ಮಧ್ಯಪ್ರದೇಶದ ಶಾಲೆಗಳಲ್ಲಿ ಹಿಜಾಬನ ಮೇಲೆ ನಿರ್ಬಂಧ ಇರಲಿದೆ ! – ಶಿಕ್ಷಣ ಸಚಿವ ಇಂದರಸಿಂಹ ಪರಮಾರ

ಎಲ್ಲಾ ರಾಜ್ಯಗಳೂ ಕೂಡ ಈ ರೀತಿಯ ಕಠಿಣವಾದ ನಿರ್ಧಾರವನ್ನು ಘೋಷಿಸುವುದು ಅಗತ್ಯ !

ಭೋಪಾಲ (ಮಧ್ಯಪ್ರದೇಶ) – ಮಧ್ಯಪ್ರದೇಶದಲ್ಲಿನ ಶಾಲೆಗಳಲ್ಲಿ ಹಿಜಾಬ ಧರಿಸಿ ಬರುವವರ ಮೇಲೆ ನಿರ್ಬಂಧವಿರಲಿದೆ, ಎಂದು ರಾಜ್ಯದ ಶಿಕ್ಷಣಸಚಿವರಾದ ಇಂದರ ಸಿಂಹ ಪರಮಾರರವರು ಮಾಹಿತಿ ನೀಡಿದರು. ಅವರು, ಶಾಲೆಗಳಲ್ಲಿ ಕೇವಲ ಸಮವಸ್ತ್ರವನ್ನಷ್ಟೇ ಧರಿಸುವುದು ಕಡ್ಡಾಯವಾಗಿರಲಿದೆ. ಹಿಜಾಬ ಸಮವಸ್ತ್ರದ ಭಾಗವಾಗಿರುವುದಿಲ್ಲ. ಆದ್ದರಿಂದ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲಾ ಶಾಲೆಗಳನ್ನು ಪರಿಶೀಲಿಸಲಿದೆ ಎಂದು ಹೇಳಿದರು.

ಪರಮಾರರವರು ತಮ್ಮ ಮಾತನ್ನು ಮುಂದುವರೆಸುತ್ತಾ, ಹಿಜಾಬ ಇದು ಒಂದು ವಿಷಯವಾಗಿರದೆ ಸಮವಸ್ತ್ರ ಒಂದು ವಿಷಯವಾಗಿದೆ. ಸಮಾನತೆ ಹಾಗೂ ಶಿಸ್ತಿಗಾಗಿ ಸಮವಸ್ತ್ರವಿದೆ. ಆದ್ದರಿಂದ ಶಾಲೆಗಳಲ್ಲಿ ಒಂದೇ ರೀತಿಯ ಸಮವಸ್ತ್ರ ವಿರಲಿದೆ. ಯಾವ ಸಮುದಾಯವು ಈ ಬಗ್ಗೆ ಮಾತನಾಡುತ್ತಿದೆಯೋ, ಅವರಿಗೆ ಮುಂಬರುವ ಕಾಲದಲ್ಲಿ ಪಶ್ಚಾತ್ತಾಪ ಪಟ್ಟುಕೊಳ್ಳಬೇಕಾಗಲಿರುವುದು. ಹಿಜಾಬ ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಳಸಬಹುದು; ಆದರೆ ಶಾಲೆಗಳಲ್ಲಿ ಅಲ್ಲ ಎಂದು ಹೇಳಿದರು.