ಹುಲಿ ಚರ್ಮದ ಕಳ್ಳ ಸಾಗಾಣಿಕೆ ಮಾಡುವ ಪ್ರಕರಣದಲ್ಲಿ ಬಂಧಿಸಲಾಗಿದ್ದ ಆರೋಪಿಯ ಖುಲಾಸೆ

ಚರ್ಮ ಹುಲಿಯದಾಗಿರದೇ, ನಾಯಿಯ ಚರ್ಮ ಎಂದು ಬಹಿರಂಗ

ಚರ್ಮ ಹುಲಿಯದ್ದಾಗಿರಲಿ ಅಥವಾ ನಾಯಿದು, ಎಂಬುದು ಪೊಲೀಸರು ಆರೋಪಿಯನ್ನು ಬಂಧಿಸುವ ಸಮಯದಲ್ಲಿ ತಿಳಿಯಲಿಲ್ಲವೆ ಅಥವಾ ನಂತರ ಅದರಲ್ಲಿ ತನ್ನಿಂದ ತಾನೆ ಬದಲಾವಣೆ ಆಯಿತೇ ? ಇದು ಒಂದು ಒಗಟವೆ ಸರಿ !

ಛಿಂದವಾಡಾ (ಮಧ್ಯಪ್ರದೇಶ) – ಹುಲಿಯ ಚರ್ಮದ ಕಳ್ಳ ಸಾಗಾಣಿಕೆ ಮಾಡುವ ಪ್ರಕರಣದಲ್ಲಿ ಬಂಧಿಸಿರುವ ೪ ಜನರನ್ನು ಇಲ್ಲಿಯ ನ್ಯಾಯಾಲಯದಲ್ಲಿ ಖುಲಾಸೆಗೊಳಿಸಿದೆ. ಅದು ಹುಲಿಯಲ್ಲ ನಾಯಿಯ ಚರ್ಮ ಇರುವುದು ಎಂದು ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು. ಛಿಂದವಾಡಾ ಜಿಲ್ಲೆಯಲ್ಲಿ ಜುಲೈ ೨೨, ೨೦೧೭ ದಿನದಂದು ಈ ಘಟನೆ ನಡೆದಿತ್ತು. ‘ಸ್ಕೂಲ್ ಆಫ್ ವೈಲ್ಡ್ ಲೈಫ್ ಫಾರೆಂಸಿಕ್ ಅಂಡ್ ಹೆಲ್ಪ್’ ಸಂಸ್ಥೆಯ ಮೂಲಕ ವಶಪಡಿಸಿಕೊಂಡಿರುವ ಚರ್ಮಗಳ ವರದಿಯನ್ನು ಪ್ರಸ್ತುತಪಡಿಸಲಾಯಿತು. ಈ ವರದಿಯಲ್ಲಿ ಚರ್ಮ ಹುಲಿಯದಲ್ಲದೆ ನಾಯಿಯ ಚರ್ಮ ಆಗಿದೆ ಎಂದು ಹೇಳಲಾಗಿದೆ.