ಇಂದೂರ (ಮಧ್ಯಪ್ರದೇಶ) ಇಲ್ಲಿ ಲತಾ ಮಂಗೇಶ್ಕರರವರ ಸ್ಮರಣೆಯಲ್ಲಿ ಸಂಗೀತ ಅಕಾದಮಿ, ಸಂಗೀತ ವಿದ್ಯಾಪೀಠ ಹಾಗೂ ಸಂಗೀತ ಸಂಗ್ರಹಾಲಯವನ್ನು ಸ್ಥಾಪಿಸಲಾಗುವುದು !

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾನರವರ ಘೋಷಣೆ

ಭೋಪಾಲ (ಮಧ್ಯಪ್ರದೇಶ) – ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾನರವರು ಲತಾ ಮಂಗೇಶ್ಕರರವಿಗೆ ಶ್ರದ್ಧಾಂಜಲೀ ಅರ್ಪಿಸುವಾಗ ಅವರ ಸ್ಮರಣಾರ್ಥ ವೃಕ್ಷೋರೋಪಣೆ ಮಾಡಿದರು. ಲತಾ ಮಂಗೇಶ್ಕರರವರು ಇಂದೂರಿನಲ್ಲಿ ಜನಿಸಿದ್ದರು. ಆ ಹಿನ್ನಲೆಯಲ್ಲಿ ಅವರ ನೆನಪಿನಲ್ಲಿ ಇಂದೂರಿನಲ್ಲಿ ಸಂಗೀತ ಅಕಾದಮಿ, ಸಂಗೀತ ವಿದ್ಯಾಪೀಠ ಹಾಗೂ ಸಂಗೀತ ಸಂಗ್ರಹಾಲಯವನ್ನು ಸ್ಥಾಪಿಸಲಾಗುವುದು ಹಾಗೂ ಅವರ ಪುತ್ತಳಿಯನ್ನು ಸ್ಥಾಪಿಸಲಾಗುವುದೆಂದು ಮುಖ್ಯಮಂತ್ರಿ ಚೌಹಾನರವರು ಘೋಷಿಸಿದ್ದಾರೆ. ‘ಸಂಗೀತ ವಿದ್ಯಾಪೀಠದಲ್ಲಿ ಮಕ್ಕಳು ಸಂಗೀತದ ಅಭ್ಯಾಸ ಮಾಡಬಹುದು ಹಾಗೂ ಲತಾಜಿಯವರ ಹಾಡುಗಳೆಲ್ಲವೂ ಸಂಗ್ರಹಾಲಯದಲ್ಲಿ ಲಭ್ಯವಿರಲಿದೆ’, ಎಂದು ಕೂಡ ಅವರು ಹೇಳಿದರು.

ರಾಜ್ಯಸಭೆಯಲ್ಲಿ ಲತಾ ಮಂಗೇಶ್ಕರರವರಿಗೆ ಶ್ರದ್ಧಾಂಜಲಿ

ನವ ದೆಹಲಿ – ಭಾರತರತ್ನ ಲತಾ ಮಂಗೇಶ್ಕರರವರಿಗೆ ಸಂಸತ್ತಿನಲ್ಲಿ ನಡೆಯುತ್ತಿರುವ ಆರ್ಥಿಕ ಮುಂಗಡ ಪತ್ರದ ಅಧಿವೇಶನದಲ್ಲಿ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.

ರಾಜ್ಯಸಭೆಯಲ್ಲಿ ರಾಜ್ಯಸಭೆಯ ಸಭಾಪತಿ ಹಾಗೂ ಉಪರಾಷ್ಟ್ರಪತಿಗಳಾದ ವ್ಯಂಕಯ್ಯ ನಾಯ್ಡು ಹಾಗೂ ಸಭಾಗೃಹದಲ್ಲಿನ ಎಲ್ಲಾ ಸದಸ್ಯರೂ ಕೂಡ ೧ ನಿಮಿಷ ಮೌನ ಪಾಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ನೇಪಾಳದ ರಾಷ್ಟ್ರಪತಿಗಳಿಂದ ಶ್ರದ್ಧಾಂಜಲಿ

ಕಾಠಮಾಂಡೂ (ನೇಪಾಳ) – ನೇಪಾಳದ ರಾಷ್ಟ್ರಪತಿ ಬಿದ್ಯಾದೇವೀ ಭಂಡಾರೀಯವರು ನೇಪಾಳಿ ಜನತೆಯ ವತಿಯಿಂದ ಲತಾ ಮಂಗೇಶ್ಕರವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಅವರು, ‘ಹಲವಾರೂ ನೇಪಾಳಿ ಹಾಡುಗಳನ್ನು ತಮ್ಮ ಸುಮಧುರ ಧ್ವನಿಯಿಂದ ಅಲಂಕರಿಸುವ ಪ್ರಸಿದ್ಧ ಭಾರತೀಯ ಗಾಯಕಿ ಲತಾ ಮಂಗೇಶ್ಕರರವರ ನಿಧನದ ಸುದ್ಧಿಯಿಂದ ದುಃಖವಾಯಿತು. ಅದ್ಭುತ ಪ್ರತಿಭೆಯುಳ್ಳ ಸ್ವರ್ಗೀಯ ಲತಾ ಮಂಗೇಶ್ಕರರವರಿಗೆ ನಾನು ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇನೆ.’ ಎಂದು ಹೇಳಿದರು.