‘ಶ್ರೀ ಸರಸ್ವತಿ ದೇವಿಯು ಎಲ್ಲರಿಗೂ ಜ್ಞಾನ ನೀಡುತ್ತಾಳೆ, ಭೇದಭಾವ ಮಾಡುವುದಿಲ್ಲ !’ – ಕಾಂಗ್ರೆಸ್ಸಿನ ನೇತಾರ ರಾಹುಲ ಗಾಂಧಿ

ಕರ್ನಾಟಕದ ಮಹಾವಿದ್ಯಾಲಯಗಳಲ್ಲಿನ ‘ಹಿಜಾಬಿ’ನ ಪ್ರಕರಣ

* ವಸಂತ ಪಂಚಮಿಯಂದು ಮಧ್ಯಪ್ರದೇಶದಲ್ಲಿನ ಧಾರದಲ್ಲಿರುವ ಭೋಜಶಾಲೆಯಲ್ಲಿನ ಶ್ರೀ ಸರಸ್ವತಿ ದೇವಿಯ ಪೂಜೆಗೆ ಕಾಂಗ್ರೆಸ್‌ ಸರಕಾರವು ನಿರಾಕರಿಸುತ್ತಿತ್ತು, ಆಗ ರಾಹುಲ ಗಾಂಧಿಯವರಿಗೆ ದೇವಿಯು ಏಕೆ ನೆನಪಾಗುತ್ತಿರಲಿಲ್ಲ ?- ಸಂಪಾದಕರು 

* ಮುಸಲ್ಮಾನರ ಪರ ವಹಿಸುವಾಗ ರಾಹುಲ ಗಾಂಧಿಯವರಿಗೆ ಸುಲಭವಾಗಿ ಹಿಂದೂ ದೇವತೆಗಳ ನೆನಪಾಗುತ್ತದೆ, ಎಂಬುದನ್ನು ಗಮನದಲ್ಲಿಡಿ !- ಸಂಪಾದಕರು 

* ಪಂಜಾಬಿನಲ್ಲಿ ಹಿಂದೂ ನೇತಾರರ ಬದಲು ನೇತಾರರ ಬದಲು ಸಿಖ್ಖ ನೇತಾರರನ್ನು ಮುಖ್ಯಮಂತ್ರಿ ಪದವಿಗೆ ಅಭ್ಯರ್ಥಿಯಾಗಿ ಘೋಷಿಸಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಧರ್ಮದ ಆಧಾರದಲ್ಲಿ ಭೇದಭಾವ ಮಾಡುತ್ತದೆ, ಈ ವಿಷಯದಲ್ಲಿ ರಾಹುಲ ಗಾಂಧಿಯವರು ಏಕೆ ಏನನ್ನೂ ಹೇಳುವುದಿಲ್ಲ ?- ಸಂಪಾದಕರು 

ನವದೆಹಲಿ – ‘ವಿದ್ಯಾರ್ಥಿನಿಯರ ಹಿಜಾಬನ್ನು ಅವರ ಶಿಕ್ಷಣಕ್ಕೆ ಅಡ್ಡಿಯಾಗಿಸಿ ತಾವು ಭಾರತದಲ್ಲಿನ ಮಕ್ಕಳ ಭವಿಷ್ಯವನ್ನು ಕೆಡಿಸುತ್ತಿದ್ದೀರಿ. ಶ್ರೀ ಸರಸ್ವತಿ ದೇವಿಯು ಎಲ್ಲರಿಗೂ ಜ್ಞಾನ ನೀಡುತ್ತಾಳೆ, ಭೇದಭಾವ ಮಾಡುವುದಿಲ್ಲ’, ಎಂದು ಟ್ವೀಟ್ ಮಾಡಿ ರಾಹುಲ ಗಾಂಧಿಯವರು ಕರ್ನಾಟಕದಲ್ಲಿನ ಸರಕಾರಿ ಮಹಾವಿದ್ಯಾಲಯಗಳಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರಿಗೆ ಹಿಜಾಬ ಧರಿಸಿ ಮಹಾವಿದ್ಯಾಲಯದಲ್ಲಿ ಪ್ರವೇಶ ನೀಡುವ ಬಗ್ಗೆ ಸಮರ್ಥಿಸಿದ್ದಾರೆ. ಕರ್ನಾಟಕದಲ್ಲಿನ ಉಡುಪಿ, ಕುಂದಾಪುರದಲ್ಲಿನ ಸರಕಾರಿ ಮಹಾವಿದ್ಯಾಲಯಗಳಲ್ಲಿ ಹಿಜಾಬ ಧರಿಸಿ ಬರುವವರ ಮೆಲೆ ನಿರ್ಬಂಧ ಹೇರಲಾಗಿದೆ. ಹಿಂದೂ ವಿದ್ಯಾರ್ಥಿನಿಯರೂ ತಮಗೆ ಭಗವಾ ಶಾಲನ್ನು ಧರಿಸಿ ಬರುವ ಅನುಮತಿ ನೀಡಬೇಕು’, ಎಂದು ಮನವಿ ಮಾಡಿದ್ದಾರೆ. ಕೆಲವು ಮಹಾವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರು ಭಗವಾ ಶಾಲನು ಧರಿಸಿ ಬರುತ್ತಿದ್ದಾರೆ.

ಕರ್ನಾಟಕದಲ್ಲಿನ ಕಾಂಗ್ರೆಸ್‌ ನೇತಾರ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರವರು ‘ಇದು ಈ ಹುಡುಗಿಯರನ್ನು ಶಿಕ್ಷಣದಿಂದ ವಂಚಿಸುವ ಪ್ರಯತ್ನವಾಗಿದೆ’ ಎಂದು ಹೇಳಿದ್ದಾರೆ. (ಮುಸಲ್ಮಾನರ ಓಲೈಕೆಗಾಗಿ ಶಾಲೆ ಮತ್ತು ಮಹಾವಿದ್ಯಾಲಯಗಳ ಶಿಸ್ತನ್ನು ಮೂಲೆಗಟ್ಟುವ ಬೇಡಿಕೆಯನ್ನು ಸಮರ್ಥಿಸುವ ಕಾಂಗ್ರೆಸ್‌ ನೇತಾರರು ! – ಸಂಪಾದಕರು)

ತುಂಡುಡುಗೆ ಮತ್ತು ಹಿಜಾಬ ಧರಿಸುವ ಹುಡುಗಿಯರ ಮೇಲೆ ನಿರ್ಬಂಧ ಹೇರುವವರಿಗೆ ಯಾವ ಸಂಸ್ಕೃತಿ ಅನ್ವಯವಾಗುತ್ತದೆ ? – ಜಿತೇಂದ್ರ ಆಹ್ವಾಡ

* ಶಾಲೆ ಮತ್ತು ಮಹಾವಿದ್ಯಾಲಯದಲ್ಲಿ ಸಮವಸ್ತ್ರ ಧರಿಸಿ ಬರುವುದು ಅಪೇಕ್ಷಿತವಿದೆ. ಹಾಗೆ ಮಾಡದೇ ಪ್ರತಿಯೊಬ್ಬರೂ ಧಾರ್ಮಿಕ ವೇಷಭೂಷಣಗಳನ್ನು ಧರಿಸಿ ಹೋಗಲು ಆರಂಭಿಸಿದರೆ ಅದು ಆ ಶಾಲೆಯ ಶಿಸ್ತನ್ನು ಭಂಗಗೊಳಿಸುತ್ತದೆ, ಎಂಬುದು ಜಿತೇಂದ್ರ ಆಹ್ವಾಡರವರಿಗೆ ತಿಳಿದಿಲ್ಲ, ಎಂದು ಹೇಗೆ ಹೇಳಬಹುದು ?- ಸಂಪಾದಕರು

ಮಹಾರಾಷ್ಟ್ರ ಸರಕಾರದ ಮಂತ್ರಿ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ಸಿನ ನೇತಾರ ಜಿತೇಂದ್ರ ಆಹ್ವಾಡ

ಮಹಾರಾಷ್ಟ್ರ ಸರಕಾರದ ಮಂತ್ರಿ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ಸಿನ ನೇತಾರ ಜಿತೇಂದ್ರ ಆಹ್ವಾಡರವರು ‘ತುಂಡುಡುಗೆಯನ್ನು ಧರಿಸಿದ ಅಥವಾ ‘ಫೆಶನೇಬಲ್‌’ ಹರಿದ ಜೀನ್ಸ ಧರಿಸಿದ ಹುಡುಗಿಯರು ಇವರಿಗೆ ಆಗುವುದಿಲ್ಲ. ಮೈ ತುಂಬ ಬಟ್ಟೆಯನ್ನು ಧರಿಸುವ, ತಲೆಯ ಮೇಲೂ ಹಿಜಾಬ ಧರಿಸುವ ಹುಡುಗಿಯರ ಮೇಲೆ ಮಹಾವಿದ್ಯಾಲಯಗಳಲ್ಲಿ ನಿರ್ಬಂಧ ಹೇರುತ್ತಾರೆ. ಇವರಿಗೆ ಇಷ್ಟವಿರುವ ಸಂಸ್ಕೃತಿ ಯಾವುದು ? ಎಂಬ ಪ್ರಶ್ನೆ ಕೇಳಿದ್ದಾರೆ. ಭಾಜಪವು ‘ಬೇಟಿ ಬಚಾವೊ, ಬೇಟಿ ಪಢಾವೊ’ ಎಂದು ಹೇಳುತ್ತದೆ; ಆದರೆ ಆಕೆ ಮುಸಲ್ಮಾನಳಾಗಿದ್ದರೆ ಬೇಟಿ ಹಟಾವೊ ಎಂದು ಅವರು ಟೀಕೆ ಮಾಡಿದ್ದಾರೆ.