ಬುರ್ಖಾ ಮತ್ತು ಹಿಜಾಬ ಇವು ಮುಸಲ್ಮಾನ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಅಪಮಾನಗಳ ಪ್ರತೀಕವಾಗಿದೆ ! – ತಸ್ಲೀಮಾ ನಸರೀನ

ಬಾಂಗ್ಲಾದೇಶಿ ಲೇಖಕಿಯಾದ ತಸ್ಲೀಮಾ ನಸರೀನ

ನವದೆಹಲಿ – ಬುರ್ಖಾದಿಂದ ತಮ್ಮನ್ನು ಮುಚ್ಚಿಕೊಳ್ಳುವುದನ್ನು ನಾನು ಅಧಿಕಾರವೆಂದು ತಿಳಿಯುವುದಿಲ್ಲ, ಬದಲಾಗಿ ಅದು ಸ್ತ್ರೀಯರ ಮೇಲಿನ ಅತ್ಯಾಚಾರಗಳ ಪ್ರತೀಕವಾಗಿದೆ. ಬುರ್ಖಾ ಮತ್ತು ಹಿಜಾಬ (ಮುಸಲ್ಮಾನ ಮಹಿಳೆಯರ ಕುತ್ತಿಗೆ ಮತ್ತು ತಲೆಯನ್ನು ಮುಚ್ಚುವ ಬಟ್ಟೆ) ಗಳ ಏಕೈಕ ಉದ್ದೇಶವು ‘ಮಹಿಳೆಯರನ್ನು ಲೈಂಗಿಕ ವಸ್ತು’ವನ್ನಾಗಿಸುದೇ ಆಗಿದೆ. ಈ ಬಟ್ಟೆಯ ತುಂಡುಗಳು ಮುಸಲ್ಮಾನ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಅಪಮಾನಗಳ ಪ್ರತೀಕವಾಗಿದೆ. ಸ್ತ್ರೀಯರಿಗೆ ಸ್ತ್ರೀಯರನ್ನು ನೋಡುತ್ತಲೇ ಜೊಲ್ಲು ಸುರಿಸುವ ಪುರುಷರಿಂದ ತಮ್ಮನ್ನು ಅಡಗಿಸಿಕೊಳ್ಳಬೇಕಾಗುತ್ತದೆ, ಈ ವಸ್ತುಸ್ಥಿತಿಯು ಸ್ತ್ರೀ-ಪುರುಷರಿಗೆ ಗೌರವ ನೀಡುವಂತಹದ್ದಲ್ಲ, ಎಂಬ ಅಭಿಪ್ರಾಯವನ್ನು ಬಾಂಗ್ಲಾದೇಶಿ ಲೇಖಕಿಯಾದ ತಸ್ಲೀಮಾ ನಸರೀನರವರು ‘ದಿ ಪ್ರಿಂಟ್‌’ ಎಂಬ ವಾರ್ತಾ ಸಂಕೇತಸ್ಥಳದಲ್ಲಿ ಪ್ರಸಿದ್ಧಗೊಳಿಸಲಾದ ಲೇಖನದಲ್ಲಿ ವ್ಯಕ್ತಪಡಿಸಿದ್ದಾರೆ.

ತಸ್ಲೀಮಾ ನಸರೀನರವರು ತಮ್ಮ ಲೇಖನದಲ್ಲಿ ಮಂಡಿಸಿದ ಅಂಶಗಳು

೧. ಓರ್ವ ಮಹಿಳೆಗೆ ಹಿಜಾಬ ಧರಿಸಲು ಬಾಧ್ಯಳಾಗಿಸುವಾಗ ನಾನು ಹಿಜಾಬನ್ನು ಎಸೆಯುವ ಪಕ್ಷದಲ್ಲಿರುತ್ತೇನೆ. ವೈಯಕ್ತಿಕವಾಗಿ ನಾನು ಬುರ್ಖಾ ಮತ್ತು ಹಿಜಾಬಗಳ ವಿರೋಧಿಯಾಗಿದ್ದೇನೆ. ನನಗೆ ‘ಮಹಿಳೆಯರಿಗೆ ಬುರ್ಖಾ ಧರಿಸಲು ಬಾಧ್ಯಳನ್ನಾಗಿಸುವವರು ಪಿತೃಶಾಹಿಗಳಾಗಿದ್ದಾರೆ’, ಎಂದು ಅನಿಸುತ್ತದೆ.

೨. ಹಿಜಾಬಿನ ವಿಷಯದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ತಡೆಯಲು ಸಮಾನ ನಾಗರೀಕ ಕಾನೂನು ಮತ್ತು ಒಂದೇ ರೀತಿಯ ಸಮವಸ್ತ್ರವು ಆವಶ್ಯಕವಾಗಿದೆ. ಧರ್ಮದ ಅಧಿಕಾರವು ಶಿಕ್ಷಣದ ಅಧಿಕಾರಕ್ಕಿಂತಲೂ ಶ್ರೇಷ್ಠವಲ್ಲ.

೩. ಬುರ್ಖಾ ಮತ್ತು ಹಿಜಾಬ ಇವು ಸ್ತ್ರೀಯ ಆಯ್ಕೆಯಾಗಿರಲು ಸಾಧ್ಯವೇ ಇಲ್ಲ. ಆಯ್ಕೆ ಮಾಡಿದ ನಂತರವೇ ಅದನ್ನು ಧರಿಸಬೇಕಾಗುತ್ತದೆ. ರಾಜಕೀಯ ಇಸ್ಲಾಮಿನಂತೆಯೇ ಬುರ್ಖಾ ಮತ್ತು ಹಿಜಾಬ ಕೂಡ ರಾಜಕೀಯವಾಗಿದೆ. ಕುಟುಂಬದಲ್ಲಿನ ಜನರು ಮಹಿಳೆಯರಿಗೆ ಬುರ್ಖಾ ಮತ್ತು ಹಿಜಾಬ ಧರಿಸಲು ಒತ್ತಾಯಿಸುತ್ತಾರೆ. ಇದು ಚಿಕ್ಕಂದಿನಿಂದ ಸತತವಾಗಿ ತಲೆಕೆಡಿಸಿರುವ ಪರಿಣಾಮವಾಗಿದೆ. ಬುರ್ಖಾ ಮತ್ತು ಹಿಜಾಬಗಳಂತಹ ಧಾರ್ಮಿಕ ವಸ್ತ್ರಗಳು ಎಂದಿಗೂ ವ್ಯಕ್ತಿಯ ಪರಿಚಯವಾಗಲಾರವು.

೪. ವಿಭಜನೆಯ ೭೪ ವರ್ಷಗಳ ನಂತರವೂ ಹಿಂದೂ ಮತ್ತು ಮುಸಲ್ಮಾನರ ನಡುವಿನ ಅಂತರವು ಕಡಿಮೆಯಾಗಿಲ್ಲ. ಪಾಕಿಸ್ತಾನವು ಭಾರತದಿಂದ ಬೇರ‍್ಪಟ್ಟು ‘ಧಾರ್ಮಿಕ ರಾಷ್ಟ್ರ’ವಾಗಿದೆ. ಆದರೆ ಭಾರತಕ್ಕೆ ಎಂದಿಗೂ ಪಾಕಿಸ್ತಾನದಂತೆ ಆಗಲಿಕ್ಕಿರಲಿಲ್ಲ. ಅದು ೭೪ ವರ್ಷಗಳ ಹಿಂದೆಯೇ ‘ಹಿಂದೂ ರಾಜ್ಯ’ವಾಗಬಹುದಾಗಿತ್ತು. ಭಾರತೀಯ ಸಂವಿಧಾನವು ಜಾತ್ಯಾತೀತತೆಯನ್ನು ಸಮರ್ಥಿಸುತ್ತದೆಯೇ ಹೊರತು ಧರ್ಮವನ್ನಲ್ಲ. ಹಿಂದೂಗಳು ಬಹುಸಂಖ್ಯಾತರಾಗಿರುವ ಭಾರತವು ಜಗತ್ತಿನಲ್ಲಿ ಮುಸಲ್ಮಾನ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತದ ಕಾನೂನು ಎಲ್ಲ ಧರ್ಮ, ಜಾತಿ, ಭಾಷೆ, ಪಂಥ ಮತ್ತು ಸಂಸ್ಕೃತಿಯಲ್ಲಿನ ಜನರಿಗೆ ಸಮಾನ ಅಧಿಕಾರ ನೀಡುತ್ತದೆ.