ಭೋಜ ಉತ್ಸವ ಸಮಿತಿ ಮತ್ತು ಹಿಂದೂ ಜಾಗರಣ ವೇದಿಕೆವತಿಯಿಂದ ಕಾರ್ಯಕ್ರಮಗಳ ಆಯೋಜನೆ
ಧಾರ(ಮಧ್ಯಪ್ರದೇಶ) – ವಸಂತ ಪಂಚಮಿಯ ನಿಮಿತ್ತದಿಂದ ಭೋಜ ಉತ್ಸವ ಸಮಿತಿ ಮತ್ತು ಹಿಂದೂ ಜಾಗರಣ ವೇದಿಕೆಯ ವತಿಯಿಂದ ಭೋಜಶಾಲಾದಲ್ಲಿ ಫೆಬ್ರುವರಿ 5 ರಿಂದ ಆರಂಭವಾದ ಕಾರ್ಯಕ್ರಮ ಫೆಬ್ರುವರಿ 8 ರ ವರೆಗೆ ಜರುಗಲಿದೆ. ಕಾರ್ಯಕ್ರಮದ ಸ್ಥಳದಲ್ಲಿ ಜಿಲ್ಲಾಡಳಿತದಿಂದ ಬೃಹತ್ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ, ಎಂದು ಸ್ಥಳೀಯ ಜಿಲ್ಲಾ ದಂಡಾಧಿಕಾರಿಗಳ ಕಚೇರಿಯಿಂದ ಮಾಹಿತಿಯನ್ನು ಪ್ರಕಟಿಸಿದೆ.
#Dhar: Devotees throng Bhojshala as four-day Basant Panchami festival beginshttps://t.co/fqWyD4txNv
— Free Press Journal (@fpjindia) February 5, 2022
ವಸಂತ ಪಂಚಮಿಯ ನಿಮಿತ್ತ ಭೋಜಶಾಲಾದಲ್ಲಿ ಶ್ರೀ ಸರಸ್ವತಿದೇವಿಯ ಜನ್ಮೋತ್ಸವವನ್ನು ಉತ್ಸಾಹದಲ್ಲಿ ಆಚರಿಸಲಾಗುತ್ತದೆ. ಈ ನಿಮಿತ್ತ ಭೋಜ ಉತ್ಸವ ಸಮಿತಿಯ ವತಿಯಿಂದ ಸಂರಕ್ಷಿಸಲ್ಪಟ್ಟ ಸ್ಮಾರಕ ಭೋಜಶಾಲಾ ಮತ್ತು ಮೋತಿಬಾಗ ಚೌಕದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.
6 ಫೆಬ್ರುವರಿ : ಈ ದಿನದಂದು ಮಧ್ಯಾಹ್ನ 2 ಗಂಟೆ 30 ನಿಮಿಷದಿಂದ ಭೋಜಶಾಲಾದಲ್ಲಿ ಮಾತೃಶಕ್ತಿ ಸಮ್ಮೇಳನವನ್ನು ಆಯೋಜಿಸಲಾಗಿದೆ. ರಾತ್ರಿ 8 ಗಂಟೆಗೆ ಮೋತಿಬಾಗ ಚೌಕದಲ್ಲಿ ಶ್ರೀ ಬಾಬಾ ಖಾಟುಶ್ಯಾಮಜಿಯವರ `ಭಜನ ಸಂಧ್ಯಾ’ ಇಡಲಾಗಿದೆ.
7 ಫೆಬ್ರುವರಿ : ಈ ದಿನದಂದು ಮಧ್ಯಾಹ್ನ 1 ಗಂಟೆಗೆ ಸಂವಾದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ತದನಂತರ ರಾತ್ರಿ 9 ಗಂಟೆಗೆ ಮೋತಿಬಾಗ ಚೌಕದಲ್ಲಿ `ಅಖಿಲ ಭಾರತೀಯ ವಿರಾಟ ಕವಿ ಸಮ್ಮೇಳನ’ ಜರುಗಲಿದೆ.
8 ಫೆಬ್ರುವರಿ : ಈ ದಿನದಂದು ಬೆಳಿಗ್ಗೆ 8 ಗಂಟೆ 55 ನಿಮಿಷಕ್ಕೆ ಭೋಜಶಾಲಾದಲ್ಲಿ ನಿಯಮಿತ ಸತ್ಯಾಗ್ರಹ ಜರುಗಲಿದೆ ಮತ್ತು ತದನಂತರ ಬೆಳಿಗ್ಗೆ 10 ಗಂಟೆಗೆ ಅಖಂಡ ಸಂಕಲ್ಪ ಜ್ಯೋತಿ ಮಂದಿರದಲ್ಲಿ ಕನ್ಯಾಪೂಜೆ ಮತ್ತು ಕನ್ಯಾಭೋಜನ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.