ಬುರ್ಖಾ ಧರಿಸದಿದ್ದರೆ ಎಮ್. ಐ. ಎಮ್. ನವರು ಮುಸ್ಕಾನ ಖಾನಳ ಮೇಲೆ ಆಕ್ರಮಣ ಮಾಡುವರು, ಆಗ ಈಗ ಬೆಂಬಲ ನೀಡುವವರು ಆಗಲೂ ಅವರನ್ನು ಬೆಂಬಲಿಸುವರೇ ? – ತಸ್ಲೀಮಾ ನಸರೀನ, ಬಾಂಗ್ಲಾದೇಶಿ ಲೇಖಕಿ

ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸರೀನ

ನವದೆಹಲಿ – ಮುಸ್ಕಾನ ಖಾನಳು ಬುರ್ಖಾ ಧರಿಸದಿರುವಾಗ ಎಮ್. ಐ. ಎಮ್‍ನ ಗೂಂಡಾಗಳು ಆಕೆಯ ಮೇಲೆ ಆಕ್ರಮಣ ಮಾಡಿದರೆ ? ಈಗ ಆಕೆಗೆ ಬೆಂಬಲ ನೀಡುವ ಜನರು ಆಗಲೂ ಬೆಂಬಲಿಸುವರೇ ? ಎಂಬಂತಹ ಪ್ರಶ್ನೆಯನ್ನು ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸರೀನರವರು ಟ್ವೀಟ್ ಮಾಡಿ ಕೇಳಿದ್ದಾರೆ. ಕರ್ನಾಟಕದಲ್ಲಿನ ಹಿಜಾಬ್ ಪ್ರಕರಣದಲ್ಲಿ ಒಂದು ಮಹಾವಿದ್ಯಾಲಯದ ಹೊರಗೆ ಮುಸ್ಕಾನ ಖಾನ ಬುರ್ಖಾ ಧರಿಸಿ ತಲುಪಿದಾಗ ಅಲ್ಲಿ ಹಿಜಾಬನ್ನು ವಿರೋಧಿಸುವ ಹಿಂದೂ ವಿದ್ಯಾರ್ಥಿಗಳು ಮುಸ್ಕಾನಳನ್ನು ನೋಡಿ `ಜಯ ಶ್ರೀರಾಮ’ ಎಂಬ ಘೋಷಣೆ ನೀಡಿದರು. ಆಗ ಒಬ್ಬಳೇ ಇದ್ದ ಮುಸ್ಕಾನಳು ಅವರಿಗೆ ` ಅಲ್ಲಾ ಹು ಅಕ್ಬರ’ (ಅಲ್ಲಾ ಮಹಾನನಿದ್ದಾನೆ) ಎಂಬ ಘೋಷಣೆ ನೀಡುತ್ತ ವಿರೋಧಿಸಿದಳು. ಆದುದರಿಂದ ಮುಸಲ್ಮಾನರು ಆಕೆಯನ್ನು ಹೊಗಳುತ್ತಿದ್ದಾರೆ. ಎಮ್. ಐ. ಎಮ್‍ನ ಅಧ್ಯಕ್ಷ ಹಾಗೂ ಸಂಸದರಾದ ಅಸದುದ್ದೀನ ಓವೈಸಿಯವರೂ ಆಕೆಯನ್ನು ಹೊಗಳಿದ್ದಾರೆ. ತಸ್ಲೀಮಾ ನಸರೀನರವರು ಈ ವಿಷಯದ ಮೇಲೆ ಟ್ವೀಟ್ ಮಾಡಿದ್ದಾರೆ.

ತಸ್ಲೀಮಾ ನಸರೀನರವರು ಇದರ ನಂತರ ಮಾಡಿರುವ ಇತರ ಟ್ವೀಟ್‍ಗಳು

1. `ಹಿಜಾಬ್ ಮಹಿಳೆಯ ಆಯ್ಕೆಯಾಗಿದೆ’, ಎಂದು ಹೇಳುವವರು ನಾಳೆ `4 ಪತ್ನಿಯರಲ್ಲಿ ತಾನು ಒಬ್ಬಳಾಗಿರುವುದೂ ಮಹಿಳೆಯ ಇಷ್ಟವಾಗಿದೆ’ ಎಂದು ಹೇಳುವರು !

ಜನರು `ಬುರ್ಖಾ ಅಥವಾ ಹಿಜಾಬನ್ನು ಧರಿಸುವುದು ಮಹಿಳೆಯರ ಆಯ್ಕೆ(ಚಾಯ್ಸ್)ಯಾಗಿದೆ’ ಎಂದು ಹೇಳುತ್ತಾರೆ, ತಕ್ಷಣವೇ ಅವರು `ಬಹುಪತ್ನಿಯರನ್ನು ಹೊಂದಿರುವ ಪುರುಷನ 4 ಪತ್ನಿಯರ ಪೈಕಿ ಒಬ್ಬಳಾಗಿರುವುದೂ ಮಹಿಳೆಯ ಚಾಯ್ಸ್ ಆಗಿದೆ ಎಂದು ಹೇಳುವರು. ಕೌಟುಂಬಿಕ ಹಿಂಸಾಚಾರಕ್ಕೆ ಬಲಿಯಾಗುವುದು, ಅನೇಕ ಮಕ್ಕಳಿಗೆ ಜನ್ಮ ನೀಡುವುದು ಮತ್ತು ಆಸ್ತಿ ಮತ್ತು ಸಂಪತ್ತಿನಲ್ಲಿ ಭಾಗ ಸಿಗದಿರುವುದು ಇವೂ ಕೂಡ ಮಹಿಳೆಯರ ಚಾಯ್ಸ್ ಆಗಿದೆ, ಎಂದು ನಸರೀನರವರು ವ್ಯಂಗ್ಯವಾಗಿ ಟೀಕಿಸಿದ್ದಾರೆ.

2. ಬುರ್ಖಾ ಮತ್ತು ಹಿಜಾಬ ಧರಿಸಲು ಪಾಲಕರು ಒತ್ತಡ ಹೇರುತ್ತಾರೆ !

ಮುಸಲ್ಮಾನ ಮಹಿಳೆಯರು ಜೀನ್ಸ್ ಧರಿಸುತ್ತಾರೆ, ಏಕೆಂದರೆ ಅವರಿಗೆ ಆಧುನಿಕ ಮಹಿಳೆಯರಂತೆ ಇರಬೇಕಿದೆ. ಮುಸಲ್ಮಾನ ಮಹಿಳೆಯರು ಬುರ್ಖಾ ಮತ್ತು ಹಿಜಾಬನ್ನು ಧರಿಸುತ್ತಾರೆ; ಏಕೆಂದರೆ ಅವರ ಪಾಲಕರು ಮತ್ತು ಸಂಬಂಧಿಕರು ಅವರ ಮೇಲೆ ಒತ್ತಡ ಹೇರುತ್ತಾರೆ ಅಥವಾ ಅದನ್ನು ಧರಿಸಲು ಚಿಕ್ಕಂದಿನಿಂದ ಅವರ ತಲೆ ಕೆಡಿಸಿರುತ್ತಾರೆ.

3. ಬುರ್ಖಾ ಆರಾಮದಾಯಕವಾಗಿದ್ದರೆ ಎಲ್ಲರೂ ಅದನ್ನು ಧರಿಸುತ್ತಿದ್ದರು !

ಬುರ್ಖಾವು ಆರಾಮದಾಯಕ, ಫೆಶನೇಬಲ್, ಇಷ್ಟವಾದ ಹಾಗೂ ಶೋಭೆಯ ವಸ್ತ್ರವಾಗಿದ್ದರೆ ಕೇವಲ ಮುಸಲ್ಮಾನ ಸ್ತ್ರೀಯರು ಮಾತ್ರವಲ್ಲ, ಇತರ ಎಲ್ಲ ಸ್ತ್ರೀ-ಪುರುಷರು ಮತ್ತು ಚಿಕ್ಕ ಮಕ್ಕಳೂ ಧಾರ್ಮಿಕತೆಯನ್ನು ಲೆಕ್ಕಿಸದೇ ಅದನ್ನು ಧರಿಸುತ್ತಿದ್ದರು.