ಭಾರತೀಯ ವಿದ್ಯಾರ್ಥಿಗಳನ್ನು ಇನ್ನಮುಂದೆ ಮಾಸ್ಕೋದ ಮೂಲಕ ಭಾರತಕ್ಕೆ ಕರೆತರಲಾಗುವುದು !

ನವದೆಹಲಿ – ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಭಾರತೀಯ ವಾಯುದಳದ ವಿಶೇಷ ವಿಮಾನ ಇನ್ನು ಮುಂದೆ ಮಾಸ್ಕೋದ ಮೂಲಕ ಭಾರತಕ್ಕೆ ಕರೆತರುವರು. ಮಾಸ್ಕೋದಿಂದ ಖಾರಕಿವ 750 ಕಿಲೋಮೀಟರ್‍ದಷ್ಟು ಅಂತರವಿದೆ. ರಷ್ಯಾದ ಸೈನ್ಯ ಯುದ್ಧ ಗ್ರಸ್ತ ನಗರಗಳಿಂದ ಭಾರತೀಯ ವಿದ್ಯಾರ್ಥಿಗಳನ್ನು ಮಾಸ್ಕೋದ ವಾಯು ನಿಲ್ದಾಣದ ವರೆಗೆ ಸುರಕ್ಷಿತವಾಗಿ ಕೊಂಡೊಯ್ಯಲು `ಹ್ಯೂಮೆಟೀರಿಯನ ಕಾರಿಡಾರ್’ (ಮಾನವೀಯತೆಯ ದೃಷ್ಟಿಯಿಂದ ಅನುಕೂಲ ಮಾಡಿಕೊಟ್ಟಿರುವ ಮಾರ್ಗ) ಮಾಡುವರು. ಅಲ್ಲಿಂದ ಈ ವಿದ್ಯಾರ್ಥಿಗಳನ್ನು ವಿಶೇಷ ವಿಮಾನದಿಂದ ಗಾಜಿಯಾಬಾದನ ಹಿಂಡನ್ ನೆಲೆಯಲ್ಲಿ ಕರೆತರುವರು.

ಭಾರತದ ವಿದೇಶ ಸಚಿವಾಲಯವು, ಉಕ್ರೇನಿನ ಸುಮಿ ಮತ್ತು ಖಾರಕೀವ ಈ ಪೂರ್ವದ ನಗರದಲ್ಲಿ ಪ್ರಸ್ತುತ ಭಯಂಕರ ಯುದ್ಧ ನಡೆಯುತ್ತಿದೆ. ಈ ನಗರಗಳಲ್ಲಿ ನೂರಾರು ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಫೆಬ್ರುವರಿ 24 ರಿಂದ ಯುಕ್ರೇನ್‍ನ ವಾಯು ಮಾರ್ಗ ಬಂದ ಮಾಡಿದ್ದರಿಂದ ಭಾರತೀಯ ವಿದ್ಯಾರ್ಥಿಗಳನ್ನು ರೊಮಾನಿಯ, ಫೋಲಂಡ, ಹಂಗೇರಿ ಮತ್ತು ಸ್ಲೋವಾಕಿಯಾ ಮಾರ್ಗವಾಗಿ ಹೊರ ಕರೆತರಲಾಗುತ್ತಿದೆ. ಯುದ್ಧ ಸ್ಥಳದಲ್ಲಿನ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದರೆ ಅಲ್ಲಿ ಸುಮಿ ಮತ್ತು ಖಾರಕಿವ ನಗರಗಳಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಉಕ್ರೇನಿನ ಪಶ್ಚಿಮ ಗಡಿ ವರೆಗೂ ತಲೂಪಲಾಗುತ್ತಿಲ್ಲ. ಆದ್ದರಿಂದ ಭಾರತೀಯ ವಾಯುದಳದ ವಿಮಾನ ಮಾಸ್ಕೋಗೆ ಕಳಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಯುದ್ಧಗ್ರಸ್ಥ ಪ್ರದೇಶದಿಂದ ಭಾರತೀಯ ವಿದ್ಯಾರ್ಥಿಗಳನ್ನು ಹೊರತರುವುದಕ್ಕಾಗಿ ರಷ್ಯಾ ಸೈನ್ಯ ದಳದ ಸಹಾಯ ಪಡೆಯಲಾಗುವುದು. ಅದಕ್ಕಾಗಿ ಎರಡು ದೇಶದ ನಡುವೆ ಚರ್ಚೆ ನಡೆದಿದೆ.