‘ಜಮಿಯತ ಉಲೇಮಾ-ಎ-ಹಿಂದ’ ಸಂಸ್ಥೆಯ ಘೋಷಣೆ
|
ಬೆಂಗಳೂರು – ಕರ್ನಾಟಕದ ಮಂಡ್ಯಾ ಜಿಲ್ಲೆಯಲ್ಲಿ ಮ. ಗಾಂಧಿ ಮಹಾವಿಧ್ಯಾಲಯದೊಳಗೆ ಹಿಜಾಬ ಧರಿಸಿ ಪ್ರವೇಶಿಸುವ ಬಗ್ಗೆ ಆಂದೋಲನ ನಡೆಯುತ್ತಿದೆ. ಹಿಂದೂ ವಿದ್ಯಾರ್ಥಿನಿಯರು ಕೂಡ ಕೇಸರೀ ಶಾಲು ಧರಿಸಿ ಪ್ರವೇಶಿಸುವ ಬೇಡಿಕೆ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಫೆಬ್ರುವರಿ ೮ ರಂದು ಕೇಸರಿ ಶಾಲು ಧರಿಸಿ ದೊಡ್ಡ ಸಂಖ್ಯೆಯಲ್ಲಿ ಹಿಂದೂ ವಿದ್ಯಾರ್ಥಿಗಳು ‘ಜಯ ಶ್ರೀರಾಮ’ ಎಂದು ಹೇಳುತ್ತಾ ಬುರಖಾ ಧರಿಸಿಕೊಂಡ ಬಂದ ಓರ್ವ ವಿಧ್ಯಾರ್ಥಿನಿಯನ್ನು ಕಾನೂನುಬದ್ಧ ಮಾರ್ಗದಲ್ಲಿ ವಿರೋಧಿಸಿದರು.
ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದದ ನಡುವೆ ಮಂಡ್ಯದಲ್ಲಿ ಅಲ್ಲಾ ಹು ಅಕ್ಬರ್ ಎಂದು ಹುಡುಗರ ಮುಂದೆ ಕೂಗಿದ ಪಿಇಎಸ್ ಕಾಲೇಜು ವಿದ್ಯಾರ್ಥಿನಿ ಮುಸ್ಕಾನ್ ಖಾನ್ಗೆ ಜಮಾತ್ ಉಲೆಮಾ-ಎ-ಹಿಂದ್ 5 ಲಕ್ಷ ರೂ. ಬಹುಮಾನ ಘೋಷಿಸಿದೆ.#Mandya #Hijab #JamiatUlemaeHind #MuskanKhan #PEScollege pic.twitter.com/gm7o6T5b5u
— oneindiakannada (@OneindiaKannada) February 9, 2022
ಆಗ ಒಂಟಿಯಾಗಿ ವಿದ್ಯಾರ್ಥಿನಿಯು ಅವರನ್ನು ‘ಅಲ್ಲಾ ಹೂ ಅಕಬರ’ (ಅಲ್ಲಾ ಮಹಾನ ಆಗಿದ್ದಾನೆ) ಎಂದು ಹೇಳಿ ವಿರೋಧಿಸಿದಳು. ಅವಳ ಈ ಧೈರ್ಯದಿಂದ ‘ಜಮಿಯತ ಉಲೆಮಾ-ಎ-ಹಿಂದ’ ಸಂಸ್ಥೆಯಿಂದ ಅವಳಿಗೆ ೫ ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದೆ.
ಹಿಜಾಬ್ ಪರ ಒಂಟಿಯಾಗಿ ಹೋರಾಡಿದ ಮುಸ್ಕಾನ್ ..! ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಗೆ 5 ಲಕ್ಷ ಬಹುಮಾನ.. https://t.co/NdmIorC6Zd#Btvnewslive #Btvnews #Btventertainment #Kannada #Kannada_News #ಕನ್ನಡಸುದ್ದಿಗಳು #Kannada_news_Channel #ಕನ್ನಡವಾರ್ತೆ #Mandyastudent #Muskan #Hijab #5lakhprize
— BtvNews (@btvnewslive) February 9, 2022
ಈ ವಿದ್ಯಾರ್ಥಿನಿಯ ಹೆಸರು ಮುಸ್ಕಾನ ಖಾನ ಎಂದಾಗಿದೆ. ಅವಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಈ ಬಹುಮಾನ ನೀಡುತ್ತಿರುವುದಾಗಿ ಈ ಸಂಘಟನೆಯು ಹೇಳಿದೆ.