ ಹಿಂದು ಯುವಕನ ಮೇಲೆ ಹಲ್ಲೆ ಮಾಡಿದ ಮತಾಂಧನ ಬಂದನ

ಇಂತಹ ಘಟನೆಗಳನ್ನು ಯಾವಾಗ ತಡೆಯಲಾಗುವುದು ?

ದೆಹಲಿ – ಇಲ್ಲಿನ ಮಂಗೊಲಪುರಿ ಭಾಗದಲ್ಲಿ ಹಿಂದಿನ ದ್ವೇಷದಿಂದ ಮತಾಂಧರು ಹಿಂದು ಯುವಕನ ಮೇಲೆ ಚೂರಿ ಹಾಗೂ ಸ್ಕ್ರೂ ಡ್ರೈವರನಿಂದ ಹಲ್ಲೆ ಮಾಡಿದರು. ಈ ಪ್ರಕರಣದಲ್ಲಿ ಪೋಲೀಸರು ಕಾಸಿಫ, ಫರದೀನ್, ದಾನಿಶ್, ಹಾಗೂ ಓರ್ವ ಅಪ್ರಾಪ್ತ ಹುಡುಗನನ್ನು ಬಂಧಿಸಿದ್ದಾರೆ. ಈ ದಾಳಿಯಲ್ಲಿ ಭರತ ಹಾಗೂ ಸನೀ ಎಂಬ ಯುವಕರು ಗಾಯಗೊಂಡಿದ್ದಾರೆ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.