ಒಡಿಶಾದಲ್ಲಿ ಸರಾಯಿ ಮತ್ತು ತಂಬಾಖುಗಳ ಸೇವನೆಯಲ್ಲಿ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ಪುರುಷರ ಸಂಖ್ಯೆಯಲ್ಲಿ ಇಳಿಕೆ ! – ಸಮೀಕ್ಷಯ ನಿಷ್ಕರ್ಷ

* ಇದನ್ನು ಸ್ತ್ರೀ ಪುರುಷ ಸಮಾನತೆಯ ದಿಶೆಗೆ ಪ್ರಯಾಣ ಎನ್ನಬೇಕೆ ?- ಸಂಪಾದಕರು

* ಯಾವ ಮಹಿಳೆಯು ಮನೆಯಲ್ಲಿ ಸಂಸ್ಕಾರ ಮಾಡಬೇಕು, ಅವರೆ ವ್ಯಸನಿಗಳು ಆದರೆ, ಮಕ್ಕಳ ಮೇಲೆ ಸಂಸ್ಕಾರ ಯಾರು ಮಾಡುವರು ?- ಸಂಪಾದಕರು

* ಇಲ್ಲಿಯವರೆಗಿನ ಎಲ್ಲ ಪಕ್ಷದ ಆಡಳಿತಗಾರರು ಜನರಿಗೆ ಸಾಧನೆ ಕಲಿಸದೆ ಇರುವುದರ ಪರಿಣಾಮವಾಗಿದೆ ! -ಸಂಪಾದಕರು

( ಪ್ರತಿನಿಧಿಕ ಛಾಯಾಚಿತ್ರ )

ನವದೆಹಲಿ – `ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಸಂಸ್ಥೆ’ಯು ಈಗಷ್ಟೇ ಒಡಿಶಾದಲ್ಲಿ ನಡೆಸಿರುವ ಸಮೀಕ್ಷೆಯ ವರದಿಯಲ್ಲಿ ಕಳೆದ 5 ವರ್ಷಗಳಲ್ಲಿ ಮದ್ಯಪಾನ ಮತ್ತು ತಂಬಾಕು ಸೇವನೆ ಮಾಡುವ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳ ಆಗಿದ್ದು, ಪುರುಷರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ, ಎಂದು ಹೇಳಿದೆ.

1. ಈ ವರದಿಯ ಆಧಾರದಲ್ಲಿ 2015-16 ರಲ್ಲಿ 15 ವಯಸ್ಸಿನ ಮೇಲ್ಪಟ್ಟ ಮಹಿಳೆಯರಲ್ಲಿ ಮದ್ಯಪಾನದ ಪ್ರಮಾಣ ಶೇ. 2.4 ಇತ್ತು, ಆದೆ 2020- 21 ರಲ್ಲಿ ಹೆಚ್ಚಾಗಿ ಶೇ. 4.3 ಆಗಿದೆ. ಆದೆ ಸಮಯದಲ್ಲಿ ಪುರುಷರ ಸಂದರ್ಭದಲ್ಲಿ 2015-16 ರಲ್ಲಿ ಈ ಪ್ರಮಾಣ ಶೇ. 39.3 ಇತ್ತು, ಅದರ ಇಳಿಕೆಯಾಗಿ ಶೇ. 28.8 ಕ್ಕೆ ಬಂದಿದೆ.

2. ಒಡಿಶಾದ ಗ್ರಾಮೀಣ ಭಾಗದಲ್ಲಿರುವ 15 ವರ್ಷದ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರು ನಗರ ಪ್ರದೇಶದ ಮಹಿಳೆಯರ ಮತ್ತು ಪುರುಷರ ತುಲನೆಯಲ್ಲಿ ಅಧಿಕ ಪ್ರಮಾಣದಲ್ಲಿ ಮದ್ಯಪಾನ ಮಾಡುತ್ತಿರುವುದು ಕಂಡು ಬಂದಿದೆ. ನಗರ ಪ್ರದೇಶದ ಶೇ. 22.7 ಪುರುಷರ ತುಲನೆಯಲ್ಲಿ ಶೇ. 30.2 ರಷ್ಟು ಗ್ರಾಮೀಣ ಭಾಗದಲ್ಲಿನ ಪುರುಷರು ಮದ್ಯಪಾನ ಮಾಡುವುದು ಕಂಡುಬಂದಿದೆ. ಮದ್ಯಪಾನ ಮಾಡುವ ಮಹಿಳೆಯರ ಸಂದರ್ಭದಲ್ಲಿ ಈ ಪ್ರಮಾಣ ಗ್ರಾಮೀಣ ಭಾಗದಲ್ಲಿ ಶೇ. 4.9 ಮತ್ತು ನಗರ ಪ್ರದೇಶಗಳಲ್ಲಿ ಶೇ. 1.4 ಇದೆ.

3. ಕೇವಲ ಮದ್ಯಪಾನ ಅಷ್ಟೇ ಅಲ್ಲದೆ, ಪುರುಷರ ತುಲನೆಯಲ್ಲಿ ಮಹಿಳೆಯರು ತಂಬಾಕು ಸೇವನೆ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. 2015-16 ರಲ್ಲಿ ಶೇ. 17.3 ಮಹಿಳೆಯರು ತಂಬಾಕು ಸೇವಿಸುವ ವ್ಯಸನಿಗಳಾಗಿದ್ದರು, ಆದರೆ ಈ ವರದಿಯ ಆಧಾರದಲ್ಲಿ ಈ ಸಂಖ್ಯೆ ಈಗ ಶೇ. 26 ವರೆಗೆ ತಲುಪಿದೆ. ನಗರ ಪ್ರದೇಶದಲ್ಲಿ ಶೇ. 16.6 ಹಾಗೂ ಗ್ರಾಮೀಣ ಭಾಗದಲ್ಲಿನ ಮಹಿಳೆಯರು ಶೇ. 26 ಮಹಿಳೆಯರು ತಂಬಾಕು ಸೇವನೆ ಮಾಡುತ್ತಾರೆ. ತಂಬಾಕು ಸೇವನೆ ಮಾಡುವ ಪುರುಷರ ಸಂಖ್ಯೆ ಶೇ. 55.9 ರಿಂದ ಇಳಿದು ಶೇ. 51.6 ಆಗಿದೆ. ಗ್ರಾಮೀಣ ಭಾಗದಲ್ಲಿ ಇದೆ ಸಂಖ್ಯೆ ಶೇ. 58.8 ಯಿಂದ ಇಳಿದು ಶೇ. 54.1 ಆಗಿದೆ. ನಗರ ಪ್ರದೇಶದಲ್ಲಿನ ಪುರುಷರಲ್ಲಿ ತಂಬಾಕು ಸೇವನೆ ಪ್ರಮಾಣ ಸಹ ಇಳಿಕೆ ಆಗಿದ್ದು, ಈ ಸಂಖ್ಯೆ ಶೇ. 45.3 ರಿಂದ ಇಳಿದು ಶೇ. 40.5 ಆಗಿದೆ.