‘ಪ್ರಸಾದ’ಕ್ಕೆ ಬೇಡವೆಂದು ಹೇಳುವುದು ಹೇಗೆ ?’ ಎಂದು ಹೇಳಿ ಲಂಚಗುಳಿತನಕ್ಕೆ ಬೆಂಬಲ !
ಇಂತಹ ನಾಚಿಕೆಯಿಲ್ಲದ ಲಂಚಕೋರರಿಗೆ ಮರಣದಂಡನೆ ವಿಧಿಸಿದರೆ ಮಾತ್ರ ದೇಶದಲ್ಲಿ ಭ್ರಷ್ಟಾಚಾರ ಕಡಿಮೆಯಾಗುತ್ತದೆ !
ಜೈಪುರ (ರಾಜಸ್ಥಾನ) – ಭೂ ವ್ಯವಹಾರಕ್ಕಾಗಿ ಒಂಬತ್ತುವರೆ ಲಕ್ಷ ರೂಪಾಯಿ ಲಂಚ ಕೇಳಿದ್ದಕ್ಕಾಗಿ ಜೈಪುರ ಅಭಿವೃದ್ಧಿ ಪ್ರಾಧಿಕಾರದ ಉಪಆಯುಕ್ತ ಮಮತಾ ಯಾದವ್ ಅವರನ್ನು ಬಂಧಿಸಲಾಗಿದೆ. ಯಾದವ್ ಇವರನ್ನು ಬಂಧಿಸುತ್ತಿರುವಾಗ ಮಾಧ್ಯಮದವರೂ ಮುಗಿಬಿದ್ದರು. ಆ ಸಮಯದಲ್ಲಿ ಯಾದವ್ ನಾಚಿಕೆಯಿಲ್ಲದೆ ನಗುತ್ತಾ ಕುರ್ಚಿಯಲ್ಲಿ ಕುಳಿತಿದ್ದರು. ಯಾದವ್ ಅವರ ಛಾಯಾಚಿತ್ರಗಳನ್ನು ತೆಗೆಯುವಾಗ, ‘ಯಾರಾದರೂ ‘ಪ್ರಸಾದ’ ಅರ್ಪಿಸಲು ಬರುತ್ತಿದ್ದರೆ, ಅದಕ್ಕೆ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ’ ಎಂದು ಹೇಳಿದರು, ಈ ಪ್ರಕರಣದಲ್ಲಿ ಒಟ್ಟು ೫ ಜನರನ್ನು ಬಂಧಿಸಲಾಗಿದೆ.