ಒರಿಸ್ಸಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಸೂಚನೆ
ಸ್ವಾತಂತ್ರ್ಯ ಪಡೆದು ೭೪ ವರ್ಷಗಳಾದರೂ ಕೂಡ ಇನ್ನೂ ಈ ಪದಗಳನ್ನೇ ಬಳಸುತ್ತಿರುವುದು, ಇಲ್ಲಿಯವರೆಗಿನ ಎಲ್ಲ ಪಕ್ಷದ ಆಡಳಿತಗಾರರಿಗೆ ಲಜ್ಜಾಸ್ಪದ ! ಇನ್ನಾದರೂ ಆಡಳಿತಗಾರರು ಈ ಪದಗಳನ್ನು ಶಾಶ್ವತವಾಗಿ ತೆಗೆದುಹಾಕಲು ಹಾಗೂ ನ್ಯಾಯಾಲಯದಲ್ಲಿನ ನ್ಯಾಯವಾದಿಗಳು ಮತ್ತು ನ್ಯಾಯಾಧೀಶರ ಉಡುಪುಗಳನ್ನು ಬದಲಾಯಿಸಿ ಭಾರತೀಯ ಉಡುಪುಗನ್ನಾಗಿ ಮಾಡಲು ಪ್ರಯತ್ನಿಸಬೇಕು !
ಭುವನೇಶ್ವರ (ಒರಿಸ್ಸಾ) – ಒರಿಸ್ಸಾ ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ‘ಮಾಯ ಲಾರ್ಡ’ (ಸ್ವಾಮಿ ಅಥವಾ ‘ಸರ’), ‘ಯೋರ ಲಾರ್ಡಶಿಪ (ಪ್ರಭುತ್ವವಿರುವ ವ್ಯಕ್ತಿಗೆ ನಮನ), ‘ಯೋರ ಆನರ’ (ಗೌರವಾನ್ವಿಕ ವ್ಯಕ್ತಿಗೆ ನಮನ), ‘ಆನರೆಬಲ’ (ಗೌರವಾನ್ವಿತ) ಈ ರೀತಿಯ ಪದಗಳನ್ನು ಬಳಸಬೇಡಿ, ಎಂದು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಎಸ್. ಮುರಳೀಧರರವರು ನ್ಯಾಯವಾದಿಗಳಿಗೆ ಸೂಚನೆ ನೀಡಿದ್ದಾರೆ. ಈ ಪದಗಳ ಬದಲು ‘ಸರ’ ಅಥವಾ ಇತರ ಪರ್ಯಾಯ ಪದಗಳನ್ನು ಬಳಸಬಹುದು, ಎಂದು ಕೂಡ ನ್ಯಾಯಾಧೀಶರು ಹೇಳಿದರು. ಈ ರೀತಿಯ ನಿಯಮವಿಲ್ಲದೆ ಇರುವುದರಿಂದ ನ್ಯಾಯಾಲಯವು ನೇರವಾಗಿ ಆದೇಶ ನೀಡಲು ಸಾಧ್ಯವಿಲ್ಲದ್ದರಿಂದ ಅದನ್ನು ಸೂಚನೆಯ ಮಟ್ಟದಲ್ಲಿ ನೋಡಲಾಗುತ್ತಿದೆ.
Avoid Addressing Us As ‘My Lord’, ‘Your Lordship’, ‘Your Honour’, Etc: Orissa HC Chief Justice Led Bench Urges Advocates https://t.co/lCjI2OqOrv
— Live Law (@LiveLawIndia) January 4, 2022
೧. ಈ ಹಿಂದೆ ೨೦೨೦ರಲ್ಲಿ ಸರ್ವೋಚ್ಚ ನ್ಯಾಯಾಲಯದ ಆಗಿನ ಮುಖ್ಯ ನ್ಯಾಯಾಧೀಶರಾದ ಶರದ ಬೊಬಡೆಯವರು ಓರ್ವ ನ್ಯಾಯಾಧೀಶರನ್ನು ‘ಯೋರ ಆನರ’ ಎಂಬ ಶಬ್ಧವನ್ನು ಬಳಸುವುದರಿಂದ ತಡೆದಿದ್ದರು. ‘ನೀವು ಅಮೇರಿಕಾದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿವಾದ ಮಾಡುತ್ತಿರುವಿರೇನು ? ‘ಯೋರ ಆನರ’ನ ಪದದ ಬಳಕೆ ಅಲ್ಲಿನ ಸರ್ವೋಚ್ಚ ನ್ಯಾಯಾಲಯದಲ್ಲಗುತ್ತದೆ, ಭಾರತದಲ್ಲಿ ಅಲ್ಲ,’ ಎಂದು ಮುಖ್ಯನ್ಯಾಯಾಧೀಶರಾದ ಬೊಬಡೆಯವರು ಹೇಳಿದ್ದರು.
೨. ೨೦೨೦ ರಲ್ಲಿ ಕೊಲಕಾತಾ ಉಚ್ಚ ನ್ಯಾಯಾಲಯದ ಆಗಿನ ಮುಖ್ಯ ನ್ಯಾಯಾಧೀಶರಾದ ಥೊಟ್ಟಾಥಿಲ ಬಿ. ನಾಯರ ರಾಧಾಕೃಷ್ಣನ್‌ರವರು ಬಂಗಾಲ ಹಾಗೂ ಅಂದಮಾನ ಮತ್ತು ನಿಕೋಬಾರನಲ್ಲಿನ ನ್ಯಾಯಾಲಯದ ಅಧಿಕಾರಿಗಳಿಗೆ ಹಾಗೂ ನ್ಯಾಯವಾದಿಗಳಿಗೆ ‘ಮಾಯ ಲಾರ್ಡ’ ಅಥವಾ ‘ಲಾರ್ಡಶಿಪ’ ನ ಬದಲು ‘ಸರ’ ಎಂದು ಹೇಳಲು ಕರೆ ನೀಡಿದ್ದರು.