ಭವಿಷ್ಯದಲ್ಲಿ ಭಗವಾ ಧ್ವಜವು ‘ರಾಷ್ಟ್ರ ಧ್ವಜ’ವಾಗಬಹುದು; ಆದರೆ ಸದ್ಯ ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸಬೇಕು ! ? ಕರ್ನಾಟಕದಲ್ಲಿನ ಮಂತ್ರಿ ಈಶ್ವರಪ್ಪ

ಶಿವಮೊಗ್ಗ (ಕರ್ನಾಟಕ) – ಭವಿಷ್ಯದಲ್ಲಿ ಭಗವಾ ಧ್ವಜವು ‘ರಾಷ್ಟ್ರಧ್ವಜ’ವಾಗಬಹುದು; ಆದರೆ ಸದ್ಯ ತ್ರಿವರ್ಣ ಧ್ವಜವು ರಾಷ್ಟ್ರಧ್ವಜವಾಗಿದ್ದು ಎಲ್ಲರೂ ಅದನ್ನು ಗೌರವಿಸಬೇಕು ಎಂಬ ಹೇಳಿಕೆಯನ್ನು ಭಾಜಪದ ಹಿರಿಯ ನೇತಾರರ ಹಾಗೂ ಕರ್ನಾಟಕದ ಗ್ರಾಮೀಣ ವಿಕಾಸ ಮತ್ತು ಪಂಚಾಯತರಾಜ ಮಂತ್ರಿಗಳಾದ ಕೆ. ಎಸ್. ಈಶ್ವರಪ್ಪರವರು ನೀಡಿದ್ದಾರೆ. ಶಿವಮೊಗ್ಗದಲ್ಲಿ ಹಿಜಾಬಿನ ಪ್ರಕರಣದಲ್ಲಿ ಆಂದೋಲನ ಮಾಡುವಾಗ ಒಂದು ಮಹಾವಿದ್ಯಾಲಯದಲ್ಲಿ ಓರ್ವ ಹುಡುಗನು ರಾಷ್ಟ್ರಧ್ವಜವನ್ನು ಹಾರಿಸುತ್ತ ಅದೇ ಕಂಬದ ಮೇಲೆ ಹತ್ತಿ ಅಲ್ಲಿ ಭಗವಾ ಧ್ವಜವನ್ನು ಹಾರಿಸುತ್ತಿರುವ ವಿಡಿಯೋ ಬೆಳಕಿಗೆ ಬಂದಿದೆ. ಈ ವಿಷಯದ ಮೇಲೆ ಈಶ್ವರಪ್ಪಾರವರು ಮಾತನಾಡುತ್ತಿದ್ದರು.

೧. ಈಶ್ವರಪ್ಪಾರವರು ಮುಂದುವರಿದು ‘ನೂರಾರು ವರ್ಷಗಳ ಹಿಂದೆ ಪ್ರಭು ಶ್ರೀರಾಮಚಂದ್ರ ಹಾಗೂ ಮಾರುತಿಯ ರಥಗಳ ಮೇಲೆ ಭಗವಾ ಧ್ವಜವಿತ್ತು. ಆಗ ನಮ್ಮ ದೇಶದಲ್ಲಿ ತ್ರಿವರ್ಣ ಧ್ವಜವಿತ್ತೇ ? ಈಗ ಅದು ನಮ್ಮ ರಾಷ್ಟ್ರಧ್ವಜವೆಂದು ಪರಿಗಣಿಸಲ್ಪಟ್ಟಿದ್ದರಿಂದ ಅದರ ಗೌರವವನ್ನು ಕಾಪಾಡಲೇಬೇಕು, ಇದರಲ್ಲಿ ಬೇರೆ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

೨. ಓರ್ವ ಪತ್ರಕರ್ತನು ‘ಕೆಂಪು ಕೋಟೆಯ ಮೇಲೆ ಭಗವಾ ಧ್ವಜವನ್ನು ಹಾರಿಸಬಹುದೇ ? ಎಂದು ಪ್ರಶ್ನಿಸಿದಾಗ ಈಶ್ವರಪ್ಪಾರವರು ‘ಇಂದು ಆಗದಿದ್ದರೂ ಭವಿಷ್ಯದಲ್ಲಿ ಎಂದಾದರೂ. ಇಂದು ದೇಶದಲ್ಲಿ ‘ಹಿಂದೂ ವಿಚಾರ’ ಮತ್ತು ಹಿಂದುತ್ವ’ದ ಚರ್ಚೆಯಾಗುತ್ತಿದೆ. ನಾವು ‘ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವೆವು’ ಎಂದು ಹೇಳುತ್ತಿದ್ದೆವು, ಆಗ ಜನರು ನಗುತ್ತಿದ್ದರು. ಈಗ ನಾವು ಕಟ್ಟುತ್ತಿದ್ದೇವೆ ಅಲ್ಲವೇ ? ಹಾಗೆಯೇ ಭವಿಷ್ಯದಲ್ಲಿ ಎಂದಾದರೂ ೧೦೦, ೨೦೦ ಅಥವಾ ೫೦೦ ವರ್ಷಗಳ ನಂತರ ಭಗವಾ ಧ್ವಜವು ರಾಷ್ಟ್ರಧ್ವಜವಾಗುವುದು. ಸಂವಿಧಾನದ ದೃಷ್ಟಿಯಲ್ಲಿ ತ್ರಿವರ್ಣ ಧ್ವಜಕ್ಕೆ ರಾಷ್ಟ್ರಧ್ವಜ ಎಂಬ ಮಾನ್ಯತೆ ದೊರೆತಿದೆ, ಅದನ್ನು ಗೌರವಿಸಬೇಕು ಮತ್ತು ಅದನ್ನು ಗೌರವಿಸದಿರುವವರು ದೇಶದ್ರೋಹಿಗಳಾಗಿದ್ದಾರೆ’ ಎಂದು ಹೇಳಿದರು.

೩. ಶಿವಮೊಗ್ಗದಲ್ಲಿನ ಸರಕಾರಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ರಾಷ್ಟ್ರಧ್ವಜವನ್ನು ತೆಗೆದು ಭಗವಾ ಧ್ವಜವನ್ನು ಹಾರಿಸಿದ್ದಾರೆ ಎಂಬ ಹೇಳಿಕೆಯನ್ನು ಕಾಂಗ್ರೆಸ್ಸಿನ ಪ್ರದೇಶಾಧ್ಯಕ್ಷರಾದ ಡಿ. ಕೆ. ಶಿವಕುಮಾರರವರು ನೀಡಿದ್ದರು. ಈ ಬಗ್ಗೆ ಈಶ್ವರಪ್ಪಾರವರು ‘ಶಿವಕುಮಾರರವರ ಹೇಳಿಕೆಯು ಸುಳ್ಳಾಗಿದೆ. ಅವರು ಸುಳ್ಳುಗಾರರಿದ್ದಾರೆ. ಅಲ್ಲಿ ಭಗವಾಧ್ವಜವನ್ನು ಹಾರಿಸಲಾಯಿತು ಆದರೆ ರಾಷ್ಟ್ರಧ್ವಜವನ್ನು ಕೆಳಗಿಳಿಸಲಿಲ್ಲ. ಭಗವಾ ಧ್ವಜವನ್ನು ಎಲ್ಲಿ ಬೇಕಾದರೂ ಹಾರಿಸಬಹುದು; ಆದರೆ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಅಲ್ಲ ಮತ್ತು ಹೀಗೆ ಎಂದಿಗೂ ಆಗುವುದಿಲ್ಲ’ ಎಂದು ಹೇಳಿದರು.