ಕೇರಳದ ‘ಮೀಡಿಯಾವನ’ ಎಂಬ ವಾರ್ತಾ ವಾಹಿನಿಯ ಮೇಲೆ ಹೇರಿರುವ ನಿರ್ಬಂಧ ಯೋಗ್ಯ ! – ಕೇರಳ ಉಚ್ಚ ನ್ಯಾಯಾಲಯ

ವಾರ್ತಾ ವಾಹಿನಿಯಲ್ಲಿ ‘ಜಮಾತ-ಎ-ಇಸ್ಲಾಮೀ’ ಸಂಘಟನೆಯ ಸದಸ್ಯರ ಹಣ ಹೂಡಿಕೆ

ತಿರುವನಂತಪುರಮ್ (ಕೇರಳ) – ಕೇರಳದ ‘ಮೀಡಿಯಾವನ’ ಎಂಬ ವಾರ್ತಾ ವಾಹಿನಿಯ ಮೇಲೆ ಹೇರಿರುವ ನಿರ್ಬಂಧ ಯೋಗ್ಯವಾಗಿದೆ, ಎಂದು ಕೇರಳ ಉಚ್ಚ ನ್ಯಾಯಾಲಯವು ಹೇಳಿದೆ. ಆ ವಾಹಿನಿಯನ್ನು ‘ಮಾಧ್ಯಮಮ ಬ್ರಾಡಕ್ಯಾಸ್ಟಿಂಗ ಲಿಮಿಟೆಡ’ ಎಂಬ ಕಂಪನಿಯು ನಡೆಸುತ್ತಿತ್ತು. ಕೇಂದ್ರ ಸರಕಾರವು ‘ಮೀಡಿಯಾವನ’ ವಾಹಿನಿಯ ಪರವಾನಗಿಯನ್ನು ರದ್ದು ಪಡಿಸಿತ್ತು. ಅದನ್ನು ವಿರೋಧಿಸಿ ಆ ವಾಹಿನಿಯು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ‘ಮಾಧ್ಯಮಮ ಬ್ರಾಡಕ್ಯಾಸ್ಟಿಂಗ ಲಿಮಿಟೆಡ’ ಎಂಬ ಕಂಪನಿಯಲ್ಲಿ ‘ಜಮಾತ-ಎ-ಇಸ್ಲಾಮೀ’ ಎಂಬ ಇಸ್ಲಾಮಿಕ ಸಂಘಟನೆಯ ಸದಸ್ಯರು ಹಣ ಹೂಡಿದ್ದಾರೆ. ಗುಪ್ತಚರ ಸಂಸ್ಥೆಯು ನೀಡಿರುವ ಮಾಹಿತಿಯ ಆಧಾರದ ಮೇಲೆ ಕೇಂದ್ರ ಸರಕಾರವು ಅದರ ಮೇಲೆ ನಿರ್ಬಂಧ ಹೇರಿದೆ. ಜನವರಿ ೩೧ ರಿಂದ ವಾಹಿನಿಯ ಪ್ರಸಾರಣವು ನಿಂತು ಹೋಗಿದೆ.