ಭಾರತೀಯ ಜ್ಯೋತಿಷಿಯು ಹೇಳಿರುವ ಭವಿಷ್ಯವಾಣಿಯ ಪ್ರಕಾರ ರಷ್ಯಾ ಮತ್ತು ಯುಕ್ರೇನ್ ನಡುವಿನ ಯುದ್ಧ ಫೆಬ್ರುವರಿ ೨೪ ರಂದು ಆರಂಭ

ಇದರಿಂದ ಭಾರತದ ಜ್ಯೋತಿಷ್ಯಶಾಸ್ತ್ರ ಎಷ್ಟು ಮುಂದುವರೆದಿದೆ, ಇದು ಮತ್ತೊಮ್ಮೆ ಸ್ಪಷ್ಟವಾಗಿದೆ !

ನವದೆಹಲಿ – ನನ್ನ ಲೆಕ್ಕದ ಪ್ರಕಾರ ಮಾತುಕತೆ ಅಥವಾ ಚರ್ಚೆ ಫೆಬ್ರವರಿ ೨೩ ವರೆಗೂ ನಡೆಯಬಹುದು ಮತ್ತು ಫೆಬ್ರುವರಿ ೨೪, ೨೦೨೨ ನಂತರ ಯಾವುದೇ ದಿನ ಯುದ್ಧವಾಗಬಹುದು. ಫೆಬ್ರುವರಿ ೨೪ ರ ನಂತರ ಚರ್ಚೆ ವಿಫಲವಾಗುವುದು. ಗ್ರಹ ಮತ್ತು ನಕ್ಷತ್ರದ ಪ್ರಕಾರ ರಶಿಯಾ ಮತ್ತು ಯುಕ್ರೇನ್ ಇವರಲ್ಲಿ ಯುದ್ಧ ಯಾವಾಗ ಬೇಕಾದರೂ ಪ್ರಾರಂಭವಾಗಬಹುದು. ಅದರಲ್ಲಿ ಅದು ಫೆಬ್ರವರಿ ೨೪ ರಿಂದ ಮಾರ್ಚ್ ೧೫, ೨೦೨೨ ಈ ಸಮಯದಲ್ಲಿ ಯುದ್ಧ ಆಗಬಹುದು. ಇದರಲ್ಲಿ ಯುಕ್ರೇನ್‌ಗೆ ಹಾನಿಯಾಗಲಿದೆ. ಈ ಪರಿಸ್ಥಿತಿ ಮಾರ್ಚ ೧೫ ರಿಂದ ಮೇ ೫, ೨೦೨೨ ಈ ಸಮಯದಲ್ಲಿ ನಿಯಂತ್ರಣಕ್ಕೆ ಬರಬಹುದು, ಈ ರೀತಿಯ ಭವಿಷ್ಯವಾಣಿಯನ್ನು ಜ್ಯೋತಿಷ್ಯ ಪಂಡಿತ ಸಂಜೀವಕುಮಾರ ಶ್ರೀವಾಸ್ತವ ಇವರು ಫೆಬ್ರುವರಿ ೧೩ ರಂದು ಟ್ವೀಟ್ ಮೂಲಕ ಹೇಳಿದ್ದರು. ಅವರ ಹೇಳಿದ ಭವಿಷ್ಯದಂತೆ ಫೆಬ್ರುವರಿ ೨೩ ರಾತ್ರಿ ಮತ್ತು ಫೆಬ್ರುವರಿ ೨೪ ರ ಬೆಳಿಗ್ಗೆ ಯುದ್ಧ ಪ್ರಾರಂಭವಾಗಿದೆ.