|
ಉಡುಪಿ – ಇಲ್ಲಿಯ ಕುಂದಾಪೂರದಲ್ಲಿ ಕಳೆದ ಕೆಲವು ದಿನಗಳಿಂದ ವಿಶ್ವವಿದ್ಯಾಲಯದಲ್ಲಿ ಹಿಜಾಬ ಹಾಕಿ ಪ್ರವೇಶಿಸಲು ಅವಕಾಶ ನೀಡುವಂತೆ ಮತಾಂಧ ವಿದ್ಯಾರ್ಥಿನಿಯರು ಬೇಡಿಕೆ ಮಾಡುತ್ತಿದ್ದಾರೆ. ಇಲ್ಲಿ ಸಧ್ಯಕ್ಕೆ ಗೊಂದಲದ ವಾತಾವರಣವಿದೆ. ಅಂತಹದರಲ್ಲಿಯೇ ಭಾಗ್ಯನಗರ(ತೇಲಂಗಾಣಾ)ದಿಂದ ಮತಾಂಧರು ಇಲ್ಲಿಗೆ ಬಂದಿರುವುದು ಕಂಡು ಬಂದಿದೆ. ಇದರಿಂದ ಇಲ್ಲಿಯ ಪರಿಸ್ಥಿತಿ ಸಾಮಾನ್ಯವಾಗುವ ಸಾಧ್ಯತೆ ಇಲ್ಲವೆಂದು ಹೇಳಲಾಗುತ್ತಿದೆ.
ಭಾಗ್ಯನಗರದಿಂದ ಸಲ್ಮಾನ ಹೆಸರಿನ ಯುವಕನ ನೇತೃತ್ವದಲ್ಲಿ ಬಂದಿರುವ ಕೆಲವು ಮತಾಂಧರು ‘ರಾಜ್ಯಸರಕಾರ ಮುಸಲ್ಮಾನರ ಸಂದರ್ಭದಲ್ಲಿ ಬೇಧಭಾವ ಮಾಡುತ್ತಿದೆ’, ಎಂದು ಆರೋಪಿಸಿದ್ದಾರೆ. ‘ಸರಕಾರಿ ಶಾಲೆ-ವಿಶ್ವವಿದ್ಯಾಲಯಗಳು ನಾವು ಕೊಡುತ್ತಿರುವ ತೆರಿಗೆಯ ಹಣದಿಂದ ನಡೆಯುತ್ತಿರುವುದರಿಂದ ನಮ್ಮ ಭಾವನೆಗಳನ್ನು ಗೌರವಿಸಬೇಕು.’ (ಮತಾಂಧರಿಗಿಂತ ಹಿಂದೂಗಳೆ ಹೆಚ್ಚು ತೆರಿಗೆ ನೀಡುತ್ತಾರೆ. ಆದ್ದರಿಂದ ಅವರ ತೆರಿಗೆಯ ಹಣವನ್ನು ಮತಾಂಧರಿಗೆ ವ್ಯಯಿಸುವುದನ್ನು ಸ್ಥಗಿತಗೊಳಿಸಬೇಕೆಂದು ಹಿಂದೂಗಳು ಯಾವಾಗ ಕೇಳುವರು ? – ಸಂಪಾದಕರು) ‘ಹಿಜಾಬ ಹಾಕುವ ಅಧಿಕಾರಕ್ಕಾಗಿ ನಾವು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಲು ಸಿದ್ಧರಿದ್ದೇವೆ’, ಎಂದು ಹೇಳಿದ್ದಾರೆ.