ಅಬುಜಮಾಡ (ಛತ್ತಿಸ್‌ಗಡ) ಇಲ್ಲಿ ಕ್ರೈಸ್ತ ಧರ್ಮ ಸ್ವೀಕರಿಸಿದ ಯುವಕನನ್ನು ಗ್ರಾಮಸ್ಥರಿಂದ ಗಡಿಪಾರು !

ಕೇಂದ್ರ ಸರಕಾರ ತಕ್ಷಣ ಮತಾಂತರ ವಿರೋಧಿ ಕಾನೂನನ್ನು ಜಾರಿಗೊಳಿಸಿ ಹಿಂದುಗಳ ಮತಾಂತರವಾಗುವುದನ್ನು ತಡೆಯಬೇಕು !

ಸಾಂಧರ್ಭಿಕ ಚಿತ್ರ

ಅಬುಜಮಾಡ (ಛತ್ತಿಸ್‌ಗಡ್) – ಇಲ್ಲಿ ಮತಾಂತರದ ಘಟನೆಗಳಲ್ಲಿ ಹೆಚ್ಚಳವಾಗಿದೆ. ಗ್ರಾಮದ ಯುವಕರು ಕ್ರೈಸ್ತ ಮಿಶನರಿಗಳ ಆಮಿಷಕ್ಕೆ ಬಲಿಯಾಗಿ ಮತಾಂತರ ಆಗುತ್ತಿದ್ದಾರೆ. ಆದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಯುವಕರನ್ನು ಗ್ರಾಮದಿಂದ ಗಡಿಪಾರು ಮಾಡಿದ್ದಾರೆ. ಆದ್ದರಿಂದ ಈ ಯುವಕರು ‘ತಮ್ಮ ಸಂಬಂಧಿಕರು ಮತ್ತು ಗ್ರಾಮಸ್ಥರನ್ನು ಲೂಟಿ ಮಾಡುತ್ತಾ ದಾಳಿ ಮಾಡುತ್ತಿದ್ದಾರೆ’, ಎಂದು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಇದರಿಂದ ಪೊಲೀಸರು ೧೫ ಜನರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಇದರ ನಂತರ ೩ ಗ್ರಾಮ ಪಂಚಾಯಿತಿಯ ಗ್ರಾಮಸ್ಥರು ಪೊಲೀಸ್ ಠಾಣೆಗೆ ತಲುಪಿ ಅವರು ಮತಾಂತರಗೊಂಡವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕ್ರೈಸ್ತ ಪ್ರಾರ್ಥನೆ ಮಾಡಿರುವುದರಿಂದ ಕಾಯಿಲೆ ವಾಸಿಯಾಗಿದೆ ಎಂದು ಮತಾಂತರಗೊಂಡವರ ದಾವೆ

ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಅವರಿಗೆ ಯೋಗ್ಯ ಸಾಧನೆ ತಿಳಿದಿಲ್ಲ ಮತ್ತು ಆದ್ದರಿಂದ ಅವರಿಗೆ ದೇವರಲ್ಲಿ ಶ್ರದ್ಧೆ ಕಡಿಮೆಯಾಗುತ್ತಿದೆ. ಇಂಥವರನ್ನು ಕ್ರೈಸ್ತ ಮಿಷನರಿಗಳು ಬಲೆಗೆ ಸಿಲುಕಿಸುತ್ತಾರೆ ಮತ್ತು ಅವರನ್ನು ಮತಂತರಗೊಳಿಸುತ್ತಾರೆ, ಇದನ್ನು ಗಮನದಲ್ಲಿಟ್ಟುಕೊಂಡು ಹಿಂದೂಗಳಿಗೆ ಧರ್ಮಶಿಕ್ಷಣ ನೀಡಲು ಹಿಂದುತ್ವನಿಷ್ಠ ಸಂಘಟನೆಗಳು ಪ್ರಯತ್ನಿಸಬೇಕು !

ಮತಾಂತರಿಸುವ ಮುಕೇಶ್ ಯಾದವ್, ಹೇಮನಾಥ, ಸನ್ನೋ ಮತ್ತು ಸೋನಾದೇವಿ ಗೋಟ ಇವರು, ಹಿಂದೆ ನಾವು ದೇವತೆಗಳ ಪೂಜೆ ಮಾಡುತ್ತಿದ್ದರೂ ಅನಾರೋಗ್ಯದಿಂದ ಬಳಲುತ್ತಿದ್ದೆವು. ಕಾಯಿಲೆ ವಾಸಿಯಾಗದೇ ಇರುವಾಗ ನಾವು ಕ್ರೈಸ್ತರ ಪ್ರಾರ್ಥನೆ ಮಾಡಳು ಆರಂಭಿಸಿದಾಗ ನಾವು ಗುಣಮುಖರಾಗಲು ಆರಂಭವಾಯಿತು. ಆದ್ದರಿಂದ ನಾವು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದೆವು. ನಮಗೆ ಅದು ಇಷ್ಟವಾಗುತ್ತದೆ. ನಾವು ಕ್ರೈಸ್ತ ಧರ್ಮವನ್ನು ತ್ಯಜಿಸುವುದಿಲ್ಲ ಎಂದು ಹೇಳಿದರು.