ಕರ್ನಾಟಕದ ಕೆಲವು ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ನಮಾಜುಪಠಣ !

* ಕರ್ನಾಟಕ ಭಾರತದಲ್ಲಿದೆಯೇ ಪಾಕಿಸ್ತಾನದಲ್ಲಿದೆಯೇ ? ಈ ವಿದ್ಯಾರ್ಥಿಗಳು ಶಾಲೆಗೆ ಶಿಕ್ಷಣಕ್ಕಾಗಿ ಬರುತ್ತಾರೋ ಅಥವಾ ಧಾರ್ಮಿಕ ಚಟುವಟಿಕೆಗಳಿಗಾಗಿ ಬರುತ್ತಾರೋ ? ಈ ರೀತಿ ಶಾಲೆಯ ನಿಯಮಗಳನ್ನು ಉಲ್ಲಂಘಿಸಿ ವರ್ತಿಸುವವರನ್ನು ಶಾಲೆಯಿಂದ ಹೊರಗಟ್ಟಬೇಕು !

* ಶಾಲೆಗಳಲ್ಲಿ ಭಗವದ್ಗೀತೆ ಕಲಿಸಿ `ಶಿಕ್ಷಣ ಕೇಸರಿಕರಣವಾಗುತ್ತಿದೆ’ ಎಂದು ಗೋಗರೆಯುತ್ತಿರುವವರು ಈಗ ಶಾಲೆಗಳಲ್ಲಿ ನಮಾಜುಪಠಣ ಮಾಡಿದ ಮೇಲೂ `ಶಿಕ್ಷಣವನ್ನು ಇಸ್ಲಾಮೀಕರಣಗೊಳಿಸಲಾಗುತ್ತಿದೆ’ ಎನ್ನುತ್ತಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು !

ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ನಮಾಜು ಪಠಣ ಮಾಡುತ್ತಿರುವುದು

ಬಾಗಲಕೋಟೆ – ಕರ್ನಾಟಕ ರಾಜ್ಯದಲ್ಲಿ ಹಿಜಾಬ್ ವಿಷಯ ಕಾವೇರಿರುವಾಗಲೇ ಇದೀಗ ರಾಜ್ಯದ ಕೆಲವು ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ನಮಾಜು ಪಠಣ ಮಾಡುತ್ತಿರುವ ವಿಡಿಯೋ ಪ್ರಸಾರವಾಗುತ್ತಿದೆ. ಕೆಲವು ವಾರ್ತಾವಾಹಿನಿಗಳೂ ಈ ಬಗ್ಗೆ ವಾರ್ತೆ ಪ್ರಸಾರ ಮಾಡಿವೆ.

ಬಾಗಲಕೋಟೆಯ ಶಾಲೆಯೊಂದರಲ್ಲಿ 6 ಮುಸ್ಲಿಂ ವಿದ್ಯಾರ್ಥಿಗಳು ತರಗತಿಯಲ್ಲಿ ಪ್ರಾರ್ಥನೆ ಮಾಡುತ್ತಿರುವ ವಿಡಿಯೋವೊಂದು ಹರಿದಾಡುತ್ತಿದೆ. ಶಾಲೆಯು ಅನುಮತಿ ನೀಡದಿದ್ದಾಗ ನಮಾಜು ಪಠಣ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು `ಸಿ.ಎನ್.ಎನ್. ನ್ಯೂಸ್ 18‘ನ ವೀಡಿಯೋ ಪ್ರಸಾರವಾಗಿದೆ.

ಕಡಬ (ಮಂಗಳೂರು) ದ ಶಾಲೆಯಲ್ಲಿ ಶುಕ್ರವಾರ ನಮಾಜುಪಠಣಕ್ಕಾಗಿ ಸ್ಥಳೀಯ ಮಸೀದಿಗೆ ತೆರಳಲು ಅವಕಾಶ ನೀಡುವಂತೆ ಮುಸ್ಲಿಂ ವಿದ್ಯಾರ್ಥಿಗಳಿಂದ ಆಗ್ರಹ. ಮಂಗಳೂರಿನ ಕಡಬ ತಾಲೂಕಿನ ಅನಕತ್ತಡ್ಕದ ಸರಕಾರಿ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ತರಗತಿಯಲ್ಲಿ ನಮಾಜುಪಠಣ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೋ ಫೆಬ್ರವರಿ 4 ರದ್ದಾಗಿದೆ ಎಂದು ಹೇಳಲಾಗುತ್ತಿದೆ. ಇದಾದ ಬಳಿಕ ಸ್ಥಳೀಯರು ನಮಾಜು ಪಠಣಕ್ಕೆ ವಿರೋಧಿಸಲು ಆರಂಭಿಸಿದ್ದಾರೆ. ಇದರಿಂದ ರಾಜ್ಯ ಶಿಕ್ಷಣ ಇಲಾಖೆಯು ಶಾಲೆಗೆ ತೆರಳಿ ಮಾಹಿತಿ ಪಡೆದುಕೊಂಡಿದೆ. ಕೆಲವು ಮುಸ್ಲಿಂ ವಿದ್ಯಾರ್ಥಿಗಳು ಶಾಲೆಯ ಆಡಳಿತವು `ಶುಕ್ರವಾರದಂದು ನಮಾಜು ಪಠಣಕ್ಕಾಗಿ ಸ್ಥಳೀಯ ಮಸೀದಿಗೆ ಹೋಗಲು ಅವಕಾಶ ಮಾಡಿಕೊಡಿ’, ಎಂದು ಒತ್ತಾಯಿಸಿದ್ದಾರೆ.

(ಸೌಜನ್ಯ: Republic World )