ಕರ್ನಾಟಕದ ಮಹಾವಿದ್ಯಾಲಯಗಳಲ್ಲಿ ಹಿಜಾಬ್ ವಿವಾದ ಪ್ರಕರಣ
ಅನೇಕ ಮುಸ್ಲಿಂ ಹೆಣ್ಣುಮಕ್ಕಳು ಪ್ರವಾಸ, ಮಾಲ್‌ಗಳು ಅಥವಾ ಇತರ ಸ್ಥಳಗಳಲ್ಲಿ ಸ್ನೇಹಿತ-ಸ್ನೇಹಿತೆಯರೊಂದಿಗೆ ಮೋಜು ಮಾಡುವಾಗ ಹಿಜಾಬ್ ಧರಿಸುವುದಿಲ್ಲ. ಅನೇಕ ನಟಿಯರು ಅಥವಾ ಕ್ರಿಡಾಪಟುಗಳು ಇದನ್ನು ಧರಿಸುವುದಿಲ್ಲ. ೧೪ ದೇಶಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಲಾಗಿದೆ. ಇಸ್ಲಾಮಿಕ್ ದೇಶವಾದ ಜೋರ್ಡಾನ್‌ನಲ್ಲಿ, ಮೊಹಮ್ಮದ್ ಇವರ ೪೧ ನೇ ವಂಶಜರು ಎಂದು ಕರೆಯಲ್ಪಡುವ ಕುಟುಂಬವಿದೆ. ಆ ಕುಟುಂಬದ ಸ್ತ್ರೀಯರೂ ಹಿಜಾಬ ಹಾಕದಿರುವ ಚಿತ್ರಗಳು ಪ್ರಸಾರವಾಗಿದೆ. ಹೀಗಿರುವಾಗ ಕೇವಲ ಮಹಾವಿದ್ಯಾಲಯಕ್ಕೆ ಹೋಗುವಾಗ ಹಿಜಾಬ್‌ಗಾಗಿ ಏಕೆ ಆಗ್ರಹ ? ತಥಾಕಥಿತ ಪ್ರಗತಿಪರ ಸ್ತ್ರೀವಾದಿಗಳೆಂದು ಕರೆಸಿಕೊಳ್ಳುವವರು ಈ ಬಗ್ಗೆ ಮಾತನಾಡುತ್ತಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! |
ಮುಂಬಯಿ : ಕರ್ನಾಟಕದ ಮಹಾವಿದ್ಯಾಲಯಗಳಲ್ಲಿ ಹಿಜಾಬ್ ಧರಿಸುವ ಬಗ್ಗೆ ವಿವಾದ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ ೮ ರಂದು ಮದನಪುರಾ ಮತ್ತು ಭಿವಂಡಿಯಲ್ಲಿ ಹಿಜಾಬ್‌ಗೆ ಬೆಂಬಲವಾಗಿ ಸಹಿ ಅಭಿಯಾನವನ್ನು ಪ್ರಾರಂಭಿಸಲಾಯಿತು.
ಹಿಜಾಬ್ ಧರಿಸುವ ಹಕ್ಕಿಗಾಗಿ ಹೋರಾಡುತ್ತಿರುವ ಕರ್ನಾಟಕದ ಹೆಣ್ಣುಮಕ್ಕಳಿಗೆ ಬೆಂಬಲ ಸೂಚಿಸಲು ಈ ಅಭಿಯಾನವನ್ನು ಪ್ರಾರಂಭಿಸಲಾಯಿತು. ‘ಹಿಜಾಬ್ ಧರಿಸುವುದು ಸಂವಿಧಾನವು ನೀಡಿರುವ ಹಕ್ಕಾಗಿದೆ. ಈ ವಿಚಾರದಲ್ಲಿ ಅನಗತ್ಯ ವಿವಾದದಿಂದ ನಮಗೂ ನೋವಾಗಿದೆ’, ಎಂದು ಸಮಾಜವಾದಿ ಪಕ್ಷದ ದಕ್ಷಿಣ ಮುಂಬಯಿ ಕ್ಷೇತ್ರದ ಮುಖ್ಯಸ್ಥ ಸೊಹೆಲ್ ಖಾನ್ ಹೇಳಿದ್ದಾರೆ.
According to reports, a signature #campaign in support of #Hijab was carried out by more than 500 women in #Mumbai #HijabRow #HijabBan #HijabIsFundamentalRight https://t.co/LbGvGJXEOg
— Mumbai Live (@MumbaiLiveNews) February 9, 2022
ಈ ಹೆಣ್ಣುಮಕ್ಕಳನ್ನು ಬೆಂಬಲಿಸಲು ಮದನಪುರಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಜಾಬ್ ಧರಿಸಿದ ಮಹಿಳೆಯರು ಜಮಾಯಿಸಿ ಹಿಜಾಬ್ ಧರಿಸುವುದನ್ನು ಬೆಂಬಲಿಸಿ ಧ್ವನಿ ಎತ್ತಿದರು. ಘಟನಾಸ್ಥಳದಲ್ಲಿ ಜಮಾಯಿಸಿದ ೫೦೦ಕ್ಕೂ ಹೆಚ್ಚು ಮಹಿಳೆಯರು ಅಭಿಯಾನದಲ್ಲಿ ಪತ್ರಕ್ಕೆ ಸಹಿ ಹಾಕಿ ಘೋಷಣೆ ಕೂಗಿದರು. (ಎಲ್ಲಿ ಧರ್ಮಕ್ಕಾಗಿ ತಕ್ಷಣವೇ ದೊಡ್ಡ ಸಂಖ್ಯೆಯಲ್ಲಿ ಒಂದಾಗುವ ಮತಾಂಧ ಮಹಿಳೆಯರು ಮತ್ತು ಎಲ್ಲಿ ಹಿಂದೂ ಧರ್ಮದ ರಕ್ಷಣೆಗಾಗಿ ಏನನ್ನೂ ಮಾಡದ ಹಿಂದೂ ಮಹಿಳೆಯರು ? – ಸಂಪಾದಕರು)
‘ಹಿಜಾಬ್ ವಿಷಯಕ್ಕೆ ಪ್ರಾಮುಖ್ಯತೆ ನೀಡಬೇಡಿ !’(ಅಂತೆ) – ದಿಲೀಪ ವಳಸೆ ಪಾಟೀಲ್, ಗೃಹ ಸಚಿವ, ಮಹಾರಾಷ್ಟ್ರ
ಇದನ್ನು ಮಹಾರಾಷ್ಟ್ರದ ಗೃಹ ಸಚಿವರು ಹಿಜಾಬ್ ಧರಿಸುವವರಿಗೆ ಏಕೆ ಹೇಳುವುದಿಲ್ಲ ?
ಮುಂಬಯಿ : ಮಹಾವಿದ್ಯಾಲಯಗಳಲ್ಲಿ ಹಿಜಾಬ್ ಬಗ್ಗೆ ನಡೆಯುತ್ತಿರುವ ವಿವಾದ ಮಹಾರಾಷ್ಟ್ರದಲ್ಲೂ ಪರಿಣಾಮ ಬೀರಿದೆ; ಆದರೆ ಈ ವಿಚಾರಕ್ಕೆ ಮಹತ್ವ ನೀಡಬೇಡಿ ಎಂದು ಗೃಹ ಸಚಿವ ದಿಲೀಪ್ ವಳಸೆ ಪಾಟೀಲ್ ಟ್ವೀಟ್ ಮಾಡುವ ಮೂಲಕ ಮನವಿ ಮಾಡಿದ್ದಾರೆ.
Karnataka hijab row ‘unfortunate’, says Maharashtra HM Dilip Walse Patil@Dwalsepatil @SanjayJog7 #KarnatakaHijabRow #Karnataka https://t.co/c8B6XFhgIy
— Free Press Journal (@fpjindia) February 8, 2022
ಹಿಜಾಬ್ ವಿಚಾರದಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ಕೋಲಾಹಲ ದುರದೃಷ್ಟಕರ. ಶಿಕ್ಷಣಕ್ಷೇತ್ರದಲ್ಲಿ ಇಂತಹ ವಿವಾದಗಳು ಉದ್ಭವಿಸಬಾರದು. ಈ ಸಂಬಂಧ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಧಾರ್ಮಿಕ ಕಟುತ್ವ ಉಂಟುಮಾಡುವ ಹೇಳಿಕೆ ಅಥವಾ ಕೃತ್ಯವನ್ನು ಯಾರೂ ಮಾಡಬಾರದು, ಎಂದು ಅವರು ಹೇಳಿದರು.