ಹಿಜಾಬ್ ಮಹತ್ವದ ಭಾಗವಾಗಿದೆ ಎಂದು ಇಸ್ಲಾಮಿನಲ್ಲಿ ಎಲ್ಲಿಯೂ ಬರೆದಿಲ್ಲ ! – ಸಂಸದ ಡಾ. ಸುಬ್ರಹ್ಮಣ್ಯಂ ಸ್ವಾಮಿ

ಸಂಸದ ಡಾ. ಸುಬ್ರಹ್ಮಣ್ಯಂ ಸ್ವಾಮಿ

ನವ ದೆಹಲಿ – ಹಿಜಾಬ್ ಅವರ ಮಹತ್ವದ ಭಾಗವಾಗಿದೆ ಎಂದು ಇಸ್ಲಾಮ್‍ನಲ್ಲಿ ಎಲ್ಲಿಯೂ ಬರೆದಿಲ್ಲ. ಹಾಗಾದರೆ ಹಿಜಬ್ ಮಹತ್ವದ ಭಾಗ ಇದ್ದರೆ, ಸಂಸತ್ತಿನಲ್ಲಿ ಸೀರೆ ಧರಿಸಿ ಬರುವ ಮುಸ್ಲಿಂ ಮಹಿಳೆ ಸಂಸದರು ಧರ್ಮಕ್ಕೆ ಅವಮಾನ ಮಾಡುವುದಿಲ್ಲವೇ ?, ಎಂದು ಭಾಜಪದ ಹಿರಿಯ ನಾಯಕ ಮತ್ತು ರಾಜ್ಯಸಭೆಯ ಸಂಸದ ಡಾ. ಸುಬ್ರಹ್ಮಣ್ಯ ಸ್ವಾಮಿಯವರು ಒಂದು ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ.