Exclusive | ಶೈಕ್ಷಣಿಕ ಕ್ಷೇತ್ರ ‘ಜಾತ್ಯತೀತ’ವಾಗಿರುವುದರಿಂದ ಇರುವುದರಿಂದ ನಿಯಮಗಳನ್ನು ಪಾಲಿಸುವಾಗ ರಾಜಿ ಮಾಡಿಕೊಳ್ಳುವುದು ಅಯೋಗ್ಯವಾಗಿದೆ ! – ಪ್ರಾ. ಕೆ.ಜಿ. ಸುರೇಶ, ಕುಲಗುರು, ಮಾಖನಲಾಲ ಚತುರ್ವೇದಿ ರಾಷ್ಟ್ರೀಯ ವಿಶ್ವವಿದ್ಯಾಲಯ, ಭೋಪಾಲ

#YesToUniform_NoToHijab

ಭೋಪಾಲ (ಮಧ್ಯಪ್ರದೇಶ), ಫೆಬ್ರುವರಿ ೮ (ವಾರ್ತೆ.) – ಶಾಲೆ, ಪೋಲಿಸ ದಳ, ಸೈನ್ಯದಳ ಮತ್ತು ಅರೇ ಸೇನಾ ಪಡೆ ಇದರಲ್ಲಿ ಶಿಸ್ತು ಮಹತ್ವದ್ದಾಗಿರುತ್ತದೆ. ಅದರ ಪ್ರಮಾಣಿತ ಸಮವಸ್ತ್ರ ಇದು ಒಂದು ಶಿಸ್ತಿನ ಭಾಗವೇ ಆಗಿದೆ. ಮತ್ತು ಅದರ ಪಾವಿತ್ರ್ಯ ಜೋಪಾನ ಮಾಡಬೇಕು.

ಯಾರದಾದರೂ ವೈಯಕ್ತಿಕ, ಸಾಮಾಜಿಕ ಅಥವಾ ಧಾರ್ಮಿಕ ಜೀವನದಲ್ಲಿ ಅವರ ಉಡುಗೆ ತೊಡಿಗೆಯ ಬಗ್ಗೆ ಸರಕಾರಕ್ಕೆ ಏನು ಹೇಳುವಂತದ್ದು ಇಲ್ಲ; ಆದರೆ ಶೈಕ್ಷಣಿಕ ಮತ್ತು ಸರಕಾರಿ ಸಂಸ್ಥೆಗಳು ಜಾತ್ಯತೀತ ಕ್ಷೇತ್ರಗಳಾಗಿವೆ ಮತ್ತು ಅಲ್ಲಿ ನಿಯಮಗಳ ಪಾಲನೆ ಮಾಡುವಾಗ ಅಧಾರ್ಮಿಕ ವೃತ್ತಿಯೊಂದಿಗೆ ರಾಜೀ ಮಾಡಿಕೊಳ್ಳುವುದು ಅಯೋಗ್ಯವಾಗಿದೆ. ಎಂದು ಭೋಪಾಲದ ಖ್ಯಾತ ‘ಮಾಖನಲಾಲ ಚತುರ್ವೆದಿ ರಾಷ್ಟ್ರೀಯ ವಿಶ್ವವಿದ್ಯಾಲಯ’ದ ಕುಲಗುರು ಪ್ರಾ. ಕೆ.ಜಿ. ಸುರೇಶ ಇವರು ಅಭಿಪ್ರಾಯ ವ್ಯಕ್ತಪಡಿಸಿದರು.

‘ಸನಾತನ ಪ್ರಭಾತ’ ನಿಯತಕಾಲಿಕೆಯ ಪ್ರತಿನಿಧಿಯು ಅವರನ್ನು ಭೇಟಿ ಮಾಡಿದಾಗ ಅವರು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದರು. ಉಡುಪಿಯ ಶಾಲೆಯಲ್ಲಿ ವಿದ್ಯಾರ್ಥಿನಿಯರು ‘ಹಿಜಾಬ್’ ಹಾಕಿಕೊಂಡು ಬಂದಿದ್ದರಿಂದ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಈ ವಿಷಯವಾಗಿ ಮಾತನಾಡುವಾಗ ಕೆ.ಜಿ. ಸುರೇಶ ಇವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

YouTube ನಲ್ಲಿ ವಿಡಿಯೋವನ್ನು ವೀಕ್ಷಿಸಲು ಕ್ಲಿಕ್ ಮಾಡಿ : https://youtu.be/xx_p2pa4t0U

`ಸನಾತನ ಪ್ರಭಾತ’ನ YouTube Channel ಗೆ Subscribe ಆಗಿ : 

https://www.youtube.com/c/SanatanPrabhatOfficial