ಕೇರಳ ಸರಕಾರದ ಸಚಿವರು ಕೇರಳಿಗರ ಹಣವನ್ನು ದುರುಪಯೋಗ ಪಡಿಸುತ್ತಿದ್ದಾರೆ ! – ರಾಜ್ಯಪಾಲ ಆರೀಫ ಮಹಂಮದ ಖಾನ

ಕೇಂದ್ರ ಸರಕಾರವು ಇದರ ವಿಚಾರಣೆ ನಡೆಸಿ ಸತ್ಯಾಂಶವನ್ನು ದೇಶದ ಮುಂದೆ ತರಬೇಕು ! – ಸಂಪಾದಕರು 

ಕೇರಳದ ರಾಜ್ಯಪಾಲ ಆರೀಫ್ ಮಹಂಮದ್ ಖಾನ್

ತಿರುವನಂತಪುರಂ (ಕೇರಳ) – ರಾಜಭವನದ ಮೇಲೆ ನಿಯಂತ್ರಣ ಇರಿಸುವ ಅಧಿಕಾರ ಯಾರಿಗೂ ಇಲ್ಲ. ನಾನು ಇಲ್ಲಿ ಸರಕಾರ ನಡೆಸುವುದಕ್ಕಾಗಿ ಅಲ್ಲ. ಸರಕಾರ ಸಂವಿಧಾನದ ಪ್ರಕಾರ ಮತ್ತು ನೈತಿಕತೆಯಿಂದ ಕೆಲಸಮಾಡುತ್ತಿದೆಯೇ ಅಥವಾ ಇಲ್ಲ ಎಂಬುದನ್ನು ನಾನು ಕೇವಲ ನೋಡುವುದಕ್ಕಾಗಿ ಇರುವೆನು. ಎಂದು ಕೇರಳದ ರಾಜ್ಯಪಾಲ ಆರೀಫ್ ಮಹಂಮದ್ ಖಾನ್ ಇವರು ವಿಧಾನಸಭೆಯಲ್ಲಿ ಅವರ ಭಾಷಣದ ಸಮಯದಲ್ಲಿ ರಾಜ್ಯ ಸರಕಾರಕ್ಕೆ ತರಾಟೆಗೆ ತೆಗೆದುಕೊಂಡರು. `ರಾಜ್ಯ ಸರಕಾರದ ಮಂತ್ರಿಗಳು ಕೇರಳಿಗರ ಹಣದ ದುರುಪಯೋಗ ಮಾಡುತ್ತಿದೆ’, ಎಂದು ಆರೋಪಿಸಿದರು. ಈ ಭಾಷಣದ ಸಮಯದಲ್ಲಿ ವಿರೋಧಿ ಪಕ್ಷದವರು ದಾಂಧಲೆ ಮಾಡುತ್ತಿದ್ದರು.

ರಾಜ್ಯಪಾಲರು ತಮ್ಮ ಮಾತನ್ನು ಮುಂದುವರೆಸುತ್ತಾ, ಯಾವಾಗ ನಾನು ಕೇಂದ್ರ ಸಚಿವನಾಗಿದ್ದೆ, ಆಗ ನನ್ನ ಬಳಿ 11 ಸಿಬ್ಬಂದಿಗಳು ಇದ್ದರು. ಪ್ರಸ್ತುತ ಕೇರಳದ ಮಂತ್ರಿಗಳ ಬಳಿ 20 ಸಿಬ್ಬಂದಿಗಳು ಇದ್ದಾರೆ. ಇದರ ಭಾರ ರಾಜ್ಯದ ಬೊಕ್ಕಸದ ಮೇಲೆ ಬೀಳುತ್ತಿದೆ. ಈ ಸಿಬ್ಬಂದಿಯ ಹೆಸರಿನಲ್ಲಿ ಪಕ್ಷದ ಕಾರ್ಯಕರ್ತರನ್ನು ನೇಮಕ ಗೊಳಿಸಲಾಗುತ್ತಿದೆ, ಎಂದು ಸಹ ಆರೋಪಿಸಿದರು.