ಸೂಚನೆ ಕೇಳಲು ಸಂಕೇತಸ್ಥಳವನ್ನು ಆರಂಭಿಸುವುದಾಗಿ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾರವರ ಘೋಷಣೆ
ಆಸಾಮ ಸರಕಾರದ ಅಭಿನಂದನಾರ್ಹ ನಿರ್ಣಯ ! ಪ್ರತಿಯೊಂದು ರಾಜ್ಯ ಹಾಗೂ ಕೇಂದ್ರ ಸರಕಾರವೂ ಈ ದೃಷ್ಟಿಯಿಂದ ಪ್ರಯತ್ನಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !
ಗೌಹಾತ್ತಿ (ಆಸಾಮ) – ಹೆಸರಿನಲ್ಲಿ ಬಹಳ ಸಂಗತಿಗಳು ಇರುತ್ತವೆ. ಪ್ರತಿಯೊಂದು ನಗರ, ಶಹರ ಮತ್ತು ಊರುಗಳ ಹೆಸರು, ಅವುಗಳ ಸಂಸ್ಕೃತಿ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸಬೇಕು. ನಾವು ಸಂಪೂರ್ಣ ಆಸಾಮ ರಾಜ್ಯದಲ್ಲಿ ಇಂತಹ ಜಾಗಗಳ ಹೆಸರುಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ಸೂಚನೆ ನೀಡಲು ಒಂದು ಸಂಕೇತಸ್ಥಳವನ್ನು ಆರಂಭಿಸುತ್ತಿದ್ದೇವೆ. ಈ ಮೂಲಕ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ವಿರುದ್ಧ ಇರುವ ಅಥವಾ ಜಾತಿ ಮತ್ತು ಸಮಾಜಕ್ಕೆ ಅಪಮಾನ ಮಾಡುವ ಹೆಸರುಗಳನ್ನು ಬದಲಾಯಿಸಲಾಗುವುದು, ಎಂದು ಆಸಾಮಿನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾರವರು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಅವರು ರಾಜ್ಯದಲ್ಲಿನ ವಿವಿಧ ಕಡೆಗಳಲ್ಲಿನ ಹೆಸರು ಬದಲಾಯಿಸಲಾಗುವುದು ಎಂದು ಘೋಷಿಸಿದರು.
THERE’S MUCH IN A NAME
Name of a city, town or village should represent its culture, tradition & civilisation.
We shall launch a portal to invite suggestions on change of names across Assam which are contrary to our civilisation, culture & derogatory to any caste or community.
— Himanta Biswa Sarma (@himantabiswa) February 16, 2022
ಈ ಹಿಂದೆಯೂ ಸರಮಾರವರು ಈ ವಿಷಯದಲ್ಲಿ ಹೇಳಿಕೆ ನೀಡಿದ್ದರು. ಆಗ ‘ಕಾಲಾಪಹಾಡ’ನ ಉದಾಹರಣೆಯನ್ನು ನೀಡಿದ್ದರು. ಕಾಲಾಪಹಾಡ ಓರ್ವ ಮತಾಂಧ ಶಾಸಕನಾಗಿದ್ದನು. ‘ಕಾಲಾಪಹಾಡನು ಪ್ರಸಿದ್ಧ ಕಾಮಾಕ್ಯ ದೇವಸ್ಥಾನ ವನ್ನು ಧ್ವಂಸಗೊಳಿಸಿದ್ದನು. ಆದುದರಿಂದ ಯಾವುದೇ ಜಾಗದ ಹೆಸರು ಕಾಲಾಪಹಾಡ ಎಂದು ಇರಲು ಸಾಧ್ಯವಿಲ್ಲ. ಜನರು ಸೂಚಿಸಿದ ನಂತರ ಈ ಹೆಸರನ್ನು ಬದಲಾಯಿಸಲಾಗುವುದು, ಎಂದು ಅವರು ಹೇಳಿದ್ದರು.