ಕರ್ನಾಟಕ ಸರಕಾರವು ಬಜರಂಗ ದಳದ ಹತ್ಯೆಗೊಳಗಾದ ಕಾರ್ಯಕರ್ತನ ಸಂಬಂಧಿಕರಿಗೆ ೨೫ ಲಕ್ಷ ರೂಪಾಯಿಗಳ ಪರಿಹಾರನಿಧಿ ನೀಡಲಿದೆ

* ಇದರೊಂದಿಗೆ ಹಿಂದುತ್ವನಿಷ್ಠರ ಕೊಲೆಗಾರರಿಗೆ ಗಲ್ಲುಶಿಕ್ಷೆಯಾಗುವಂತೆ ಸರಕಾರವು ಪ್ರಯತ್ನಿಸಬೇಕಿದೆ !

ಹತ್ಯೆಯಾದ ಬಜರಂಗ ದಳದ ಕಾರ್ಯಕರ್ತನಾದ ಹರ್ಷ

ಬೆಂಗಳೂರು (ಕರ್ನಾಟಕ) – ಶಿವಮೊಗ್ಗದಲ್ಲಿ ಫೆಬ್ರುವರಿ ೨೦, ೨೦೨೨ ರಂದು ಹತ್ಯೆಯಾದ ಬಜರಂಗ ದಳದ ಕಾರ್ಯಕರ್ತನಾದ ಹರ್ಷರವರ ಸಂಬಂಧಿಕರಿಗೆ ಕರ್ನಾಟಕ ಸರಕಾರವು ೨೫ ಲಕ್ಷ ರೂಪಾಯಿಗಳ ಪರಿಹಾರ ನಿಧಿಯನ್ನು ನೀಡುವುದಾಗಿ ರಾಜ್ಯದ ಗ್ರಾಮವಿಕಾಸ ಮತ್ತು ಪಂಚಾಯತರಾಜ ಮಂತ್ರಿಗಳಾದ ಕೆ. ಎಸ್‌. ಈಶ್ವರಪ್ಪಾರವರು ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪಾರವರು ಮಾರ್ಚ ೬ರಂದು ಹರ್ಷ ರವರ ಮನೆಗೆ ಹೋಗಿ ಈ ಹಣವನ್ನು ಅವರ ಸಂಬಂಧಿಕರಿಗೆ ಒಪ್ಪಿಸಲಿದ್ದಾರೆ. ಹರ್ಷನ ಕುಟುಂಬದವರಿಗೆ ಸಹಾಯ ಮಾಡುವ ದೃಷ್ಟಿಯಿಂದ ನಡೆಸಲಾದ ಒಂದು ಆನಲೈನ ಅಭಿಯಾನದಲ್ಲಿ ಹರ್ಷರವರ ತಾಯಿಯ ಖಾತೆಯಲ್ಲಿ ೬೦ ಲಕ್ಷಕ್ಕಿಂತಲೂ ಹೆಚ್ಚಿನ ಹಣ ಜಮೆಯಾಗಿದೆ.

ಇಲ್ಲಿಯ ವರೆಗೆ ೧೦ ಜನರ ಬಂಧನ

ಹರ್ಷರವರ ಹತ್ಯೆಯ ಪ್ರಕರಣದಲ್ಲಿ ಇಲ್ಲಿಯ ವರೆಗೆ ೧೦ ಜನರನ್ನು ಬಂಧಿಸಲಾಗಿದೆ. ‘ಈ ಪ್ರಕರಣದಲ್ಲಿ ತನಿಖಾದಳವು ಪ್ರಕರಣದ ಆಳವಾದ ತನಿಖೆಯನ್ನು ಮಾಡಲಿದ್ದು ಈ ಹತ್ಯೆಯ ಹಿಂದಿರುವ ಸಂಬಂಧಿತರನ್ನು ಹುಡುಕುತ್ತಿದೆ, ಎಂದು ಮುಖ್ಯಮಂತ್ರಿ ಬೊಮ್ಮಾಯಿಯವರು ಹೇಳಿದರು.