ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಮುಸ್ಲಿಂ ವಿದ್ಯಾರ್ಥಿನಿಯರು !
ಬೆಂಗಳೂರು – ನಾವು ಕೇವಲ ಕರ್ನಾಟಕ ಸರಕಾರದ ಆದೇಶಕ್ಕೆ ಸವಾಲು ಹಾಕಿಲ್ಲ, ಆದರೆ ಸಮವಸ್ತ್ರದ ಬಣ್ಣದ ಹಿಜಾಬ್ ಧರಿಸಲು ಅನುಮತಿ ನೀಡಬೇಕೆಂದು, ಸಕಾರಾತ್ಮಕ ಆದೇಶ ನೀಡುಲು ವಿನಂತಿಸುತ್ತಿದ್ದೇವೆ, ಎಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ. ನ್ಯಾಯಾಲಯದಲ್ಲಿ ಈ ವಿಷಯವಾಗಿ ದಾಖಲಿಸಲಾಗಿರುವ ಅರ್ಜಿಯ ವಿಚಾರಣೆಯ ಸಮಯದಲ್ಲಿ ಅವರು ಈ ಬೇಡಿಕೆ ಮಾಡಿದರು. ಉಡುಪಿಯಲ್ಲಿ ಸರಕಾರಿ ಕನಿಷ್ಠ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ಹೆಣ್ಣುಮಕ್ಕಳು ಈ ಅರ್ಜಿಯನ್ನು ದಾಖಲಿಸಿದ್ದಾರೆ.
Hijab Controversy: ಹಿಜಾಬ್ ವಿವಾದಕ್ಕೆ ಹೊಸ ತಿರುವು, ಸ್ಕೂಲ್ ಡ್ರೆಸ್ ಬಣ್ಣದ ಹೆಡ್ ಸ್ಕಾರ್ಫ್ ಧರಿಸಲು ಅನುಮತಿ ಕೋರಿದ ವಿದ್ಯಾರ್ಥಿನೀಯರು#HijabControversy #KarnatakaHijabControversy #Article25OfConstitution #KarnatakaHighCourt #Hijab #ConstitutionalRight #ZeeKannadaNewshttps://t.co/mWjDvA6axF
— Zee Kannada News (@ZeeKannadaNews) February 14, 2022