ಬುರ್ಖಾ ಮಹಿಳೆಯರ ಅವಮಾನದ ಪ್ರತೀಕ ! – ತಸ್ಲೀಮಾ ನಸ್ರೀನ್

ನವದೆಹಲಿ – ಬುರ್ಖಾವು ಮಹಿಳೆಯರ ಅವಮಾನದ ಪ್ರತೀಕವಾಗಿದೆ. ನಿಜಾ ಹೇಳ ಬೇಕೆಂದರೆ, ಮಹಿಳೆಯರಿಗಾಗಿ ಇದು ಎಷ್ಟು ಅವಮಾನಕರವಾಗಿದೆ ಅದಕ್ಕಿಂತ ಹೆಚ್ಚು ಅದು ಪುರುಷರಿಗಾಗಿ ಇದೆ. ‘ಪುರುಷರು ಅವರ ಲೈಂಗಿಕ ಆವೇಶದ ಮೇಲೆ ನಿಯಂತ್ರಣ ಇಟ್ಟುಕೊಳ್ಳುವುದರಲ್ಲಿ ಅಸಮರ್ಥನಾಗಿದ್ದಾನೆ, ಇದು ಬುರ್ಖಾದಿಂದ ಸಾಬೀತಾಗಿದೆ, ಎಂದು ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಇವರು ಟ್ವೀಟ ಮಾಡಿ ತಿಳಿಸಿದ್ದಾರೆ.

ತಸ್ಲೀಮಾ ಇವರು ಮಾಡಿದ ಇನ್ನೊಂದು ಟ್ವಿಟ್ಟಿನಲ್ಲಿ, ಕೆಲವು ಪ್ರಗತಿಪರ ಮುಸಲ್ಮಾನರು, ‘ಕುರಾನ್‌ನಲ್ಲಿ ಹಿಜಾಬ್‌ನ ಉಲ್ಲೇಖವಿಲ್ಲ; ಆದ್ದರಿಂದ ಹಿಜಾಬ್ ಧರಿಸುವುದು ಆವಶ್ಯಕವಾಗಿಲ್ಲ.’ ಆದರೆ ಕುರಾನ್‌ನಲ್ಲಿ ಹಿಜಾಬ್‌ನ ಉಲ್ಲೇಖವಿದ್ದರೂ ಸಹ ನಾವು ಹಿಜಾಬ್ ಏಕೆ ಧರಿಸಬೇಕೇ ? ಅಥವಾ ಇಲ್ಲವೇ. ಯಾರಾದರೂ ಹೇಳಿದರೆ, ಆದರೂ ನಾವು ದುರಾಚಾರದಿಂದ ವರ್ತಿಸಬಾರದು. ಯಾವುದೇ ಗ್ರಂಥ ಮತ್ತು ಯಾವುದೇ ವಿಷಯ ಪವಿತ್ರವಲ್ಲ. ಎಂದು ಹೇಳಿದರು.