`ಎನ್.ಎಸ್.ಇ.’ ಯ ಮಾಜಿ ಸಮೂಹ ಸಂಚಾಲಕ ಆನಂದ ಸುಬ್ರಹ್ಮಣ್ಯ ಇವರನ್ನು ಬಂಧಿಸಿದ ಸಿಬಿಐ

ಚೆನ್ನೈ – `ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್’ನ(ಎನ್.ಎಸ್.ಇ.ಯ – ರಾಷ್ಟ್ರೀಯ ಶೇರ್ ಮಾರ್ಕೆಟ್) ಮಾಜಿ ಸಮೂಹ ಸಂಚಾಲಕ ಆನಂದ ಸುಬ್ರಹ್ಮಣ್ಯಂ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐನಿಂದ) ಬಂದಿಸಲಾಗಿದೆ. ಎನ್.ಎಸ್.ಇ.ಯ ಕಾರ್ಯಕಲಾಪಗಳಲ್ಲಿ ಅವರು ಅನಾವಶ್ಯಕವಾಗಿ ತಲೆ ಹಾಕುತ್ತಿದ್ದರಿಂದ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಸುಬ್ರಹ್ಮಣ್ಯಂ ಎನ್.ಎಸ್.ಇ ಯ ಮಾಜಿ ಕಾರ್ಯಕಾರಿ ಅಧಿಕಾರಿ ಚಿತ್ರಾ ರಾಮಕೃಷ್ಣ ಇವರ ಸಲಹೆಗಾರರಾಗಿದ್ದರು. ಅವರ ಸಲಹೆ ಮೇರೆಗೆ ಚಿತ್ರಾ ರಾಮಕೃಷ್ಣ ಇವರು ಕೆಲಸ ಮಾಡುತ್ತಿದ್ದರು. ಚಿತ್ರಾ ರಾಮಕೃಷ್ಣ ಇವರು ನಿಯಮಗಳ ಉಲ್ಲಂಘನೆ ಮಾಡಿ ಕಾರ್ಯಕಲಾಪ ನಡೆಸಿರುವುದರಿಂದ ಅವರನ್ನು  ‘ಸೆಬಿ(`ಸೆಕ್ಯೂರಿಟಿ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ’ವು) 3 ಕೋಟಿ ರೂಪಾಯಿ ದಂಡ ವಿಧಿಸಿದೆ. ಚಿತ್ರಾ ರಾಮಕೃಷ್ಣ ಇವರು, `ಅವರಿಗೆ ಹಿಮಾಲಯದ ಯೋಗಿಯಿಂದ ಮಾರ್ಗದರ್ಶನ ಸಿಗುತ್ತಿತ್ತು ಮತ್ತು ಮಾರ್ಗದರ್ಶನದ ಮೂಲಕ ಅವರು ಎನ್.ಎಸ್.ಇ.ಯ ಕಾರ್ಯಕಲಾಪ ನಡೆಸುತ್ತಿದ್ದರು.’ ಎಂದು ಹೇಳಿದರು. ಹಿಮಾಲಯದ ಯೋಗಿ ಬೇರೆ ಯಾರೂ ಆಗಿರದೇ ಆನಂದ ಸುಬ್ರಹ್ಮಣ್ಯ ಇವರೇ ಆಗಿದ್ದರು ಎಂದು ತನಿಖಾ ದಳಕ್ಕೆ ಸಂದೇಹವಿತ್ತು. ಆ ದೃಷ್ಟಿಯಿಂದ ಇಲಾಖೆ ಸುಬ್ರಹ್ಮಣ್ಯ ಇವರ ವಿಚಾರಣೆ ನಡೆಸುತ್ತಿದೆ.