ಶಿವಮೊಗ್ಗ ನಿಷೇಧಾಜ್ಞೆಯ ನಡುವೆ ಮತಾಂಧರಿಂದ ಹಿಂದೂವಿನ ಮೇಲೆ ಹಲ್ಲೆ

ಇಬ್ಬರ ಮತಾಂಧರ ಬಂಧನ

ಕರ್ನಾಟಕದಲ್ಲಿ ಭಾಜಪ ಸರಕಾರ ಇರುವಾಗ ಮತಾಂಧರು ಈ ರೀತಿಯ ಧೈರ್ಯ ಹೇಗೆ ತೋರುತ್ತಾರೆ, ಎಂದು ಹಿಂದುಗಳಲ್ಲಿ ಪ್ರಶ್ನೆ ನಿರ್ಮಾಣವಾಗುತ್ತದೆ !- ಸಂಪಾದಕರು 

ಶಿವಮೊಗ್ಗ – ಗೋಪಾಲ ಬಡಾವಣೆಯಲ್ಲಿ ಪದ್ಮಾ ಚಿತ್ರ ಮಂದಿರದ ಹತ್ತಿರ ವೆಂಕಟೇಶ ಎಂಬ ವ್ಯಕ್ತಿಯ ಮೇಲೆ ದಾಳಿನಡೆಸಿದ ನಾಲ್ವರ ಮತಾಂಧರಲ್ಲಿ ಸಲ್ಮಾನ್ ಮತ್ತು ಸೈಯದ್ ಸುಬಾನ್ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿ ನಿಷೇಧಾಜ್ಞೆ ಇರುವಾಗಲೂ ಮುತಂಧರು ಈ ರೀತಿಯ ದಾಳಿ ಮಾಡಿದ್ದರಿಂದ ಇಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಫೆಬ್ರುವರಿ 20 ರಂದು ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಹತ್ಯೆಯ ನಂತರ ಶಿವಮೊಗ್ಗ ಬೂದಿ ಮುಚ್ಚಿದ ಕೆಂಡದಂತಾಗಿದೆ. ಫೆಬ್ರುವರಿ 20 ರಿಂದ ಮಾರ್ಚ್ 4 ವರೆಗೂ ಜಿಲ್ಲಾಡಳಿತವು ನಿಷೇಧಾಜ್ಞೆ ಜಾರಿ ಮಾಡಿದೆ. ಜಿಲ್ಲೆಯಲ್ಲಿ ಕಠಿಣ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹೀಗಿರುವಾಗಲೂ ಮಾರ್ಚ್ 4 ರಂದು ರಾತ್ರಿ ದಾಳಿ ನಡೆದಿದೆ. ಮತಾಂಧರು ಮತ್ತು ವೆಂಕಟೇಶ ಇವರಲ್ಲಿ ಕ್ಷುಲ್ಲಕ ಕಾರಣದಿಂದ ವಾಗ್ವಾದ ನಡೆದ ನಂತರ ಮತಾಂಧರು ವೆಂಕಟೇಶ ಇವರ ಮೇಲೆ ದಾಳಿ ನಡೆಸಿದ್ದಾರೆ. ಅದರಲ್ಲಿ ಗಾಯಗೊಂಡ ವೆಂಕಟೇಶ್ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಮಾಹಿತಿ ದೊರೆಯುತ್ತಲೇ, ಸಂಸದ ಬಿ.ವೈ. ರಾಘವೇಂದ್ರ ಇವರು ಆಸ್ಪತ್ರೆಗೆ ಹೋಗಿ ವೆಂಕಟೇಶ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.