ಕಾಶ್ಮೀರಿ ಹಿಂದುಗಳ ನರಮೇಧಕ್ಕೆ ಸಂಬಂಧಿಸಿದ ‘ಕಾಶ್ಮೀರ್ ಫೈಲ್ಸ್’ ಚಲನಚಿತ್ರದ ಜಾಹಿರಾತ (ಟ್ರೈಲರ್) ಪ್ರದರ್ಶನ !

ಕಾಶ್ಮೀರದಲ್ಲಿನ ಹಿಂದುಗಳ ನರಮೇಧವಾಗಿ ೩೦ ವರ್ಷ ಕಳೆದ ನಂತರ ಚಲನಚಿತ್ರ ನಿರ್ಮಿಸಲಗುತ್ತದೆ, ಇದು ಹಿಂದುಗಳಿಗೆ ಲಜ್ಜಾಸ್ಪದ ! ಹಿಂದೂಗಳ ಮೇಲೆ ನಡೆದಿರುವ ದೌರ್ಜನ್ಯ ಜಗತ್ತಿನೆದುರು ತರುವ ಪ್ರಯತ್ನ ಮಾಡುವಲ್ಲಿ ನಿಷ್ಕ್ರಿಯವಾಗಿರುವ ಹಿಂದುಗಳ ಮೇಲೆ ಸತತವಾಗಿ ಮತಾಂಧರು ಆಕ್ರಮಣ ನಡೆಸಿದರೆ, ಅದರಲ್ಲಿ ಆಶ್ಚರ್ಯವೇನೂ ಇಲ್ಲ !

ಮುಂಬಯಿ – ನಿರ್ದೇಶಕ ವಿವೇಕ ರಂಜನ್ ಅಗ್ನಿಹೋತ್ರಿ ಇವರು ಕಾಶ್ಮೀರಿ ಹಿಂದೂಗಳ ನರಮೇಧದ ಕುರಿತು ‘ದ ಕಾಶ್ಮೀರಿ ಫೈಲ್ಸ್’ ಈ ಮುಂಬರುವ ಚಲನ ಚಿತ್ರದ ಜಾಹೀರಾತು (ಟ್ರೈಲರ್) ಪ್ರದರ್ಶಿಸಿದರು. ಈ ಚಲನಚಿತ್ರ ಮಾರ್ಚ್ ೧೧, ೨೦೨೨ ರಂದು ಪ್ರದರ್ಶನಗೊಳ್ಳಲಿದೆ. ಇದರಲ್ಲಿ ೧೯೯೦ ರ ದಶಕದಲ್ಲಿ ಕಾಶ್ಮೀರದಲ್ಲಿ ಹಿಂದೂಗಳ ನರಮೇಧ ನಡೆದಿತ್ತು ಮತ್ತು ಅವರ ನಿರಾಶ್ರಿತರಾಗಿರುವ ಮಾಹಿತಿ ನೀಡಲಾಗಿದೆ. ಈ ಚಲನಚಿತ್ರದಲ್ಲಿ ಹಿಂದೂ ಮಕ್ಕಳ ಹತ್ಯೆ, ಮಹಿಳೆಯರ ಮೇಲೆ ಬಲಾತ್ಕಾರ ಹಾಗೂ ಮುಸಲ್ಮಾನ ಗುಂಪುಗಳಿಂದ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯ ತೋರಿಸಲಾಗಿದೆ. ಈ ಚಲನಚಿತ್ರದಲ್ಲಿ ನಟ ಮಿಥುನ್ ಚಕ್ರವರ್ತಿ, ಅನುಪಮ ಖೆರ, ಪುನೀತ ಇಸ್ಸರ್, ಪಲ್ಲವಿ ಜೋಷಿ ಮತ್ತು ದರ್ಶನ್ ಕುಮಾರ ಇವರು ಮುಖ್ಯಪಾತ್ರದಲ್ಲಿದ್ದಾರೆ.

(ಸೌಜನ್ಯ : Zee Studios)

ಟ್ರೈಲರ್‌ನಲ್ಲಿ ತೋರಿಸಲಾದ ಪ್ರಸಂಗಗಳು

೧. ಮುಸಲ್ಮಾನರ ಒಂದು ಸಭೆ ತೋರಿಸಲಾಗಿದೆ. ಆ ಸಮಯದಲ್ಲಿ ಗೋಡೆಗಳ ಮೇಲೆ ‘ಮುಸಲ್ಮಾನರೇ ಎಚ್ಚೆತ್ತುಕೊಳ್ಳಿ’, ಹೀಗೆ ಬರೆದಿರುವುದು ಕಾಣುತ್ತದೆ. ಆ ಸಮಯದಲ್ಲಿ ಮುಸಲ್ಮಾನ ನಾಯಕ ಉಪಸ್ಥಿತರಿರುವ ಜನರ ಸಂಖ್ಯೆ ಎಣಿಸುವುದು ತೋರಿಸಲಾಗಿದೆ.

೨. ಬೇರೆ ಒಬ್ಬ ನಾಯಕ ಇನ್ನೊಂದು ಪ್ರಸಂಗದಲ್ಲಿ, ‘ಆತ ೨೦ ರಿಂದ ೨೫ ಹಿಂದೂಗಳನ್ನು ಹತ್ಯೆಗೈದಿದ್ದಾನೆ. ‘ಅವರು’ ಹೇಳಿದಕ್ಕೆ ನಾನು ನನ್ನ ಸಹೋದರ ಮತ್ತು ತಾಯಿಯನ್ನು ಹತ್ಯೆ ಗಯ್ಯುತ್ತಿದ್ದೆ.’ ಎಂದು ಹೇಳುತ್ತಾನೆ.

೩. ಒಬ್ಬ ಮುಸಲ್ಮಾನ, ‘ಹಿಂದುಗಳಿಗೆ ಯಾರು ಓಡಿಸಿಲ್ಲ ಆದರೆ ಅವರೇ ಸ್ವಃತ ರಾಜ್ಯಪಾಲ (ಜನಮೋಹನ) ಇವರ ಸಹಾಯದಿಂದ ಪಲಾಯನ ಮಾಡಿದ್ದಾರೆ ಎಂದು ಹೇಳುತ್ತಾನೆ.

೪. ‘ಎಲ್ಲಿ ಶಿವ, ಸರಸ್ವತಿ, ಋಷಿ ಕಶ್ಯಪ ಇದ್ದರೋ ಆ ಕಾಶ್ಮೀರ ನಮ್ಮದಾಗಿದೆ. ಎಲ್ಲಿ ಪಂಚತಂತ್ರ ಬರೆಯಲಾಗಿತ್ತು, ಅದು ನಮ್ಮ ಕಾಶ್ಮೀರವಾಗಿದೆ’, ಎಂದು ಒಬ್ಬ ಹಿಂದು ಹೇಳುವುದನ್ನು ತೋರಿಸಲಾಗಿದೆ.

೫. ಇನ್ನೊಬ್ಬ ಹಿಂದೂ, ‘ಪದ್ಮಶ್ರೀ’ ಪ್ರಶಸ್ತಿ ನಿಮಗೆ ಮೌನವಾಗಿರಲು ನೀಡಲಾಗಿತ್ತು.’ ಇದರಿಂದ ‘ಹಿಂದೂಗಳ ಮೇಲೆ ದೌರ್ಜನ್ಯ ನಡೆದಿದ್ದರೂ ಕಾಶ್ಮೀರಿ ಹಿಂದೂಗಳು ಬಂದುಕು ಕೈಗೆತ್ತಿಕೊಂಡಿಲ್ಲ’, ಹೀಗೆ ತೋರಿಸಲಾಗಿದೆ.