`ದಿ ಕಾಶ್ಮೀರ ಫಾಯಿಲ್ಸ್‌’ ಚಲನಚಿತ್ರದ ನಿರ್ದೇಶಕರಾದ ವಿವೇಕ ಅಗ್ನಿಹೋತ್ರಿಯವರು ತಮ್ಮ ಟ್ಟಿಟ್ಟರ್‌ ಖಾತೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ !

ಕಟ್ಟರತಾವಾದಿಗಳಿಂದ ಬೆದರಿಕೆಗಳು ಬರುತ್ತಿರುವುದರಿಂದ ಈ ಕೃತಿ ಮಾಡಲಾಯಿತು !

ಕಾಶ್ಮೀರಿ ಹಿಂದೂಗಳ ಮೇಲೆ ಮತಾಂಧರು ಮಾಡಿರುವ ಅತ್ಯಾಚಾರಗಳನ್ನು ಚಲನಚಿತ್ರದ ಮೂಲದ ಬಹಿರಂಗಗೊಳಿಸುವ ನಿರ್ದೇಶಕರಿಗೆ ಬೆದರಿಕೆ ಹಾಕುವವರ ಮೇಲೆ ಪೊಲೀಸರು ಯಾವಾಗ ಕಾರ್ಯಾಚರಣೆ ಮಾಡುವರು ? – ಸಂಪಾದಕರು 

ವಿವೇಕ ಅಗ್ನಿಹೋತ್ರಿ

ನವದೆಹಲಿ – ೧೯೯೦ರ ದಶಕದಲ್ಲಿನ ಲಕ್ಷಾಂತರ ಕಾಶ್ಮೀರಿ ಹಿಂದೂಗಳ ಮೇಲಿನ ವಂಶಸಂಹಾರದ ಬಗ್ಗೆ ಬೆಳಕು ಚೆಲ್ಲುವ ಮುಂಬರುವ ‘ದಿ ಕಾಶ್ಮೀರ ಫಾಯಿಲ್ಸ್‌’ ಚಲನಚಿತ್ರದ ನಿರ್ದೇಶಕರಾದ ವಿವೇಕ ಅಗ್ನಿಹೋತ್ರಿಯವರು ತಮ್ಮ ಜೀವಕ್ಕೆ ಅಪಾಯವಿರುವುದಾಗಿ ಹೇಳಿದರು. ಅನೇಕ ದಿನಗಳ ಹಿಂದೆ ಅವರು ತಮ್ಮ ಟ್ವಿಟ್ಟರ್‌ ಖಾತೆಯನ್ನು ತಾತ್ಕಾಲಿಕವಾಗಿ ಮುಚ್ಚಿದ್ದರಿಂದ ತಮ್ಮ ಇನ್ಸ್ಟಾಗ್ರಾಮ ಖಾತೆಯಿಂದ ಪೋಸ್ಟ ಮಾಡಿ ಹೇಳಿದ್ದಾರೆ. ಅವರು ‘ನನ್ನನ್ನು ಕೊಲ್ಲುವ ಅನೇಕ ಬೆದರಿಕೆಗಳು ಬರುತ್ತಿದ್ದವು. ಇದನ್ನು ನಾನು ಸಹಿಸಬಹುದು; ಆದರೆ ‘ನನ್ನ ಮಕ್ಕಳು ಹಾಗೂ ಕುಟುಂಬದ ವಿರುದ್ಧ ಕೃತಿ ಮಾಡಲಾಗುವುದು’ ಎಂಬ ಬೆದರಿಕೆಗಳು ಬರಲು ಆರಂಭವಾಗಿದ್ದರಿಂದ ನಾನು ಕೆಲವು ದಿನಗಳಿಗಾಗಿ ನನ್ನ ಟ್ವಿಟ್ಟರ್‌ ಖಾತೆಯನ್ನು ನಿಲ್ಲಿಸಿದ್ದೇನೆ’ ಎಂದು ಹೇಳಿದ್ದಾರೆ. ಅಗ್ನಿಹೋತ್ರಿಯವರು ಒಂದು ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ‘ನಾನು ಸದ್ಯ ಬಹಳ ಒತ್ತಡಲ್ಲಿದ್ದೇನೆ’ ಎಂದು ಹೇಳಿದ್ದರು.

s