ದಾವಣಗೆರೆ (ಕರ್ನಾಟಕ) ಪೊಲೀಸ ಠಾಣೆಯ ಎದುರು ಮತಾಂಧರಿಂದ ‘ಪಾಕಿಸ್ತಾನ ಜಿಂದಾಬಾದ’ನ ಘೋಷಣೆ

  • ಇಸ್ಲಾಮಿನ ಅವಮಾನ ಮಾಡಿರುವ ಸುಳ್ಳು ಪೊಸ್ಟ್‌ನ ಪ್ರಕರಣ

  • ಮತಾಂಧರಿಂದ ಪೊಲೀಸ ವಾಹನಗಳಿಗೆ ಹಾನಿ !

  • ಕರ್ನಾಟಕದಲ್ಲಿ ಭಾಜಪದ ಸರಕಾರವಿರುವಾಗ ಮತಾಂಧರಿಗೆ ಪೊಲೀಸರ ವಾಹನಗಳ ಮೇಲೆ ಈ ರೀತಿಯಲ್ಲಿ ಆಕ್ರಮಣ ಮಾಡುವ ಮತ್ತು ಪಾಕಿಸ್ತಾನದ ಸಮರ್ಥನೆ ಮಾಡುವ ಘೋಷಣೆಗಳನ್ನು ಕೂಗುವ ಧೈರ್ಯ ಹೇಗೆ ಬರುತ್ತದೆ, ಎಂಬ ಪ್ರಶ್ನೆ ಉಂಟಾಗುತ್ತದೆ !
  • ಇಸ್ಲಾಮಿನ ಕಥಿತ ಅಪಮಾನವನ್ನು ಮತಾಂಧರು ಸಂಘಟಿತರಾಗಿ ವಿರೋಧಿಸುತ್ತಾರೆ, ಆದರೆ ಹಿಂದೂಗಳು ತಮ್ಮ ಧರ್ಮದ ಅಪಮಾನವಾದಾಗ ನಿಷ್ಕ್ರೀಯರಾಗಿರುತ್ತಾರೆ !
ಸಾಂಧರ್ಭಿಕ ಚಿತ್ರ

ದಾವಣಗೆರೆ (ಕರ್ನಾಟಕ) – ದಾವಣಗೆರೆಯಲ್ಲಿನ ಹರಿಹರ ನಗರದಲ್ಲಿ ಪೊಲೀಸ ಠಾಣೆಯ ಎದುರು ಮತಾಂಧರು ಹಿಂಸಾತ್ಮಕ ಆಂದೋಲನಗಳನ್ನು ನಡೆಸಿ ಪೊಲೀಸ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಆ ಸಮಯದಲ್ಲಿ ಅವರು ‘ಪಾಕಿಸ್ತಾನ ಜಿಂದಾಬಾದ’ ಎಂಬ ಘೋಷಣೆಗಳನ್ನು ಕೂಗಿದರು.
ಮಾರುತಿ ಎಂಬ ವ್ಯಕ್ತಿಯು ಸಾಮಾಜಿಕ ಮಾಧ್ಯಮಗಳಿಂದ ಇಸ್ಲಾಮಿನ ಕಥಿತ ಅಪಮಾನ ಮಾಡುವ ಪೊಸ್ಟನ್ನು ಪ್ರಸಾರಿಸಿದ್ದ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿದೆ. ಅವನನ್ನು ಪೊಲೀಸ ಠಾಣೆಗೆ ಕರೆತರುವಾಗ ಮತಾಂಧರು ಪೊಲೀಸ್ ಠಾಣೆಯ ಹೊರಗೆ ಗುಂಪಾಗಿ ‘ಪಾಕಿಸ್ತಾನ ಜಿಂದಾಬಾದ’ ಎಂಬ ಘೋಷಣೆ ನೀಡಲು ಆರಂಭಿಸಿದರು. ಅನಂತರ ಅವರು ಹಿಂಸಾಚಾರಕ್ಕೆ ಮುಂದಾದರು.